ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್‌ ಆದ ಹೊಸ 'ಚಪಾತಿ ಮಣೆ': ತಮ್ಮನ ಬೋಳು ತಲೆ ಮೇಲೆಯೇ ರೊಟ್ಟಿ ಲಟ್ಟಿಸಿದ ಅಕ್ಕನ ವೀಡಿಯೊ ವೈರಲ್!

Published : Sep 24, 2026, 04:52 PM IST
Sister Uses Brother's Bald Head to Roll Roti

ಸಾರಾಂಶ

ಇನ್‌ಸ್ಟಾಗ್ರಾಮ್‌ನಲ್ಲಿ ಅಕ್ಕನೊಬ್ಬಳು ತನ್ನ ತಮ್ಮನ ಬೋಳು ತಲೆಯ ಮೇಲೆ ಚಪಾತಿ ಲಟ್ಟಿಸುತ್ತಿರುವ ವಿಡಿಯೋವೊಂದು ಭಾರಿ ವೈರಲ್ ಆಗಿದೆ. ತಮ್ಮ ಯಾವುದೇ ವಿರೋಧವಿಲ್ಲದೆ ಶಾಂತವಾಗಿ ಕುಳಿತಿರುವುದು ನೆಟ್ಟಿಗರ ಗಮನ ಸೆಳೆದಿದೆ. ಈ ತಮಾಷೆಯ ದೃಶ್ಯವನ್ನು ನೋಡಿ ಜನರು ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಬೆಂಗಳೂರು (ಸೆ.24): ಸೋಶಿಯಲ್‌ ಮೀಡಿಯಾದಲ್ಲಿ ಪ್ರತಿದಿನ ನೂರಾರು ತಮಾಷೆಯ ಹಾಗೂ ವಿಚಿತ್ರ ವೀಡಿಯೊಗಳು ಹರಿದಾಡುತ್ತಿರುತ್ತವೆ. ಆದರೆ, ಇನ್‌ಸ್ಟಾಗ್ರಾಮ್ ಯೂಸರ್‌ ಗೂಂಜಾ ಸೋನಿ (Gunja Soni) ಹಂಚಿಕೊಂಡಿರುವ ವೀಡಿಯೊವೊಂದು ನೆಟ್ಟಿಗರ ಗಮನವನ್ನು ಭಾರಿ ಪ್ರಮಾಣದಲ್ಲಿ ಸೆಳೆದಿದೆ. ಒಬ್ಬ ಅಕ್ಕ ತನ್ನ ತಮ್ಮನ ಬೋಳು ತಲೆಯನ್ನೇ ಚಪಾತಿ ಲಟ್ಟಿಸುವ ಮಣೆಯಾಗಿ (Rolling Board) ಬಳಸಿಕೊಂಡು ಚಪಾತಿ ಮಾಡುತ್ತಿರುವ ದೃಶ್ಯ ಈ ವೀಡಿಯೊದಲ್ಲಿದ್ದು, ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ.

ಸೆಪ್ಟೆಂಬರ್ 22, 2026 ರಂದು ಪೋಸ್ಟ್ ಮಾಡಲಾದ ಸಣ್ಣ ರೀಲ್‌ ಇಂಟರ್ನೆಟ್‌ನಲ್ಲಿ ತಕ್ಷಣವೇ ಟ್ರೆಂಡ್ ಆಗಿದೆ. ವೀಡಿಯೊ ಹಂಚಿಕೊಂಡ ಕೇವಲ ಒಂದೇ ದಿನದೊಳಗೆ 2 ಲಕ್ಷಕ್ಕೂ ಅಧಿಕ (203.7K) ಲೈಕ್ಸ್ ಹಾಗೂ 1,600 ಕ್ಕೂ ಹೆಚ್ಚು ಕಮೆಂಟ್‌ಗಳನ್ನು ಗಿಟ್ಟಿಸಿಕೊಳ್ಳುವ ಮೂಲಕ ಭಾರಿ ಜನಪ್ರಿಯತೆ ಪಡೆದುಕೊಂಡಿದೆ.

ಬೋಳು ತಲೆ ಮೇಲೆ ಚಪಾತಿ ಮಾಡಿದ ಅಕ್ಕ

ಈ ವೈರಲ್ ವೀಡಿಯೊಗೆ ಗೂಂಜಾ ಸೋನಿ ಅವರು "#beti mere badmash bachhe" (ನನ್ನ ತುಂಟ ಮಕ್ಕಳು/ಮಗಳು) ಎಂದು ತಮಾಷೆಯ ಶೀರ್ಷಿಕೆ ನೀಡಿದ್ದಾರೆ. ವೀಡಿಯೊದಲ್ಲಿ ಅಕ್ಕ ಸಮಾಧಾನವಾಗಿ ಚಪಾತಿ ಲಟ್ಟಿಸುವ ಕೆಲಸದಲ್ಲಿ ತೊಡಗಿದ್ದಾಳೆ, ಆದರೆ ಆಕೆ ಹಿಟ್ಟನ್ನು ಲಟ್ಟಿಸುತ್ತಿರುವುದು ಸಾಮಾನ್ಯ ಮಣೆಯ ಮೇಲಲ್ಲ, ಬದಲಿಗೆ ತನ್ನ ತಮ್ಮನ ಬೋಳು ತಲೆಯ ಮೇಲೆ!

ಕುತೂಹಲಕಾರಿ ಸಂಗತಿಯೆಂದರೆ, ಅಕ್ಕ ತನ್ನ ತಲೆಯ ಮೇಲೆ ಚಪಾತಿ ಲಟ್ಟಿತಿಸುತ್ತಿದ್ದರೂ ತಮ್ಮ ಯಾವುದೇ ಪ್ರತಿರೋಧ ತೋರದೆ, ಶಾಂತವಾಗಿ ಕುಳಿತಿರುವುದು ಈ ವೀಡಿಯೊದ ನಿಜವಾದ ಹೈಲೈಟ್. ಪ್ರತಿದಿನ ಮನೆಗಳಲ್ಲಿ ನಡೆಯುವ ಸಾಮಾನ್ಯ ಕೆಲಸವೊಂದನ್ನು ಈ ಅಕ್ಕ-ತಮ್ಮಂದಿರು ತಮ್ಮ ತುಂಟಾಟದ ಮೂಲಕ ಹಾಸ್ಯಾಸ್ಪದವಾಗಿ ಹಾಗೂ ಸೃಜನಶೀಲವಾಗಿ ಮರುಸೃಷ್ಟಿಸಿರುವುದು ವೀಕ್ಷಕರ ಮುಖದಲ್ಲಿ ಮಂದಹಾಸ ಮೂಡಿಸಿದೆ.

"ಈ ಪ್ರೊಡಕ್ಟ್ ಲಿಂಕ್ ಎಲ್ಲಿ ಸಿಗುತ್ತೆ?": ನೆಟ್ಟಿಗರ ನಗುವಿನ ಅಲೆ!

ಈ ವೀಡಿಯೊ ಸೋಶೀಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಮೆಂಟ್ ಬಾಕ್ಸ್‌ನಲ್ಲಿ ಹಾಸ್ಯದ ಸುರಿಮಳೆಯನ್ನೇ ಹರಿಸಿದ್ದಾರೆ. ಯೂಸರ್‌ ಒಬ್ಬರು ತಮಾಷೆಯಾಗಿ, "ಚಪಾತಿ ಲಟ್ಟಿಸುವ ಈ ಹೊಸ ಮಣೆಯ ಪ್ರೊಡಕ್ಟ್ ಲಿಂಕ್ (Product Link) ಕೊಡ್ತೀರಾ?" ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ನೆಟ್ಟಿಗ, "ಮಾರ್ಕೆಟ್‌ಗೆ ಹೊಸ ರೋಟಿ ಮೇಕರ್ ಬಂದಿದೆ, ದಯವಿಟ್ಟು ಯಾರಾದರೂ ಇದನ್ನು ಆರ್ಡರ್ ಮಾಡಲು ಲಿಂಕ್ ಶೇರ್ ಮಾಡಿ" ಎಂದು ಕಾಲೆಳೆದಿದ್ದಾರೆ. ಇನ್ನು ಕೆಲವರು, "ನನ್ನ ಕೆಮಿಸ್ಟ್ರಿ ಪ್ರೊಫೆಸರ್ ಜೊತೆ ನಾನು ಹೀಗೆಯೇ ಮಾಡಬೇಕು ಅಂದುಕೊಂಡಿದ್ದೆ" ಎಂದು ತಮಾಷೆ ಮಾಡಿದ್ದಾರೆ. ಮತ್ತೊಬ್ಬ ಯೂಸರ್‌, "ಆ ಹುಡುಗ ನಿಜಕ್ಕೂ ಭಾರಿ ಸೈಲೆಂಟ್ ಮತ್ತು ಕೂಲ್ ಆಗಿದ್ದಾನೆ, ಅವನ ಶಾಂತತೆಗೆ ಹೆದರಬೇಕು!" ಎಂದು ಕಮೆಂಟ್ ಮಾಡಿದ್ದಾರೆ.

ದೈನಂದಿನ ಜೀವನದ ಸಣ್ಣ ಸಣ್ಣ ತಮಾಷೆಯ ಕ್ಷಣಗಳು ಹೇಗೆ ಸೋಶಿಯಲ್ ಮೀಡಿಯಾದಲ್ಲಿ ಜಾಗತಿಕ ಮಟ್ಟದ ಚರ್ಚೆಯಾಗುತ್ತವೆ ಎಂಬುದಕ್ಕೆ ಈ ಅಕ್ಕ-ತಮ್ಮನ ರೊಟ್ಟಿ ವೀಡಿಯೊ ಅತ್ಯುತ್ತಮ ನಿದರ್ಶನವಾಗಿದೆ.

PREV
Read more Articles on
click me!

Recommended Stories

250 ಕಂಪನಿಗಳಿಗೆ ಅರ್ಜಿ, 0 ಇಂಟರ್ವ್ಯೂವ್! ಇದು IIM ಗೋಲ್ಡ್ ಮೆಡಲಿಸ್ಟ್ ಕೆಲಸಕ್ಕಾಗಿ ಪರದಾಡಿದ ಕಥೆ!
ಇಲ್ಲಿ ಮಗಳೇ ದೇವತೆಯಾಗುತ್ತಾಳೆ: ನೇಪಾಳದ ಕುಮಾರಿ ಪೂಜೆಯ ಹಿಂದಿದೆ ರೋಚಕ ಪರಂಪರೆ!