ಮರ ಏರಿದ್ದಾಗಲೇ ವ್ಯಕ್ತಿ ಮೈಮೇಲೆ ಹತ್ತಿದ ಹಾವು; ಕೆಳಗಡೆ ಬಿದ್ರೂ ಸಾವು, ಹಾವು ಕಚ್ಚಿದ್ರೂ ಸಾವು! ಆಮೇಲೆ ಆಗಿದ್ದೇನು?

Published : May 31, 2026, 12:14 PM IST
Snake climbs on man viral video

ಸಾರಾಂಶ

Snake climbs on man viral video: ಯಾರ ಜೊತೆ ದ್ವೇಷ ಕಟ್ಟಿಕೊಂಡರೂ ಹಾವಿನ ಜೊತೆ ದ್ವೇಷ ಕಟ್ಟಿಕೊಳ್ಳೋದಿಲ್ಲ. ಆದರೆ ಈಗ ವ್ಯಕ್ತಿಯೊಬ್ಬ ಮರ ಏರಿದಾಗಲೇ, ಹಾವೊಂದು ಅವನ ಮೈಮೇಲೆ ಏರಿದೆ. ಈ ವಿಡಿಯೋ ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. 

Snake climbs on man viral video: ಹಾವು ಎಂದರೆ ಎಂಥವ್ರು ಓಡಿ ಹೋಗ್ತಾರೆ. ಇತ್ತೀಚೆಗೆ ಕೆಲ ಜೂಗಳಲ್ಲಿ ಹಾವು ಇಡಲಾಗುತ್ತದೆ, ಅಲ್ಲಿ ಕೆಲವರು ಹೋಗಿ ದೈತ್ಯಾಕಾರದ ಹಾವನ್ನು ಮುಟ್ಟೋದುಂಟು. ಆದರೆ ಇಲ್ಲೋರ್ವ ವ್ಯಕ್ತಿ ಮರ ಹತ್ತಿದ್ದಾಗಲೇ, ಅವನ ಮೈಮೇಲೆ ಹಾವು ಏರಿದೆ.

ವಿಡಿಯೋ ವೈರಲ್!

ಹೌದು, ಓರ್ವ ವ್ಯಕ್ತಿ ತನ್ನ ತೋಟದಲ್ಲಿದ್ದ ಮರ ಏರಿದ್ದಾನೆ. ಆಗ ಎಲ್ಲಿಂದಲೋ ಒಂದು ಹಾವು ಬಂದು, ಅವನ ಮೈಮೇಲೆ ಕುಳಿತಿದೆ. ಶರ್ಟ್‌, ಶಾರ್ಟ್ಸ್‌ ಹಾಕಿಕೊಂಡಿದ್ದ ಆ ವ್ಯಕ್ತಿ ಮೈಮೇಲೆ ಆ ಹಾವು ಓಡಾಡಿದೆ. ಒಂದು ಕಡೆ ಮರ ಏರಿದ್ದಾನೆ, ಇನ್ನೊಂದು ಕಡೆ ಹಾವು ಇದೆ. ಒಟ್ಟಿನಲ್ಲಿ ಏನೂ ಮಾಡಲಾಗದ ಪರಿಸ್ಥಿತಿ. ಇಂಥ ಸಮಯದಲ್ಲಿ ಆ ವ್ಯಕ್ತಿ ವಿಡಿಯೋ ಕೂಡ ಮಾಡಿದ್ದಾನೆ.

ಆ ವ್ಯಕ್ತಿ ಏನಾದರೂ ಚಲನೆ ಮಾಡಿದರೆ ಹಾವು ಕಚ್ಚುವ ಸಾಧ್ಯತೆ ಇತ್ತು. ಆದ್ದರಿಂದ ಅವನು ಯಾವುದೇ ಆತುರ ತೋರಿಸದೆ ನಿಧಾನವಾಗಿ ಅಲ್ಲಿಯೇ ನಿಂತಿದ್ದಾನೆ, ಆ ಬಳಿಕ ಆ ಹಾವು ಎಲ್ಲಿ ಹೋಯ್ತು? ಆ ವ್ಯಕ್ತಿ ಯಾರು? ಆ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಉತ್ತರವಿಲ್ಲ. ಸದ್ಯ ಈ ವಿಡಿಯೋ ಮಾತ್ರ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. ಆ ಹಾವು ಎಲ್ಲಿ ಹೋಯ್ತು? ಆಮೇಲೆ ಆ ವ್ಯಕ್ತಿ ಮರದಿಂದ ಇಳಿದಿದ್ದಾನಾ? ಅವರು ಆರಾಮಾಗಿದ್ದಾರಾ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

ಸ್ವಲ್ಪ ಟೈಮ್‌ ಆದಬಳಿಕ ಆ ಹಾವು ತನ್ನಷ್ಟಕ್ಕೆ ತಾನೇ ಇಳಿದು ಹೋಯ್ತಾ ಎಂಬ ಪ್ರಶ್ನೆಯೂ ಇದೆ. ಒಟ್ಟಿನಲ್ಲಿ ಆ ವ್ಯಕ್ತಿ ಅಪಾಯದಿಂದ ಪಾರಾದರೆ ಸಾಕು. ಒಟ್ಟಿನಲ್ಲಿ ಈ ಘಟನೆ ನೋಡಿ ಅನೇಕರು ಕಂಗಾಲಾಗಿದ್ದಾರೆ. ಈ ವಿಡಿಯೋಗೆ ಅನೇಕರು ಮನಬಂದಂತೆ ಕಾಮೆಂಟ್‌ ಮಾಡಿದ್ದಾರೆ.

ಸೋಶಿಯಲ್‌ ಮೀಡಿಯಾದಲ್ಲಿ ಕಾಮೆಂಟ್‌ ಮಾಡಿದ ವೀಕ್ಷಕರು!

ಇದನ್ನೆಲ್ಲ ತಿಳಿದಿದ್ದರೂ ನೀವು ಇನ್ನೂ ವಿಡಿಯೋ ತೆಗೆದುಕೊಳ್ಳುತ್ತಿದ್ದೀರಿ. ನಿಮ್ಮ ಧೈರ್ಯ ನಿಜವಾಗಿಯೂ ಶ್ಲಾಘನೀಯ. ನಿಮ್ಮ ಬಗ್ಗೆ ನಮಗೆ ಹೆಮ್ಮೆ ಇದೆ

ಡಬಲ್ ಗುಂಡಿಗೆ ಇದೆ ಗುರು ನಿನಗೆ, ನೋಡೋಕೆ ಭಯ ಆಗುತ್ತೆ, ಸೂಪರ್ ಗುರು, ಮೆಚ್ಚಿದ ನಿನ್ನ ಧೈರ್ಯ

ಅದು ವಿಷ ರಹಿತ ಹಾವು ಆಗಿದ್ದರೂ, ಒಬ್ಬ ಮನುಷ್ಯ ಹಾವು ಅಂದ್ರೆ ಭಯ ಪಡ್ತಾನೆ.

ನಮಗೆ ಯಾವುದೇ ಸಂಕಷ್ಟದ ಸಂದರ್ಭದಲ್ಲಿಯೂ ಗಾಬರಿಯಾಗದೆ ಧೈರ್ಯ, ತಾಳ್ಮೆಯಿಂದ ವರ್ತಿಸಿದರೆ ಯಾವುದೇ ಸಮಸ್ಯೆಯನ್ನಾದರೂ ಕೂಡ, ಯಶಸ್ವಿಯಾಗಿ ಎದುರಿಸಬಹುದು ಎಂಬ ಪಾಠವನ್ನು ಕಲಿಸುತ್ತದೆ

 

PREV
Read more Articles on
click me!

Recommended Stories

150 ಕೋಟಿ ಒಡೆಯನಾದ್ರೂ ಸುಡುಬಿಸಿಲಲ್ಲಿ ಕೆಲಸ; ದೇವಸ್ಥಾನ ಸ್ವಚ್ಛಗೊಳಿಸ್ತಿರೋ ಈ ನಟನ ನೋಡಿ ಎಲ್ರೂ ಶಾಕ್!
Rare Love Story: 15 ವರ್ಷಗಳ ಮೌನ ಪ್ರೀತಿ, But ಮದುವೆಯಾಗದ ನಟಿಯ ನಿಗೂಢ ಕಥೆ: ಈ 'ದೋಸ್ತಿ ಖತಂ' ಆಗಿದ್ಯಾಕೆ?