
ಹಲವರಿಗೆ ಪಕ್ಕದ ಮನೆಯಲ್ಲಿ ಏನಾಗ್ತಿದೆ ಎಂದು ತಿಳಿಯುವ ಕುತೂಹಲ ಇದ್ದೇ ಇರುತ್ತದೆ. ಹಾಗೆಂದು ಇಲ್ಲೊಬ್ಬ ವ್ಯಕ್ತಿ, ತನ್ನ ಜೀವನದ ಹಂಗು ತೊರೆದು ಬಾಲ್ಕನಿಯ ತುದಿಗೆ ಬಂದು ಪಕ್ಕದ ಮನೆಯ ಬೆಡ್ರೂಮ್ ವಿಡಿಯೋ ಮಾಡುತ್ತಿರುವ ಶಾಕಿಂಗ್ ಘಟನೆ ನಡೆದಿದೆ. ಈತ ಹೀಗೆ ಮಾಡುತ್ತಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಅದೀಗ ವೈರಲ್ ಆಗಿದೆ. ಶಾಂತಿಯುತ ಮತ್ತು ಸುರಕ್ಷಿತ ಎಂದು ಪರಿಗಣಿಸಲಾದ ಅಪಾರ್ಟ್ಮೆಂಟ್ನಲ್ಲಿ ಇಂಥ ಆಘಾತಕಾರಿ ಘಟನೆ ಸಂಭವಿಸಿರುವುದು ಅಪಾರ್ಟ್ಮೆಂಟ್ ವಾಸಿಗಳಿಗೆ ಭೀತಿ ತರುವತಿದೆ. ಜನರ ನಂಬಿಕೆ ಮತ್ತು ಭದ್ರತಾ ಪ್ರಜ್ಞೆಯನ್ನು ಅಲುಗಾಡಿಸುವಂತಿದೆ.
ಈ ವಿಡಿಯೋದಲ್ಲಿ ವೃದ್ಧನೊಬ್ಬ ನೆರೆಯವರ ಬಾಲ್ಕನಿಗೆ ಪ್ರವೇಶಿಸಿ ಅಲ್ಲಿಂದ ಫೋನ್ನಲ್ಲಿ ರೆಕಾರ್ಡ್ ಮಾಡುತ್ತಿರುವುದು ಕಂಡುಬಂದಿದೆ. ಸಿಸಿಟಿವಿ ವೀಡಿಯೊದಲ್ಲಿಯೂ ಇದು ಸೆರೆಯಾಗಿದೆ. ಈ ವ್ಯಕ್ತಿ ನೆರೆಯವರ ಬಾಲ್ಕನಿಯನ್ನು ಸಮೀಪಿಸಿ ಅಲ್ಲಿ ನಿಂತು, ಮೊಬೈಲ್ ಬಳಸಿ ಚಿತ್ರೀಕರಿಸುತ್ತಿದ್ದಾನೆ. ಸ್ವಲ್ಪ ಆಯ ತಪ್ಪಿದರೂ ಸೀದಾ ಮೇಲೆ ಹೋಗ್ತಿದ್ದ ಈ ವ್ಯಕ್ತಿ. ಆದರೂ ಜೀವದ ಹಂಗು ತೊರೆದು ವಿಡಿಯೋ ಮಾಡಿದ್ದಾನೆ
ಅಷ್ಟಕ್ಕೂ ಈ ಸೊಸೈಟಿಯಲ್ಲಿ, ಕೆಲವು ನಿವಾಸಿಗಳು ವಿಚಿತ್ರ ನಡವಳಿಕೆಯನ್ನು ಗಮನಿಸುತ್ತಿದ್ದರು. ಆರಂಭದಲ್ಲಿ, ಅವರು ಅದನ್ನು ಸಾಮಾನ್ಯ ಎಂದು ತಳ್ಳಿಹಾಕಿದರೂ, ಕ್ರಮೇಣ ಅವರ ಅನುಮಾನಗಳು ಹೆಚ್ಚಾದವು. ಕೆಲವರು ತಮ್ಮನ್ನು ಯಾರೋ ಗಮನಿಸುತ್ತಿದ್ದಾರೆ ಎಂದು ಭಾವಿಸಿದರು. ಪರಿಣಾಮವಾಗಿ, ನಿವಾಸಿಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲು ನಿರ್ಧರಿಸಿದರು. ರೆಕಾರ್ಡಿಂಗ್ ನೋಡಿದ ನಂತರ, ಎಲ್ಲರೂ ಆಘಾತಕ್ಕೊಳಗಾದರು.
ಇದು ಆನ್ಲೈನ್ನಲ್ಲಿ ವೈರಲ್ ಆಗುತ್ತಲೇ ಹಲವರು ಅಚ್ಚರಿ, ಆತಂಕ ವ್ಯಕ್ತಪಡಿಸಿದರೆ ಮತ್ತೆ ಕೆಲವರು ತಮಾಷೆಯಾಗಿ ಬರೆದಿದ್ದಾರೆ. ಬೆಡ್ರೂಮ್ ದೃಶ್ಯಗಳನ್ನು ಲೈವ್ ಆಗಿ ನೋಡಲು ಹೀಗೆ ಮಾಡಿದ್ದಾನೆ. ಅದಕ್ಕಾಗಿ ಎಲ್ಲರೂ ಬೆಡ್ರೂಮ್ ಬಾಗಿಲು ಹಾಕಿಕೊಳ್ಳಬೇಕು ಎಂದು ಬರೆದಿದ್ದಾರೆ. ಅಷ್ಟಕ್ಕೂ ಈ ವ್ಯಕ್ತಿ ವಿಡಿಯೋಮಾಡಿದ ಮೇಲೆ ಅದನ್ನು ಬಾಲ್ಕನಿಯಲ್ಲಿ ಕೂತು ಸರಿಯಾಗಿ ಬಂದಿದ್ಯೋ, ಇಲ್ಲವೋ ಎಂದು ಪರಿಶೀಲಿಸುವುದನ್ನು ಕೂಡ ನೋಡಬಹುದಾಗಿದೆ.
इन चाचा को देखिए 😳
अपनी जान की परवाह किए बिना, पड़ोसी घर में हो रही लड़ाई का वीडियो बनाने के लिए खिड़की से लटक गए,
असल में बगल वाले घर में झगड़ा चल रहा था, लेकिन आवाज साफ सुनाई नहीं दे रही थी,
जिज्ञासा में चाचा साहब सीधे बिल्डिंग की खिड़की से झूलकर वीडियो रिकॉर्ड करने लग गए। pic.twitter.com/x33cdGG3uN— ʀᴜᴅʜʀᴀ ʏᴀᴅᴀᴠ🇮🇳 (@Rudhrayadav001) May 29, 2026