
ಲಖನೌ (ಜು.15) ಮದುವೆ ಹಾಗೂ ಮನಸ್ತಾಪ, ಮದುವೆ ಹಾಗೂ ಡಿವೋರ್ಸ್ ಭಾರತದ ಮೂಲೆ ಮೂಲೆಯಿಂದ ಕೇಳಿಬರುತ್ತಿದೆ. ಈ ಎರಡು ಪ್ರಕರಣಗಳಲ್ಲಿ ಅಕ್ರಮ ಸಂಬಂಧಗಳೇ ಹೆಚ್ಚು. ಶಿಕ್ಷಕ ಪತಿಯ ನಡೆ ನುಡಿಗಳ ಮೇಲೆ ಪತ್ನಿಗೆ ಅನುಮಾನ ತೀವ್ರಗೊಂಡಿದೆ. ಕೆಲ ಮಾಹಿತಿ ಸಿಕ್ಕಿರು ಸಾಕ್ಷ್ಯ ಇರಲಿಲ್ಲ. ಮಾತನಾಡಿದರೆ ಪತಿ ಗದರಿಸುತ್ತಿದ್ದ. ಹೀಗಾಗಿ ಪತಿಗೆ ಗೊತ್ತಲ್ಲದೆ ಆತ ಕಲಿಸುತ್ತಿದ್ದ ಶಾಲೆಯಲ್ಲಿ ಹಿಡನ್ ಕ್ಯಾಮೆರಾ ಇಟ್ಟು ಬಂದಿದ್ದಾಳೆ. ಒಂದು ವಾರದ ಬಳಿಕ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯ ನೋಡಿ ಪತ್ನಿ ಬೆಚ್ಚಿ ಬಿದ್ದಿದ್ದಾಳೆ. ಈಗ ಶಿಕ್ಷಕ ಪತಿಗೆ ಮನೆಯಿಂದ ಮಾತ್ರವಲ್ಲ ಶಾಲೆಯಿಂದಲೂ ಗೇಟ್‌ಪಾಸ್ ಸಿಕ್ಕಿದೆ. ಈ ಘಟನೆ ಉತ್ತರ ಪ್ರದೇಶದ ಕನ್ನೌಜ್‌ನಲ್ಲಿ ನಡೆದಿದೆ.
ಉಮ್ರಿಪುರ್ ಮೂಲದ ಶಿಕ್ಷಕ ಹಾಗೂ ಮಣಿಕೋಠಿ ಮೂಲದ ಶಿಕ್ಷಕಿ ಇಬ್ಬರು ಕನ್ನೌಜ್ ವಲಯದಲ್ಲಿರುವ ಶಾಲೆಯಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದರು. ಹೆಚ್ಚುವರಿ ತರಗತಿ , ಹೆಚ್ಚುವರಿ ಡ್ಯೂಟಿ ಸೇರಿ ಹಲವು ಕಾರಣ ಹೇಳಿ ಭಾನುವಾರ ಸೇರಿದಂತೆ ರಜಾ ದಿನವೂ ಶಾಲೆಗೆ ತೆರಳುತ್ತಿದ್ದ ಶಿಕ್ಷಕನ ಮೇಲೆ ಪತಿಗೆ ಅನುಮಾನ ಮೂಡಿತ್ತು. ಪ್ರಶ್ನಿಸಿದರೆ ಗದರಿಸಿ ಬಾಯಿ ಮುಚ್ಚಿಸುತ್ತಿದ್ದ. ಇದರ ನಡುವೆ ಶಾಲೆಯಲ್ಲಿ ಈ ಇಬ್ಬರು ಅಕ್ರಮ ಸಂಬಂಧದಲ್ಲಿ ಬ್ಯೂಸಿಯಾಗುತ್ತಿದ್ದರು. ಶಾಲಾ ಕೊಠಡಿ, ಸಿಬ್ಬಂದಿಗಳ ಕೊಠಡಿಯಲ್ಲೇ ರೊಮ್ಯಾನ್ಸ್ ಶುರು ಮಾಡುತ್ತಿದ್ದರು. ಈ ಕುರುತು ಶಾಲೆಯ ಕೆಲ ಸಿಬ್ಬಂದಿಗಳು ಸೂಚನೆ ನೀಡಿದ್ದರೂ ಇವರ ವೈಯುಕ್ತಿಕ ಸೇವೆಗಳು ಮುಂದುವರಿದಿತ್ತು.
ಶಾಲೆಯ ಕೆಲ ಟೀಚರ್ಸ್ ಈ ಕುರಿತು ಶಿಕ್ಷಕನ ಪತ್ನಿಗೆ ಮಾಹಿತಿ ನೀಡಿದ್ದರು. ಈ ಕುರಿತು ಮನೆಯಲ್ಲಿ ಪ್ರಶ್ನಿಸಿದಾಗ ರಾದ್ಧಾಂತವೇ ನಡೆದು ಹೋಗಿತ್ತು. ನನ್ನ ಮೇಲೆ ಅನುಮಾನ ಪಡುತ್ತಿಯಾ ಎಂದು ಗದರಿಸಿದ್ದ. ಹೀಗಾಗಿ ಸಾಕ್ಷ್ಯವಿಲ್ಲದ ಪತ್ನಿ ಸುಮ್ಮನಾಗಿದ್ದಳು. ಇಷ್ಟಾದರೂ ಶಿಕ್ಷನ ಲವ್ವಿಡವ್ವಿಗೆ ಯಾವುದೇ ಅಡತಡೆಯಾಗರಿಲ್ಲ. ಕೊನೆಗೆ ಹೇಗಾದರು ಮಾಡಿ ಸಾಕ್ಷಿ ಸಮೇತ ಗಂಡನ ಅಕ್ರಮ ಸಂಬಂಧ ಪತ್ತೆ ಹಚ್ಚಬೇಕು ಎಂದುಕೊಂಡ ಪತ್ನಿ ಹಿಡನ್ ಕ್ಯಾಮೆರಾ ಕುರಿತು ಯೂಟ್ಯೂಬ್ ಮೂಲಕ ಮಾಹಿತಿ ಪಡೆದುಕೊಂಡಿದ್ದಾಳೆ. ಬಳಿಕ ಹಿಡನ್ ಕ್ಯಾಮೆರಾ ಖರೀದಿಸಿದ್ದಾಳೆ.
ಪತಿಗೆ ಗೊತ್ತಿಲ್ಲದಂತೆ ಶಾಲೆಗೆ ತೆರಳಿದ ಪತ್ನಿ ತನಗೆ ಮಾಹಿತಿ ನೀಡಿದ ಶಾಲಾ ಸಿಬ್ಬಂದಿಯ ನೆರವಿನಿಂದ ಹಿಡನ್ ಕ್ಯಾಮೆರಾ ಅಳವಡಿಸಿದ್ದಾಳೆ. ಶಾಲಾ ಕೊಠಡಿ, ಸಿಬ್ಬಂದಿಗಳ ಕೊಠಡಿಯಲ್ಲಿ ಹಿಡನ್ ಕ್ಯಾಮೆರಾ ಅಳವಡಿಸಲಾಗಿತ್ತು. ಒಂದು ವಾರ ಬಳಿಕ ಮತ್ತೆ ಶಾಲೆಗೆ ತೆರಳಿ ಹಿಡನ್ ಕ್ಯಾಮೆರಾದಲ್ಲಿ ಸೆರೆಯಾದ ವಿಡಿಯೋವನ್ನು ನೋಡಿದಾಗ ಪತ್ನಿ ಬೆಚ್ಚಿ ಬಿದ್ದಿದ್ದಾಳೆ. ವಿದ್ಯಾರ್ಥಿಗಳು ಇಲ್ಲದಾಗ ಶಾಲಾ ಕೊಠಡಿಯಲ್ಲೇ ಇವರಿಬ್ಬರ ರೊಮ್ಯಾನ್ಸ್ ಜೋರಾಗಿತ್ತು.
ವಿಡಿಯೋವನ್ನು ಶಾಲಾ ಆಡಳಿಮಂಡಳಿಗೆ ರವಾನಿಸಿದ ಪತ್ನಿ ದೂರು ನೀಡಿದ್ದಾಳೆ. ಇತ್ತ ಜಿಲ್ಲಾ ಶಿಕ್ಷಣ ಅಧಿಕಾರಿಗಳಿಗೂ ವಿಡಿಯೋ ತಲುಪಿದೆ. ಪೋಷಕರು ಶಾಲೆಗೆ ಆಗಮಿಸಿದ್ದಾರೆ. ಕೋಲಾಹಲ ಸೃಷ್ಟಿಯಾಗಿದೆ. ಶಾಲಾ ಆಡಳಿತ ಮಂಡಳಿ ಇಬ್ಬರು ಟೀಚರ್ಸ್‌ನ್ನು ಅಮಾನತು ಮಾಡಿದ್ದಾರೆ. ಶಿಕ್ಷಣ ಅಧಿಕಾರಿ ತನಿಖೆಗೆ ಆದೇಶಿಸಿದ್ದಾರೆ. ಅಮಾನತುಗೊಂಡ ಶಿಕ್ಷಕ ಮನೆಗೆ ಬಂದಾಗ ಪತ್ನಿ ಮನೆಯಿಂದಲೂ ಹೊರಗೆ ಹಾಕಿದ್ದಾಳೆ. ಇದೀಗ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.