Viral Story: ಹುಟ್ಟುಹಬ್ಬಕ್ಕೆ ಸ್ನೇಹಿತ ಕೊಟ್ಟ ಸಣ್ಣ ಗಿಫ್ಟ್, ಆದರೆ ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ವ್ಯಕ್ತಿ!

Published : Sep 07, 2026, 11:18 AM IST
Friends

ಸಾರಾಂಶ

ವ್ಯಕ್ತಿಯೊಬ್ಬರಿಗೆ ಸ್ನೇಹಿತನಿಂದ ಹುಟ್ಟುಹಬ್ಬದ ಉಡುಗೊರೆಯಾಗಿ ಲಾಟರಿ ಟಿಕೆಟ್ ಸಿಕ್ಕಿತ್ತು. ಆ ಟಿಕೆಟ್‌ಗೆ ಬರೋಬ್ಬರಿ 1 ಮಿಲಿಯನ್ ಡಾಲರ್ (ಸುಮಾರು 9 ಕೋಟಿ ರೂಪಾಯಿ) ಬಹುಮಾನ ಬಂದಿದ್ದು, ಅವರು ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾರೆ.

ಹುಟ್ಟುಹಬ್ಬದ ಕಾಯಕ್ರಮಕ್ಕೆ ಬರುವವರು ಸಾಮಾನ್ಯವಾಗಿ ಬಟ್ಟೆ, ಚಿನ್ನ ಅಥವಾ ಬೇರೆ ಬೇರೆ ಉಡುಗೊರೆಗಳನ್ನು ನೀಡುವುದು ಸಾಮಾನ್ಯ. ಆದರೆ ಅಮೆರಿಕ ವ್ಯಕ್ತಿಯೊಬ್ಬರು, ಸ್ನೇಹಿತನ ಬರ್ತ್‌ಡೇ ದಿನ ಅಪರೂಪದ ಉಡುಗೊರೆಯನ್ನು ನೀಡಿದ್ದರು. ಈ ಉಡುಗೊರೆ ಆ ಸ್ನೇಹಿತನನ್ನ ಕೋಟ್ಯಾಧಿಪತಿ ಮಾಡಿದೆ.

ಇಲಿನಾಯ್ಸ್‌ನ ಬ್ರೈಡ್‌ವುಡ್‌ನ ನಿವಾಸಿಯೊಬ್ಬರಿಗೆ ಅತ್ಯಂತ ಅಚ್ಚರಿಯ ಘಟನೆ ಎದುರಾಯ್ತು. ತಮ್ಮ ಪತ್ನಿ ಆಯೋಜಿಸಿದ್ದ ಹುಟ್ಟುಹಬ್ಬದ ಆಚರಣೆಯ ಸಂದರ್ಭದಲ್ಲಿ ಸ್ನೇಹಿತರೊಬ್ಬರು ಉಡುಗೊರೆಯಾಗಿ ನೀಡಿದ್ದ ಲಾಟರಿ ಟಿಕೆಟ್ ಬರೋಬ್ಬರಿ 1 ಮಿಲಿಯನ್ ಡಾಲರ್ (ಭಾರತೀಯ ಕರೆನ್ಸಿಯಲ್ಲಿ ಸುಮಾರು 9 ಕೋಟಿ ರೂಪಾಯಿ) ಬಹುಮಾನವನ್ನು ಗೆದ್ದುಕೊಂಡಾಗ ಆ ದಂಪತಿಗಳ ಸಂತೋಷಕ್ಕೆ ಪಾರವೇ ಇರಲಿಲ್ಲ.

ಲಕ್ಷ ರೂಪಾಯಿ ಅಂದುಕೊಂಡರೆ ಕೋಟಿ ಕೋಟಿ ಹಣ!

ಇಲಿನಾಯ್ಸ್‌ನಲ್ಲಿ ಲಾಟರಿ ನಿರ್ವಹಿಸಿದ ಆಗಸ್ಟ್ 08ರ ಡ್ರಾದಲ್ಲಿ ಈ ಟಿಕೆಟ್‌ಗೆ 9 ಕೋಟಿ ಬಹುಮಾನ ಸಿಕ್ಕಿದೆ. ಪ್ರಮುಖವಾಗಿ ಇದರಲ್ಲಿದ್ದ ಆರು ಸಂಖ್ಯೆ (11, 17, 22, 26, 36, 45) ಡ್ರಾದಲ್ಲಿ ನಿಖರವಾಗಿ ಹೊಂದಾಣಿಕೆ ಆಗಿದ್ದವು. ಆದರೆ ಆರಂಭದಲ್ಲಿ ಆತನಿಗೆ ತನಗೆ ಎಷ್ಟು ಹಣ ಬಂದಿದೆ ಅಂತ ತಿಳಿದು ಬರಲಿಲ್ಲ. ಮೊದಲು ಕೇವಲ ಸುಮಾರು ಒಂದು ಸಾವಿರ ಡಾಲರ್ ಬಂದಿದೆ ಎಂದುಕೊಂಡಿದ್ದರು. ಆದರೆ ಆ ಬಳಿಕ ಸ್ನೇಹಿತರೊಬ್ಬರು ಚೆಕ್ ಮಾಡಿದ ಸಂದರ್ಭದಲ್ಲಿ ಜಾಕ್‌ಪಾಟ್‌ ಸಿಕ್ಕಿದ್ದು ದೃಢವಾಗಿತ್ತು.

ಆ ಬಳಿಕ ಪತ್ನಿಯೊಂದಿಗೆ ಹಣ ಪಡೆದುಕೊಳ್ಳಲು ಲಾಟರಿ ಪ್ರೈಜ್ ಸೆಂಟರ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ, ನಿಮಗೆ ಸಿಕ್ಕಿರೋದು ಕೇವಲ ಸಾವಿರ ಡಾಲರ್ ಅಲ್ಲ, ಬರೋಬ್ಬರಿ ಒಂದು ಮಿಲಿಯನ್ ಡಾಲರ್ ಜಾಕ್‌ಪಾಟ್ ಎಂದು ಸಿಬ್ಬಂದಿ ತಿಳಿಸಿದ್ದರು. ಇದರೊಂದಿಗೆ ದಂಪತಿಗೆ ಶಾಕ್ ಎದುರಾಗಿತ್ತು. ಲಾಟರಿ ಗೆದ್ದ ಮೊತ್ತ ಕೇಳಿ ದಂಪತಿ ಆನಂದದಿಂದ ಕಣ್ಣೀರಿಟ್ಟಿದ್ದರು. ಇದೇ ಟಿಕೆಟ್‌ನಲ್ಲಿ ಮತ್ತೆರಡು ಲೈನ್‌ ಸಂಖ್ಯೆಯಗಳು ಕೂಡ ಒಂದೇ ಆಗಿದ್ದ ಕಾರಣ, ಮತ್ತೆರಡು ಡಾಲರ್ ಕೂಡ ಸಿಕ್ಕಿತ್ತು.

ಹಣದೊಂದಿಗೆ ಏನು ಮಾಡ್ತಾರೆ?

ಗೆದ್ದ ಹಣದಲ್ಲಿ ದಂಪತಿ ಸ್ವಲ್ಪ ಹಣವನ್ನು ತೆಗೆದುಕೊಂಡು ಫ್ಲೋರಿಡಾದಲ್ಲಿರುವ ತಮ್ಮ ಕುಟುಂಬ ಸದಸ್ಯರನ್ನು ಭೇಟಿ ಮಾಡುತ್ತೇವೆ. ಅವರೊಂದಿಗೆ ತೆರಳುವ ವರ್ಷದ ಟೂರ್‌ಗೆ ಖರ್ಚು ಮಾಡುತ್ತೇವೆ. ಹೊಸ ಕಾರು, ಒಂದು ಗೋಲ್ಫ್ ಕಾರ್ಟ್ ಖರೀದಿ ಮಾಡುವ ಆಸೆ ಇದೆ. ತಮ್ಮ 40ನೇ ವರ್ಷದ ಮದುವೆ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಆಚರಿಸುತ್ತವೆ. ಈ ಕಾರ್ಯಕ್ರಮದಲ್ಲಿ ಮಕ್ಕಳಿಗೆ ವಿಶೇಷ ಉಡುಗೊರೆಯನ್ನು ನೀಡುತ್ತೇವೆ ಎಂದು ದಂಪತಿ ಸಂತಸ ವ್ಯಕ್ತಪಡಿಸಿದ್ದಾರೆ.

PREV
Read more Articles on
click me!

Recommended Stories

ಬೆಂಗಳೂರು ನೈಸ್ ರೋಡ್ ಟೋಲ್ ಕಟ್ಟದೆ, ಪ್ರಶ್ನೆ ಮಾಡಿ ಯುವತಿ; ತರಾಟೆ ತೆಗೆದುಕೊಂಡ ನಂತರ ಏನಾಯ್ತು ನೋಡಿ!
ಇತ್ತ ಬಿಗ್ ಬಾಸ್ ಶೋ ಆರಂಭದ ಬೆನ್ನಲ್ಲೇ, ಅತ್ತ ರಿಯಾಲಿಟಿ ಶೋನಲ್ಲಿ ಕಾಲು ಮುರಿದುಕೊಂಡು ವಿಕಲಾಂಗನಾದ ಯುವಕ!