iPhone ಕಳ್ಳಿ! ನೋಡಿ ನೋಡಿ ಹೆಂಗೆ ಐಫೋನ್-13 ಕದಿಯುತ್ತಾಳೆ ಅಂತಾ -VIDEO

Published : Aug 04, 2026, 04:48 PM IST
iphone

ಸಾರಾಂಶ

ಕೊಯಮತ್ತೂರಿನ ಮೊಬೈಲ್ ಅಂಗಡಿಯೊಂದರಲ್ಲಿ, ಗ್ರಾಹಕಿಯಂತೆ ನಟಿಸಿದ ಯುವತಿಯೊಬ್ಬಳು ಸಿಬ್ಬಂದಿಯ ಗಮನ ಬೇರೆಡೆ ಸೆಳೆದು ಐಫೋನ್ 13 ಅನ್ನು ಕದ್ದಿದ್ದಾಳೆ. ಈಕೆಯ ಚಾಲಾಕಿ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೊಲೀಸರು ದೂರಿನ ಆಧಾರದ ಮೇಲೆ ತನಿಖೆ ನಡೆಸುತ್ತಿದ್ದಾರೆ.

ಕೊಯಮತ್ತೂರು: ಬೆಲೆಬಾಳುವ ಐಫೋನ್ ಖರೀದಿಸುವ ಗ್ರಾಹಕಿಯಂತೆ ನಟಿಸಿ ಕಣ್ತಪ್ಪಿಸಿ ಫೋನ್ ಕದ್ದ ಯುವತಿಯ ಚಾಲಾಕಿ ಕೃತ್ಯ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ. ಅಂಗಡಿ ಸಿಬ್ಬಂದಿಯ ಗಮನ ಬೇರೆಡೆ ಸೆಳೆದು ಐಫೋನ್ 13 ಅನ್ನು ತನ್ನ ಬ್ಯಾಗ್‌ಗೆ ಹಾಕಿಕೊಂಡು ಪರಾರಿಯಾಗಿರುವ ಈಕೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನಡೆದಿದ್ದೇನು?

ಕೊಯಮತ್ತೂರು ಜಿಲ್ಲೆಯ ಗಾಂಧಿಪುರಂ ಸಿಟಿ ಬಸ್ ನಿಲ್ದಾಣದ ಸಮೀಪವಿರುವ ಖಾಸಗಿ ಮೊಬೈಲ್ ಫೋನ್ ಮಳಿಗೆಗೆ ಯುವತಿಯೊಬ್ಬಳು ಬಂದಿದ್ದಾಳೆ. ತನಗೆ ಹೊಸ ಮೊಬೈಲ್ ಬೇಕೆಂದು ಹೇಳಿ ವಿವಿಧ ಮಾಡೆಲ್‌ಗಳನ್ನು ತೋರಿಸುವಂತೆ ಸಿಬ್ಬಂದಿಯನ್ನು ಕೇಳಿದ್ದಾಳೆ. ಸಿಬ್ಬಂದಿ ಕೂಡ ಆಕೆಯನ್ನು ನಂಬಿ ಒಂದೊಂದಾಗಿ ಫೋನ್‌ಗಳನ್ನು ಹೊರತೆಗೆದು ಟೇಬಲ್ ಮೇಲೆ ಇಟ್ಟು ತೋರಿಸುತ್ತಿದ್ದರು.

ಸಿಬ್ಬಂದಿಯ ಗಮನ ಬೇರೆಡೆ ಸೆಳೆದು ಕೃತ್ಯ

ಫೋನ್‌ಗಳನ್ನು ಪರಿಶೀಲಿಸುವಂತೆ ನಟಿಸಿದ ಯುವತಿ, ಮತ್ತೊಂದು ಮಾಡೆಲ್ ತೋರಿಸುವಂತೆ ಸಿಬ್ಬಂದಿಗೆ ಹೇಳಿದ್ದಾಳೆ. ಸಿಬ್ಬಂದಿ ಮತ್ತೊಂದು ಫೋನ್ ತರಲು ಹಿಂದೆ ತಿರುಗಿದ ಕ್ಷಣವನ್ನೇ ಕಾಯುತ್ತಿದ್ದ ಈಕೆ, ಟೇಬಲ್ ಮೇಲಿದ್ದ ಐಫೋನ್ 13 ಅನ್ನು ಕ್ಷಣಾರ್ಧದಲ್ಲಿ ತನ್ನ ಬ್ಯಾಗ್‌ಗೆ ಹಾಕಿಕೊಂಡಿದ್ದಾಳೆ. ನಂತರ ಏನೂ ತಿಳಿಯದವಳಂತೆ ಮಾತನಾಡಿದ ಆಕೆ, ಫೋನ್ ಇಷ್ಟವಾಗಲಿಲ್ಲ ಎಂದು ಹೇಳಿ ಅಲ್ಲಿಂದ ಹೊರಟು ಹೋಗಿದ್ದಾಳೆ.

ಸಿಸಿಟಿವಿಯಲ್ಲಿ ಬಯಲಾದ ಅಸಲಿ ಆಟ

ಸ್ವಲ್ಪ ಸಮಯದ ನಂತರ ಸಿಬ್ಬಂದಿ ಟೇಬಲ್ ಮೇಲಿದ್ದ ಫೋನ್‌ಗಳನ್ನು ವಾಪಸ್ ಜೋಡಿಸುವಾಗ ಒಂದು ಐಫೋನ್ ನಾಪತ್ತೆಯಾಗಿರುವುದು ಕಂಡುಬಂದಿದೆ. ತಕ್ಷಣ ಮಳಿಗೆಯ ಮಾಲೀಕರು ಸಿಸಿಟಿವಿ ಫೂಟೇಜ್ ಪರಿಶೀಲಿಸಿದಾಗ ಯುವತಿಯ ಕೈಚಳಕ ಬಯಲಾಗಿದೆ. ಆಕೆ ಅತ್ಯಂತ ಚಾಣಾಕ್ಷತನದಿಂದ ಫೋನ್ ಅನ್ನು ಬ್ಯಾಗ್‌ಗೆ ಹಾಕಿಕೊಳ್ಳುತ್ತಿರುವುದು ವೀಡಿಯೋದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಮಳಿಗೆಯ ಮಾಲೀಕರು ಸಿಸಿಟಿವಿ ದೃಶ್ಯಾವಳಿಗಳೊಂದಿಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವೀಡಿಯೋ ಆಧಾರದ ಮೇಲೆ ಯುವತಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ. ಈ ಘಟನೆಯ ವೀಡಿಯೋ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದ್ದು, ವ್ಯಾಪಾರಿಗಳು ಗ್ರಾಹಕರಿಗೆ ವಸ್ತುಗಳನ್ನು ತೋರಿಸುವಾಗ ಹೆಚ್ಚು ಜಾಗರೂಕರಾಗಿರಬೇಕು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

 

PREV
Read more Articles on
click me!

Recommended Stories

ಮೊದಲ ಬಾರಿ ಸಮುದ್ರ ನೋಡಿದ 80 ವರ್ಷದ ವೃದ್ಧ, ವೈರಲ್ ವಿಡಿಯೋಗೆ ಕರಗಿದ ನೆಟ್ಟಿಗರ ಮನ!
ಬಾಲಿಯಲ್ಲಿ ಭೇಟಿ, ಜರ್ಮನಿಯಲ್ಲಿ ಪ್ರೀತಿ! ಇಂಡಿಯನ್ ಯೂಟ್ಯೂಬರ್ ಲವ್ ಸ್ಟೋರಿ ವೈರಲ್