ಪ್ರಸಿದ್ಧ ಟಿಕ್ ಟಾಕರ್ ಹತ್ಯೆ : 1.3 ಮಿಲಿಯನ್ ಫಾಲೋವರ್ಸ್ ಹೊಂದಿದ್ದ ಹುಡುಗಿ ಅಂತಿಮ ಸಂಸ್ಕಾರಕ್ಕೆ ಬಂದಿದ್ದೆಷ್ಟು ಜನ ?

Published : Aug 17, 2026, 11:33 AM IST
Ayesha Gilani

ಸಾರಾಂಶ

ಟಿಕ್ ಟಾಕರ್ ಆಯೇಷಾ ಗಿಲಾನಿ ಅವರನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಪ್ರಸಿದ್ಧಿ ಪಡೆದಿದ್ದ ಗಿಲಾನಿ ಅಂತ್ಯಸಂಸ್ಕಾರದ ವೇಳೆ ಉಪಸ್ಥಿತರಿದ್ದ ಜನರ ಸಂಖ್ಯೆ ಈಗ ಚರ್ಚೆಗೆ ಕಾರಣವಾಗಿದೆ.

ಸೋಶಿಯಲ್ ಮೀಡಿಯಾ ಬರೀ ಪ್ರಚಾರಕ್ಕೆ ಮಾತ್ರ., ಸೋಶಿಯಲ್ ಮೀಡಿಯಾ ಫಾಲೋವರ್ಸ್ ಹಾಗೂ ನಿಜವಾದ ಪ್ರೀತಿಪಾತ್ರರ ಮಧ್ಯೆ ಸಾಕಷ್ಟು ವ್ಯತ್ಯಾಸವಿದೆ. ಸೋಶಿಯಲ್ ಮೀಡಿಯಾದಲ್ಲಿ ನಿಮ್ಮನ್ನು ಫಾಲೋಮಾಡೋರೆಲ್ಲ ನಿಮ್ಮ ಕಷ್ಟಕ್ಕೆ ಬರೋದಿಲ್ಲ. ಸತ್ರೂ ಅಂತ್ಯ ಸಂಸ್ಕಾರಕ್ಕೆ ಬರೋರ ಸಂಖ್ಯೆ ಕಡಿಮೆ. ಇದಕ್ಕೆ ಪಾಕಿಸ್ತಾನದ ಟಿಕ್ ಟಾಕರ್ ಆಯೇಷಾ ಗಿಲಾನಿ ಉತ್ತಮ ನಿದರ್ಶನ.

ಅಂತ್ಯಸಂಸ್ಕಾರಕ್ಕೆ ಬೆರಳೆಣಿಕೆಯಷ್ಟು ಜನ

ಪಾಕಿಸ್ತಾನದ ಜನಪ್ರಿಯ ಟಿಕ್ ಟಾಕರ್ ಆಯೇಷಾ ಗಿಲಾನಿ. ಸೋಶಿಯಲ್ ಮೀಡಿಯಾದಲ್ಲಿ 1.30 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. 28 ವರ್ಷದ ಆಯೇಷಾ, ಸೋಶಿಯಲ್ ಮೀಡಿಯಾ ಮೂಲಕ ಸಿಕ್ಕಾಪಟ್ಟೆ ಪ್ರಸಿದ್ಧಿ ಪಡೆದಿದ್ದರು. ಆದ್ರೆ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಅವರ ಅಂತಿಮ ದರ್ಶನಕ್ಕೆ ಅಥವಾ ಅಂತ್ಯ ಸಂಸ್ಕಾರದ ವೇಳೆ ಸಾವಿರಾರು ಜನ ಬರ್ತಾನೆ ಎನ್ನುವ ನಿರೀಕ್ಷೆ ಇತ್ತು. ಆದ್ರೆ ಬಂದಿದ್ದು ಬೆರಳೆಣಿಕೆಯಷ್ಟು ಜನ ಮಾತ್ರ. ಅತ್ಯಂತ ಕಡಿಮೆ ಜನರ ಉಪಸ್ಥಿತಿಯಲ್ಲಿ ಗಿಲಾನಿ ಅಂತ್ಯಸಂಸ್ಕಾರ ನಡೆದಿದೆ. ಇದು ಸೋಶಿಯಲ್ ಮೀಡಿಯಾ ಜನಪ್ರಿಯತೆ ಮತ್ತು ನಿಜವಾದ ಜನಸಂಪರ್ಕಗಳ ನಡುವಿನ ವ್ಯತ್ಯಾಸದ ಬಗ್ಗೆ ಚರ್ಚೆಗೆ ನಾಂದಿ ಹಾಡಿದೆ.

ಆಯೇಷಾ ಗಿಲಾನಿ ಹತ್ಯೆ

ಪೊಲೀಸರ ಪ್ರಕಾರ, ಆಗಸ್ಟ್ 14 ರಂದು, ಫೆಡರಲ್ ರಾಜಧಾನಿ ಬಳಿಯ ಟ್ಯಾಕ್ಸಿಲಾ ನಗರದಲ್ಲಿರುವ ಗಿಲಾನಿ ಮನೆಗೆ ಫೋನ್ ಬಂದಿತ್ತು. ನಂತ್ರ ಗಿಲಾನಿ ಮನೆಯಿಂದ ಹೊರಗೆ ಬಿದ್ದಿದ್ದರು. ಮೋಟಾರ್ ಸೈಕಲ್ನಲ್ಲಿ ಬಂದ ದುಷ್ಕರ್ಮಿಗಳು ಗಿಲಾನಿ ಕಾರಿನ ಮೇಲೆ ಗುಂಡು ಹಾರಿಸಿದ್ದಾರೆ. ದಾಳಿಯಲ್ಲಿ ಆಯೇಷಾ ಸಾವನ್ನಪ್ಪಿದ್ರೆ ಅವರ 15 ವರ್ಷದ ಸಹೋದರಿ ಗಂಭೀರವಾಗಿ ಗಾಯಗೊಂಡಿದ್ದರು. ಸಿಸಿಟಿವಿ ದೃಶ್ಯಾವಳಿಗಳು ಮತ್ತು ಕುಟುಂಬದ ದೂರಿನ ಆಧಾರದ ಮೇಲೆ ಪೊಲೀಸರು ಈಗ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಆಯೇಷಾ ಗಿಲಾನಿ ಯಾರು?

ಆಯೇಷಾ ಗಿಲಾನಿ ಪಾಕಿಸ್ತಾನದ ಜನಪ್ರಿಯ ಟಿಕ್ಟೋಕರ್ ಆಗಿದ್ದರು. ನಿಜವಾದ ಹೆಸರು ಶಮ್ಸು ಬೀಬಿ. ಟಿಕ್ಟಾಕ್ನಲ್ಲಿ ಸುಮಾರು 1.3 ಮಿಲಿಯನ್ ಫಾಲೋವರ್ಸ್ ಇದ್ದರು. ಆಗಸ್ಟ್ 14 ರಂದು ಟ್ಯಾಕ್ಸಿಲಾದಲ್ಲಿ ಹತ್ಯೆ ಮಾಡಲಾಯಿತು. ಘಟನೆಯ ನಂತರ, ಕುಟುಂಬವು ಪೊಲೀಸರಿಂದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ. ಕುಟುಂಬ ಸಲ್ಲಿಸಿದ ದೂರಿನ ಪ್ರಕಾರ, ಆಯೇಷಾಗೆ ಕಾಶಿ ಎಂದೂ ಕರೆಯಲ್ಪಡುವ ಕಾಶಿಫ್ ಎಂಬ ವ್ಯಕ್ತಿಯಿಂದ ಕರೆ ಬಂದಿತು.

ದೂರಿನ ಪ್ರಕಾರ, ಮೋಟಾರ್ ಸೈಕಲ್ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಪೆಟ್ರೋಲ್ ಪಂಪ್ ಬಳಿ ತಮ್ಮ ಕಾರಿನ ಮೇಲೆ ಗುಂಡು ಹಾರಿಸಿದ್ದಾರೆ ಎಂದು ನೈಮತುಲ್ಲಾ ಕುಟುಂಬಕ್ಕೆ ತಿಳಿಸಿದ್ದಾರೆ. ದಾಳಿಕೋರರು ಸುಮಾರು 30 ರಿಂದ 35 ವರ್ಷ ವಯಸ್ಸಿನವರು ಎಂದು ಅಂದಾಜಿಸಲಾಗಿದೆ. ಆಯೇಷಾ ಅವರ ಕುತ್ತಿಗೆಗೆ ಗುಂಡು ತಗುಲಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ. ಗುಂಡು ಹಾರಿಸಿದ ನಂತರ, ಗಿಲಾನಿ ಕಾರಿನ ನಿಯಂತ್ರಣ ಕಳೆದುಕೊಂಡು ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದ್ದಾರೆ, ಅಪಘಾತದಲ್ಲಿ ಆಯೇಷಾ ಅವರ ತಂಗಿ ಅಸಿಮಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಪೊಲೀಸರ ಪ್ರಕಾರ, ಘಟನೆಯ ನಂತರ ಇಬ್ಬರು ಶಂಕಿತರು ಮೋಟಾರ್ ಸೈಕಲ್ನಲ್ಲಿ ಪರಾರಿಯಾಗುತ್ತಿರುವುದು ಸಿಸಿಟಿವಿ ದೃಶ್ಯಗಳಲ್ಲಿ ದಾಖಲಾಗಿದೆ.

PREV
Read more Articles on
click me!

Recommended Stories

ಅಜ್ಜಿಯ ಬಿರಿಯಾನಿ ರೆಸಿಪಿ ಬದಲಿಸಿತು ಜೀವನ; ₹5 ಲಕ್ಷ ಹೂಡಿಕೆಯಿಂದ ₹10 ಕೋಟಿ ಬಿಸಿನೆಸ್ ಕಟ್ಟಿದ ಬೆಂಗಳೂರು ಸಹೋದರಿಯರು
ದೇಶ ಬೇರೆ, ಬಂಧ ಒಂದೇ; ಭಾರತೀಯ ನೆರೆಹೊರೆಯವರಿಗೆ ಅಮೆರಿಕನ್ ಮಹಿಳೆಯ ಕಣ್ಣೀರಿನ ವಿದಾಯ