
ಸೀಮಾ ಹೈದರ್ ಭಾರತ ಹಾಗೂ ಪಾಕಿಸ್ತಾನದಲ್ಲಿ ಬಾರಿ ಕೋಲಾಹಲ ಸೃಷ್ಟಿಸಿದ ಮಹಿಳೆ. ಮದುವೆಯಾಗಿ ಮಕ್ಕಳಿರುವಾಗಲೇ ಭಾರತದ ಸಚಿನ್ ಮೀನಾ ಜೊತೆ ಪ್ರೀತಿಯಲ್ಲಿ ಬಿದ್ದ ಸೀಮಾ ಹೈದರ್ ಮಕ್ಕಳ ಜೊತೆ ಭಾರತಕ್ಕೆ ಬಂದ ಸೀಮಾ ಇದೀಗ 6 ಮಕ್ಕಳ ತಾಯಿಯಾಗಿದ್ದಾರೆ. ಕಳೆದ ಹಲವು ದಿನಗಳಿಂದ ಸೀಮಾ ಹೈದರ್ ಸೈಲೆಂಟ್ ಆಗಿದ್ದರು. ಸುದೀರ್ಘ ದಿನಗಳ ಬಳಿಕ ಸೀಮಾ ಹೈದರ್ ಡ್ಯಾನ್ಸ್ ರೀಲ್ಸ್ ಪೋಸ್ಟ್ ಮಾಡಿದ್ದಾರೆ. ಆದರೆ ಸೀಮಾ ಹೈದರ್ ಮಾಡಿರುವ ಡ್ಯಾನ್ಸ್ ರೀಲ್ಸ್‌ಗಿಂತ ಹೆಚ್ಚು ಕೋಣೆಯಲ್ಲಿರುವ ಫೋಟೋ ಕುರಿತು ಭಾರಿ ಚರ್ಚೆಯಾಗುತ್ತಿದೆ.
ಸೀಮಾ ಹೈದರ್ ತಮ್ಮ ಮನೆ ಅಥವಾ ಖಾಸಗಿ ಕೋಣೆಯಲ್ಲಿ ಡ್ಯಾನ್ಸ್ ವಿಡಿಯೋ ಮಾಡಿದ್ದಾರೆ. ಬಾಲಿವುಡ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಬೆಡ್ ಮೇಲೆ ಕುಳಿತು ಹಾಡಿಗೆ ಲಿಪ್ ಸಿಂಕ್ ಮಾಡಿದ್ದಾರೆ. ಸೀಮಾ ಹೈದರ್ ಈ ವಿಡಿಯೋ ಮಾಡುವಾ ಕೋಣೆಯ ಹಿಂಭಾಗದಲ್ಲಿ ಫೋಟೋ ಒಂದು ಕಾಣಿಸಿಕೊಂಡಿದೆ. ಸೀಮಾ ಹೈದರ್ ಪತಿ ಸಚಿನ್ ಮೀನಾ ಫೋಟೋ ಅಲ್ಲ. ಹೀಗಾಗಿ ಎಲ್ಲರ ಚಿತ್ತ ಈ ಫೋಟೋ ಮೇಲೆ ನೆಟ್ಟಿದೆ. ಸೀಮಾ ಹೈದರ್ ಡ್ಯಾನ್ಸ್ ರೀಲ್ಸ್‌ನ ಹಿಂದೆ ಕಾಣಿಸುವ ಫೋಟೋ ಆಕೆಯ ವಕೀಲರ ಫೋಟೋ. ಸೀಮಾ ಹೈದರ್ ವಕೀಲ ಎಪಿ ಸಿಂಗ್ ಫೋಟೋ ಇದೀಗ ಭಾರಿ ಚರ್ಚೆಯಾಗುತ್ತಿದೆ.
ಸೀಮಾ ಹೈದರ್ ಬೆಡ್ ರೂಂನಲ್ಲಿ ಎಪಿ ಸಿಂಗ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗಿದೆ. ಬೆಡ್‌ರೂಂನಲ್ಲಿ ಸೀಮಾ ಹೈದರ್ ಪತಿ ಫೋಟೋ ಇರುವುದು ಸಾಮಾನ್ಯ, ಅಥವಾ ಸೀಮಾ ಹೈದರ್, ಸಚಿನ್ ಮೀನಾ ಕುಟುಂಬಸ್ಥರ ಫೋಟೋ ಇದ್ದರೂ ವಿಶೇಷವಲ್ಲ, ಆದರೆ ಲಾಯರ್ ಫೋಟೋ ಹಿಂದಿನ ರಹಸ್ಯವೇನು ಎಂದು ಹಲವರು ಪ್ರಶ್ನಿಸಿದ್ದಾರೆ. ಸೀಮಾ ಹೈದರ್ ಭಾರತಕ್ಕೆ ಬಂದ ಬಳಿಕ ಹಲವು ಕಾನೂನು ತೊಡಕು, ಸಮಸ್ಯೆಗಳು ಎದುರಾಗಿತ್ತು. ಈ ವೇಳೆ ಸೀಮಾ ಹೈದರ್ ಪರ್ ಎಪಿ ಸಿಂಗ್ ಹಾಜರಾಗಿದ್ದರು. ಮಾಧ್ಯಮಗಳಲ್ಲೂ ಎಪಿ ಸಿಂಗ್ ಹಲವು ಬಾರಿ ಕಾಣಿಸಿಕೊಂಡಿದ್ದಾರೆ. ಇದೀಗ ಸೀಮಾ ಹೈದರ್ ಬೆಡ್ ರೂಂನಲ್ಲಿರುವ ಎಪಿ ಸಿಂಗ್ ಫೋಟೋ ಕೋಲಾಹಲಕ್ಕೆ ಕಾರಣವಾಗಿದೆ.
ಸೀಮಾ ಹೈದರ್ ರೀಲ್ಸ್ ವಿಡಿಯೋಗಿಂತ ಹೆಚ್ಚು ಇದೀಗ ಲಾಯರ್ ಫೋಟೋ ಚರ್ಚೆಯಾಗುತ್ತಿದೆ. ಹಲವು ಸೀಮಾ ಹೈದರ್ ಭಾರತದಲ್ಲಿ ಉಳಿದುಕೊಳ್ಳಲು ಎಪಿ ಸಿಂಗ್ ಕಾರಣರಾಗಿದ್ದಾರೆ. ಸೀಮಾ ಹೈದರ್ ಹಾಗೂ ಸಚಿನ್ ಮೀನಾ ಪರ ವಾದಿಸಿ ಕಾನೂನು ಗೆಲುವು ತಂದುಕೊಟ್ಟಿದ್ದಾರೆ. ಹೀಗಾಗಿ ಎಪಿ ಸಿಂಗ್ ಫೋಟೋ ಇಟ್ಟುಕೊಂಡಿದ್ದಾರೆ ಎಂದು ಸಮರ್ಥನೆ ನೀಡಿದ್ದಾರೆ. ಆದರೆ ಚರ್ಚೆ, ಪ್ರಶ್ನೆಗಳು ತೀವ್ರಗೊಳ್ಳುತ್ತಿದೆ.
ಸೀಮಾ ಹೈದರ್ 2023ಮೇ ತಿಂಗಳಲ್ಲಿ ಪಾಕಿಸ್ತಾನದ ಗಂಡನ ಬಿಟ್ಟು ಮಕ್ಕಳ ಜೊತೆ ನೇರವಾಗಿ ನೇಪಾಳಕ್ಕೆ ಬಂದಿದ್ದರು. ಇತ್ತ ಸೀಮಾ ಹೈದರ್ ಜೊತೆ ಸೋಶಿಯಲ್ ಮೀಡಿಯಾದಲ್ಲಿ ರಿಲೇಶನ್‌ಶಿಪ್ ಬೆಳೆಸಿಕೊಂಡ ಸಚಿನ್ ಮೀನಾ ಕೂಡ ನೇರವಾಗಿ ನೇಪಾಳಕ್ಕೆ ಹೋಗಿ ಭೇಟಿಯಾಗಿದ್ದರು. ಪಬ್‌ಜಿ ಗೇಮ್ ಮೂಲಕ ಇವರಿಬ್ಬರು ಆನ್‌ಲೈನ್ ಮೂಲಕ ಬೇಟಿಯಾಗಿದ್ದರು. ಬಳಿಕ ಈ ಪರಿಚಯ, ಪ್ರೀತಿಯಾಗಿ ತಿರುಗಿತ್ತು. ಬಳಿಕ ಉತ್ತರ ಪ್ರದೇಶದ ಗೌತಮ ಬುದ್ಧ ನಗರ ಜಿಲ್ಲೆಯಲ್ಲಿ ಸೀಮಾ ಹೈದರ್ ಹಾಗೂ ಸಚಿನ್ ಮೀನಾ ಪತ್ತೆಯಾಗಿದ್ದರು. ಸೀಮಾ ಹೈದರ್ ಪತ್ತೆ ಪ್ರಕರಣ ಕೋಲಾಹಲ ಸೃಷ್ಟಿಸಿತ್ತು. ಒಂದೆಡೆ ಪಾಕಿಸ್ತಾನದ ಗಂಡ ಕೂಡ ಪ್ರಕರಣ ದಾಖಲಿಸಿದ್ದರೆ, ಇತ್ತ ಪಾಕಿಸ್ತಾನದಿಂದ ಬಂದು ದಾಖಲೆಗಳಿಲ್ಲದೆ ಭಾರತದಲ್ಲಿ ಇರುವಿಕೆ ಕುರಿತು ಕೆಲ ಪ್ರಕರಣ ದಾಖಲಾಗಿತ್ತು. ಈ ವೇಳೆ ಸಚಿನ್ ಮೀನಾ ಹಾಗೂ ಸೀಮಾ ಹೈದರ್ ವಕೀಲರಾಗಿ ಎಪಿ ಸಿಂಗ್ ನೇಮಕ ಮಾಡಿದ್ದರು.
सीमा हैदर का यह वीडियो वायरल हो रहा है।
वायरल होने का कारण सीमा हैदर के बेडरूम में उनके वकील की फोटो लगी होना है।
लोग कह रहे हैं कि सचिन की जगह वकील की फोटो क्यों लगी। pic.twitter.com/BCq4fo6WOV— Rajendra Raj (@iamrajendraraj) September 12, 2026