ರಾತ್ರಿ 2 ಗಂಟೆಗೆ ವಿಧಾನಸೌಧದ ಬಳಿ ವಿಡಿಯೋ ಮಾಡಿದ ಇಬ್ಬರು ಮಹಿಳೆಯರು.. ನೆಟ್ಟಿಗರ ಪ್ರತಿಕ್ರಿಯೆ ಹೀಗಿತ್ತು

Published : Jul 13, 2026, 12:11 PM IST
Viral Bangalore video

ಸಾರಾಂಶ

Viral Bangalore video: ನೊಯ್ಡಾದ ಮಹಿಳೆಯೊಬ್ಬರು ರಾತ್ರಿ 2 ಗಂಟೆಯ ಸುಮಾರಿಗೆ ಸ್ನೇಹಿತೆಯೊಂದಿಗೆ ಬೆಂಗಳೂರಿನ ವಿಧಾನಸೌಧದ ಬಳಿ ನಡೆದುಕೊಂಡು ಹೋಗಿದ್ದು, ಆ ನಂತರ ನಗರದ ಕುರಿತು ಶೇರ್ ಮಾಡಿದ ವಿಷಯ ಈಗ ಇಂಟರ್‌ನೆಟ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ.

ನೊಯ್ಡಾದ ಮಹಿಳೆಯೊಬ್ಬರು, ರಾತ್ರಿ 2 ಗಂಟೆಯ ಸುಮಾರಿಗೆ ಸ್ನೇಹಿತೆಯೊಂದಿಗೆ ಬೆಂಗಳೂರಿನ ವಿಧಾನಸೌಧದ ಬಳಿ ನಡೆದುಕೊಂಡು ಹೋಗುತ್ತಿರುವ ವಿಡಿಯೋವನ್ನು ಹಂಚಿಕೊಂಡ ನಂತರ ಆನ್‌ಲೈನ್‌ನಲ್ಲಿ ಚರ್ಚೆ ಆರಂಭವಾಗಿದೆ. ವಿಡಿಯೋದಲ್ಲಿ ಅವರು ನಗರದ ಕುರಿತು ಶ್ಲಾಘನೆ ಮಾಡಿದ್ದಲ್ಲದೆ, ನೊಯ್ಡಾ-ಬೆಂಗಳೂರನ್ನು ಹೋಲಿಕೆ ಮಾಡಿದ್ದಾರೆ.

ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಶಾಲಿನಿ ಎಂಬುವವರು ತನ್ನ ಸ್ನೇಹಿತೆ ಅನುಜಾ ಅವರೊಂದಿಗೆ ಈ ವಿಡಿಯೋ ಪೋಸ್ಟ್ ಮಾಡಿದ್ದು, ಇಬ್ಬರೂ ಮಹಿಳೆಯರು ತಡ ರಾತ್ರಿಯಲ್ಲಿ ವಿಧಾನಸೌಧದ ಮುಂದೆ ಬಹುತೇಕ ಖಾಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ.

“ಈಗ ರಾತ್ರಿ 2 ಗಂಟೆಯಾಗಿದೆ. ನಾವು ಬೆಂಗಳೂರಿನ ಬೀದಿಯಲ್ಲಿ ಸುತ್ತಾಡುತ್ತಿದ್ದೇವೆ. ವಾಸ್ತವವಾಗಿ ಇದು ಬೀದಿಯಲ್ಲ, ವಿಧಾನಸೌಧದ ಮುಂದೆ. ಹೌದು. ಇದು ಬೆಂಗಳೂರಿನ ವಿಧಾನಸೌಧ. ನಾವು ಅದರ ಮುಂದೆ ನಿಂತಿದ್ದೇವೆ" ಎಂದು ಮೊದಲು ಶಾಲಿನಿ ಹೇಳುತ್ತಾರೆ.

ಜೊತೆಗೆ ಎರಡು ನಗರಗಳನ್ನೂ ಹೋಲಿಸುತ್ತಾರೆ.. “ಇದು ನೊಯ್ಡಾವಾಗಿದ್ದರೆ, ನಮಗೆ ರಸ್ತೆಯಲ್ಲಿ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಅದು ಸುರಕ್ಷಿತವಲ್ಲ. ಆದರೆ ಇದು ಬೆಂಗಳೂರು. ತುಂಬಾ ಸುರಕ್ಷಿತವಾಗಿದೆ. ನಾವು ರಾತ್ರಿ 2 ಗಂಟೆಗೆ ತಿರುಗಾಡುತ್ತಿದ್ದೇವೆ.

ನಂತರ ಅನುಜಾ ಎರಡೂ ನಗರಗಳ ನಡುವಿನ ಅನುಭವವನ್ನು ತಮಾಷೆಯಾಗಿ ಎತ್ತಿ ತೋರಿಸಿದ್ದು, “ನೊಯ್ಡಾದಲ್ಲಿ, ನೀವು ಟ್ರಾಫಿಕ್ ತಪ್ಪಿಸಬಹುದು. ಆದರೆ ಬೆಂಗಳೂರಿನಲ್ಲಿ, ನೀವು ಟ್ರಾಫಿಕ್ ತಪ್ಪಿಸಲು ಸಾಧ್ಯವಿಲ್ಲ" ಎಂದು ತಿಳಿಸಿದ್ದಾರೆ.

ಕೊನೆಗೆ ಟ್ರಾಫಿಕ್ ನಿರ್ವಹಿಸಬಹುದಾದರೂ, ಸುರಕ್ಷತೆ ಮುಖ್ಯ ಎಂದು ಶಾಲಿನಿ ಪ್ರತಿಕ್ರಿಯಿಸಿದ್ದಾರೆ. “ಬೆಂಗಳೂರಿನಲ್ಲಿ ಸುರಕ್ಷತೆ ಹೆಚ್ಚು. ಬೆಳಗ್ಗೆ 2:30 ಆಗಿದ್ದು, ನಾವು ವಿಧಾನಸೌಧದ ಮುಂದೆ ನಡೆದುಕೊಂಡು ಹೋಗುತ್ತಿದ್ದೇವೆ. ಬೆಂಗಳೂರು ಎಷ್ಟು ಸುರಕ್ಷಿತ ಎಂದು ಯೋಚಿಸಿ” ಎಂದು ಅವರು ಹೇಳಿದ್ದಾರೆ.

ನೊಯ್ಡಾ ಬಿಡಲು ಬಯಸಿದ ಮಹಿಳೆ

ಸಂಭಾಷಣೆಯ ಸಮಯದಲ್ಲಿ, ಶಾಲಿನಿ ಬೆಂಗಳೂರಿಗೆ ಬರುವ ಇಚ್ಛೆಯನ್ನು ಸಹ ವ್ಯಕ್ತಪಡಿಸಿದ್ದಾರೆ. “ನಾನು ನೊಯ್ಡಾ ಬಿಟ್ಟು ಬೆಂಗಳೂರಿಗೆ ಬರಲು ಬಯಸುತ್ತೇನೆ. ಇಂತಹ ಸುರಕ್ಷತೆ ಮತ್ತು ಭದ್ರತೆಯನ್ನು ಯಾರು ತಾನೇ ಬಯಸುವುದಿಲ್ಲ"? ಎಂದು ಹೇಳಿದ್ದಾರೆ.

ರಾತ್ರಿ ತಡವಾಗಿದ್ದರೂ ಇಬ್ಬರೂ ಮಹಿಳೆಯರು ಆರಾಮವಾಗಿ ನಡೆಯುತ್ತಿರುವುದನ್ನು ಮತ್ತಷ್ಟು ಹೈಲೈಟ್ ಮಾಡಿದರು. “ನಾವು ಸಂಜೆ 6 ಗಂಟೆ ಏನೋ ಎಂಬಂತೆ ಸುಮ್ಮನೆ ತಿರುಗಾಡುತ್ತಿದ್ದೇವೆ. ಅದು ಬೆಂಗಳೂರಿನ ವಿಧಾನಸೌಧದ ಮುಂದೆ ಇಬ್ಬರು ಹುಡುಗಿಯರು ತಿರುಗಾಡುತ್ತಿದ್ದೇವೆ. ಯಾರೂ ಚುಡಾಯಿಸುತ್ತಿಲ್ಲ, ಯಾರೂ ನಮಗೆ ತೊಂದರೆ ಕೊಡುತ್ತಿಲ್ಲ ಮತ್ತು ಯಾರೂ ನಮಗೆ ಕೆಟ್ಟದಾಗಿ ಲುಕ್ ನೀಡುತ್ತಿಲ್ಲ" ಎಂದು ನಿರ್ಜನ ರಸ್ತೆ ಮತ್ತು ಅವುಗಳ ಹಿಂದಿರುವ ಹೆಗ್ಗುರುತನ್ನು ತೋರಿಸುತ್ತಾ ಶಾಲಿನಿ ಹೇಳಿದರು, “ಇಡೀ ರಸ್ತೆ ಖಾಲಿಯಾಗಿದೆ. ಇದು ವಿಧಾನಸೌಧ. ಇದರ ಸೌಂದರ್ಯ ತುಂಬಾ ಸುಂದರವಾಗಿ ಕಾಣುತ್ತದೆ. ಅಲ್ಲವೇ? ” ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಕ್ಲಿಪ್ ಅನ್ನು ಇಲ್ಲಿ ವೀಕ್ಷಿಸಿ

 

ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರ ಪ್ರತಿಕ್ರಿಯೆಗಳು

ವಿಡಿಯೋಗೆ ಹಲವಾರು ಮಿಶ್ರ ಪ್ರತಿಕ್ರಿಯೆ ಬಂದಿದ್ದು, “ಹೌದು, ಇದನ್ನು ನಾನು ಒಪ್ಪುತ್ತೇನೆ” ಎಂದು ಕೆಲವು ಬಳಕೆದಾರರು ಹೇಳಿದರೆ, ಮತ್ತೆ ಕೆಲವರು “ಹೌದು, ಬೆಂಗಳೂರು ಸುರಕ್ಷಿತವಾಗಿದೆ.” ಎಂದಿದ್ದಾರೆ. ಹಾಗೆಯೇ “ಅದಕ್ಕಾಗಿಯೇ ಬೆಂಗಳೂರು ನನ್ನ ನೆಚ್ಚಿನ ನಗರ,”, “ಸುರಕ್ಷತೆಯ ವಿಷಯಕ್ಕೆ ಬಂದರೆ ಬೆಂಗಳೂರು ಎದ್ದು ಕಾಣುತ್ತದೆ.” ಎಂದೆಲ್ಲಾ ಕೊಂಡಾಡಿದ್ದಾರೆ.

PREV
Read more Articles on
click me!

Recommended Stories

Actor Arya Case: ತಮಿಳು ನಟ ಆರ್ಯ ವಿರುದ್ಧ ಕೋಟ್ಯಾಂತರ ರೂಪಾಯಿ ವಂಚನೆ ಪ್ರಕರಣ ದಾಖಲು!
ಬೆಂಗಳೂರು ಟ್ರಾಫಿಕ್‌ಗೆ ವ್ಯಕ್ತಿಯ ಟಾಂಗ್! "ಏರ್‌ಪೋರ್ಟ್ ತಲುಪೋ ಅಷ್ಟ್ರಲ್ಲಿ ಕೋಲ್ಕತ್ತಾಗೇ ಹೋಗ್ಬರಬಹುದು!"