
ನಗರ ಜೀವನ ಶೈಲಿ ಎಷ್ಟೊಂದು ಬದಲಾಗಿದೆ ಎಂದರೆ ಇಂದು ಎಲ್ಲವೂ ಕುಳಿತಲ್ಲಿಗೆ. ಕೈಯಲ್ಲಿ ಮೊಬೈಲ್ ಅಗ್ಗದ ಬೆಲೆಯ ಇಂಟರ್‌ನೆಟ್, ಅದರಲ್ಲೊಂದು ಸ್ವಿಗ್ಗಿ, ಜೊಮ್ಯಾಟೋ ಇದ್ರೆ ಸಾಕು. ಬಯಸಿದ್ದೆಲ್ಲ ಹದಿನೈದು ನಿಮಿಷದಲ್ಲಿ ಮನೆ ಬಾಗಿಲಿಗೆ ಬಂದಿರುತ್ತೆ. ಆದರೆ ಅನುಕೂಲಗಳಿದ್ದಲ್ಲಿ ಹಲವು ಸಮಸ್ಯೆಗಳು ಇದ್ದೇ ಇರುತ್ತವೆ ನೋಡಿ. ನೇರ ಮಾರ್ಕೆಟ್ ಹೋದ್ರೂ ಕಣ್ಮುಂದೆ ಗ್ರಾಹಕರಿಗೆ ಮೋಸ ಮಾಡಿ, ಅವರ ಕಣ್ತಪ್ಪಿಸಿ ಕೊಳೆತ ಹಣ್ಣುಗಳನ್ನು ಸೇರಿಸುವ ಜನರಿರುವಾಗ ಇನ್ನು ಆನ್‌ಲೈನ್ ಶಾಪಿಂಗ್ನಲ್ಲಿ ಎಲ್ಲವೂ ತಾಜಾ ಇರುತ್ತದೆ ಎಂದು ಹೇಗೆ ನಂಬುವುದು? ಆರ್ಡರ್ ಮಾಡಿದ ಗ್ರಾಹಕರಿಗೆ ಶಾಕ್ ಕೊಟ್ಟ ಘಟನೆಯೊಂದು ನಡೆದಿದೆ. ಇದನ್ನು ಓದಿದರೆ ನೀವು ಆರ್ಡರ್ ಮಾಡುವಾಗ ಎಚ್ಚರಿಕೆವಹಿಸುತ್ತಿರಿ ಎಂಬ ಉದ್ದೇಶದಿಂದ ಆ ಘಟನೆ ಬಗ್ಗೆ ನಾನಿಲ್ಲಿ ನಿಮಗೆ ತಿಳಿಸುತ್ತಿದ್ದೇನೆ.
ಸೋಷಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ವೈರಲ್ ಆಗಿದ್ದು. ಗ್ರಾಹಕರು ಸ್ವಿಗ್ಗಿ ಇನಸ್ಟಾಮಾರ್ಟ್‌ನಲ್ಲಿ ಮೊಟ್ಟೆ ಆರ್ಡರ್ ಮಾಡಿದ್ದಾರೆ. ಆದರೆ ಗ್ರಾಹಕರಿಗೆ ಬಂದಿದ್ದು ಕೊಳೆತ ಮೊಟ್ಟೆಗಳು! ಕ್ವಿಕ್ ಕಾಮರ್ಸ್ ಫ್ಲಾಟ್‌ಫಾರ್ಮ್‌ಗಳ ಸುರಕ್ಷತೆ ಬಗ್ಗೆ ಈ ವಿಡಿಯೋ ನಮ್ಮ ಚಿಂತಿಸುವಂತೆ ಮಾಡಿದೆ.
ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಮೂಲಕ ಡಾ. ಹೆನ್ (Dr. Hen) ಬ್ರಾಂಡ್‌ನ ಒಂದು ಟ್ರೇ ಮೊಟ್ಟೆಯನ್ನು ಆರ್ಡರ್ ಮಾಡಿದೆ. ಆರ್ಡರ್ ಬಂದ ಬಳಿಕ ಪಾಕೆಟ್ ಓಪನ್ ಮಾಡಿ ನೋಡಿದಾಗ ಅದರಲ್ಲಿನ ಬಹುಪಾಲು ಮೊಟ್ಟೆಗಳು ಕೊಳೆತುಹೋಗಿದ್ದವು. ಕೊಳೆತ ಮೊಟ್ಟೆಗಳನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಮೊಟ್ಟೆ ಬೆಲೆ ಜೊತೆಗೆ ಡೆಲಿವರಿ ಚಾರ್ಜ್ ಹಾಗೂ ಇತರ ಶುಲ್ಕಗಳನ್ನು ಕಟ್ಟಿದರೂ ಇಂಥ ಕೊಳತ ಮೊಟ್ಟೆ ಕಳಿಸುತ್ತಾರಲ್ ಎಂದು ಸ್ವಿಗ್ಗಿ ವಿರುದ್ಧ ಕಿಡಿಕಾರಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಗ್ರಾಹಕರು ಕೂಡ ತಮಗಾದ ಇಂಥದ್ದೇ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆನ್‌ಲೈನ್ ಗ್ರಾಸರಿ ಹಾಗೂ ಕ್ವಿಕ್ ಡೆಲಿವರಿ ಆ್ಯಪ್‌ಗಳ ಮೂಲಕ ಕೊಳೆತ ಮೊಟ್ಟೆ, ಹಳಸಿದ ಆಹಾರ ಪದಾರ್ಥಗಳು ಬರುತ್ತಿವೆ ಎಂದು ಹಲವರು ದೂರಿದ್ದಾರೆ. ಅಮೆಜಾನ್ ನೌ (Amazon Now) ಮೂಲಕ ಡಾ. ಹೆನ್ ಮೊಟ್ಟೆಗಳನ್ನು ಖರೀದಿಸಿದಾಗಲೂ ಟ್ರೇನಲ್ಲಿದ್ದ ಹಲವು ಮೊಟ್ಟೆಗಳು ಹಾಳಾಗಿದ್ದವು ಎಂದು ಮತ್ತೊಬ್ಬ ಬಳಕೆದಾರರು ಕಮೆಂಟ್ ಮಾಡಿದ್ದಾರೆ.
क्या ही ज़िंदगी जी रहे हैं हम? @Swiggy के इंस्टामार्ट से Dr Hen कंपनी के अंडों का ट्रे मंगाया था।देख लीजिए अंडे के नाम पर क्या निकल रहा है।
एक नहीं लगभग हर अंडा ऐसा निकला
सारा टैक्स भरने के बाद और पैसा खर्च करने के बाद ढंग का खाना तक नहीं मिल रहा।
पहले ज़हर खाइए और अस्पताल… pic.twitter.com/THLCr9UcC3— Sushant Sinha (@SushantBSinha) September 30, 2026
ನಾವು ಆರ್ಡರ್ ಮಾಡಿದ್ದೇ ಒಂದು, ತಲುಪುವುದೇ ಇನ್ನೊಂದು. ಯಾವುದೇ ದೂರು ನೀಡಿದರೂ ಪ್ರಯಯೋಜನವಿಲ್ಲ. ಕೆಲವು ಸಲ ಪುಸ್ತಕಗಳನ್ನು ಆರ್ಡರ್ ಮಾಡಿದರೆ ಹರಿದುಹೋದ ಪುಸ್ತಕ ಕಳಿಸುತ್ತಾರೆ. ಬೇರೆಯದು ಬೇಕೆಂದು ವಾಪಸ್ ಕಳಿಸಿದರೆ ಹರಿದಿದ್ದೂ ಇಲ್ಲ, ಹೊಸದು ಇಲ್ಲ, ಕೊಟ್ಟ ಹಣವೂ ಇಲ್ಲ. ಯಾರಿಗೆ ದೂರು ನೀಡಿದರೂ ಪ್ರಯೋಜನವಾಗುವುದಿಲ್ಲ. ಹೀಗಾಗಿ ಈ ಆಪ್‌ಗಳು ಗ್ರಾಹಕರಿಗೆ ಸರಿಯಾಗಿ ಸ್ಪಂದಿಸುವುದಿಲ್ಲ ಎಂದು ಆರೋಪಿಸಿದ್ದಾರೆ. ಅಲ್ಲದೇ ನಾವು ಸ್ವಿಗ್ಗಿಯಲ್ಲಿ ಆರ್ಡರ್ ಮಾಡೋದು ಬಿಟ್ಟು ಬಹಳ ಕಾಲವಾಗಿದೆ ಎಂದು ಕೆಲವರು ಹೇಳಿದ್ದಾರೆ.
ಇನ್ನು ಕೆಲವರು ಮೊಟ್ಟೆಯಂತಹ ಬೇಗ ಹಾಳಾಗುವ ವಸ್ತುಗಳನ್ನು ಆನ್‌ಲೈನ್‌ನಲ್ಲಿ ತರಿಸುವ ಬದಲು, ನಮ್ಮ ಕಣ್ಣಾರೆ ನೋಡಿ ಪರೀಕ್ಷಿಸಿ ಹತ್ತಿರದ ಅಂಗಡಿಗಳಲ್ಲೇ ಖರೀದಿಸುವುದು ಹೆಚ್ಚು ಸುರಕ್ಷಿತ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಾರೆ ಈ ಘಟನೆಯು ಕ್ವಿಕ್ ಕಾಮರ್ಸ್ ವಲಯದಲ್ಲಿ ವಸ್ತುಗಳ ಸಂಗ್ರಹಣೆ, ನಿರ್ವಹಣೆ ಮತ್ತು ಗುಣಮಟ್ಟದ ತಪಾಸಣೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮೊಟ್ಟೆಯಂತಹ ವಸ್ತುಗಳನ್ನು ಸರಿಯಾದ ತಾಪಮಾನದಲ್ಲಿ ಸ್ಟೋರ್ ಮಾಡಬೇಕು. ಜೊತೆಗೆ ಹಳಸಿದ ಅಥವಾ ಹಾಳಾದ ಸ್ಟಾಕ್ ಗ್ರಾಹಕರಿಗೆ ತಲುಪದಂತೆ ಎಚ್ಚರವಹಿಸುವುದು ಬಹಳ ಮುಖ್ಯ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.