Biman Bangladesh Airlines incident: ಬಾಂಗ್ಲಾದೇಶಕ್ಕೆ ಹೊರಟಿದ್ದ ವಿಮಾನದಲ್ಲಿ ಹೊಡೆದಾಟ; ಪ್ರಯಾಣಿಕರಿಗೆ ಆತಂಕ | ವಿಡಿಯೋ

Published : Sep 18, 2026, 02:55 PM IST
Biman Bangladesh Airlines

ಸಾರಾಂಶ

ಲಂಡನ್‌ನಿಂದ ಬಾಂಗ್ಲಾದೇಶದ ಡಾಕಾಗೆ ಹೊರಟಿದ್ದ ಬಿಮಾನ್ ಬಾಂಗ್ಲಾದೇಶ ಏರ್‌ಲೈನ್ಸ್‌ ವಿಮಾನದಲ್ಲಿ ಇಬ್ಬರು ಪ್ರಯಾಣಿಕರು ಪರಸ್ಪರ ಘನಘೋರವಾಗಿ ಹೊಡೆದಾಡಿಕೊಂಡಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿತು. ಪೈಲಟ್ ಹಾಗೂ ಇತರರು ಪರಿಸ್ಥಿತಿ ತಿಳಿಗೊಳಿಸಿದರು. ಘಟನೆಯ ವಿಡಿಯೋ ವೈರಲ್

ನೆಲದ ಮೇಲೆ ಓಡುವ ಪ್ರಯಾಣಿಕರ ಬಸ್‌ಗಳಲ್ಲಿ ಜಗಳ ಸಾಮಾನ್ಯ. ಚಲಿಸುತ್ತಿರುವ ಬಸ್‌ನಲ್ಲಿ ಪ್ರಯಾಣಿಕರು ಸೀಟಿನ ವಿಚಾರಕ್ಕೋ, ಮೈಕೈ ತಾಗಿದ್ದಕ್ಕೋ ಜಗಳ ಮಾಡಿದರೆ ರಸ್ತೆ ಮಧ್ಯೆ ಬಸ್ ನಿಲ್ಲಿಸಿ ಜಗಳ ಬಿಡಿಸಬಹುದು ಆಗಲೂ ಮುಂದುವರಿದರೆ ಇಬ್ಬರು ಪ್ರಯಾಣಿಕರನ್ನ ಬಸ್‌ನಿಂದ ಕೆಳಗಳಿಸಿ ಸಾಗಬಹುದು. ಆದರೆ ಆಗಸದಲ್ಲಿ ಹಾರುತ್ತಿರುವ ವಿಮಾನದಲ್ಲಿ ಪರಸ್ಪರ ಇಬ್ಬರು ಪ್ರಯಾಣಿಕರು ಘನಘೋರವಾಗಿ ಹೊಡೆದಾಡಲು ಶುರುಮಾಡಿದರೆ ಏನು ಮಾಡವುದು? ನೆನಸಿಸಿಕೊಂಡರೆ ಮತ್ತು ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರೆ ಅದೆಷ್ಟು ಆತಂಕಕ್ಕೆ ಕಾರಣವಾಗುತ್ತದಲ್ಲವೇ?

ಬಿಮನ್ ಬಾಂಗ್ಲಾದೇಶ ವಿಮಾನದಲ್ಲಿ ಜಗಳ, ಆತಂಕ

ಹೌದು ಅಂತಹದ್ದೊಂದು ಘಟನೆ ಲಂಡನ್‌ನಿಂದ ಬಾಂಗ್ಲಾದೇಶದ ಡಾಕಾಗೆ ಹೊರಟಿದ್ದ ವಿಮಾನದಲ್ಲಿ ನಡೆದಿದೆ. ಇಬ್ಬರ ಪ್ರಯಾಣಿಕರ ಮಧ್ಯೆ ಮಾತಿಗೆ ಮಾತು ಬೆಳೆದು ಕೆಲವೇ ಕ್ಷಣಗಳಲ್ಲಿ ಪರಸ್ತರ ದೈಹಿಕವಾಗಿ ಹೊಡೆದಾಡು ಶುರು ಮಾಡಿದ್ದಾರೆ. ಇದರಿಂದ ವಿಮಾನದೊಳಗಿದ್ದ ಇತರೆ ಪ್ರಯಾಣಿಕರಿಗೆ ಆತಂಕ. ಪರಿಸ್ಥಿತಿ ತಿಳಿಗೊಳಿಸಲು ಮಧ್ಯ ಪ್ರವಶಿಸಿದರೂ ಇಬ್ಬರ ನಡವಿನ ಜಗಳ ವಿಕೋಪಕ್ಕೆ ತಿರುಗಿ ಪರಸ್ಪರ ಹಲ್ಲೆ ಮಾಡುತ್ತಾ ನೂಕಾಡುತ್ತಾ ಬಟ್ಟ ಹರಿದುಕೊಂಡಿದ್ದಾರೆ. ವಿಮಾನದಲ್ಲಿ ಹೊಡೆದಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬಿಮಾನ್ ಬಾಂಗ್ಲಾದೇಶ ಏರ್‌ಲೈನ್ಸ್‌ ವಿಮಾನದಲ್ಲಿ ಈ ಘಟನೆ ನಡೆದಿದೆ.

ಘಟನೆಯ ವಿಡಿಯೋ ವೈರಲ್

ವಿಮಾನದಲ್ಲಿ ಹೊಡೆದಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಇಬ್ಬರು ಪ್ರಯಾಣಿಕರು ಹೊಡೆದಾಡಿಕೊಳ್ಳುತ್ತಿದ್ದಾರೆ. ಇಡೀ ವಿಮಾನ ಆತಂಕ, ಅವ್ಯವಸ್ಥೆಯಿಂದ ತುಂಬಿತುಳುಕುತ್ತಿದೆ. ನೆಲದಮೇಲೆ ನಡೆಯುವ ಸಾಮಾನ್ಯ ಜಗಳದಂತೆ ಇಡೀ ವಿಮಾನದ ತುಂಬಾ ಆಸನದಲ್ಲಿ ಕೂರದೆ ಇಬ್ಬರ ನಡುವಿನ ಜಗಳ ಬಿಡಿಸಲು ಪ್ರಯಾಣಿಕರು ಮಧ್ಯ ಪ್ರವೇಶಿಸಿದ್ದಾರೆ.

ಪ್ರಯಾಣಿಕರಷ್ಟೇ ಅಲ್ಲದೆ ಪೈಲೆಟ್ ಸಹ ಪ್ರಯಾಣಿಕರ ಬಳಿಗೆ ಬಂದು ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿರುವುದು ವಿಡಿಯೋ ಕಾಣಬಹುದಾಗಿದೆ.

ಡಾಕಾ ಟ್ರಿಬ್ಯೂನ್ ಪ್ರಕಾರ, ಬಿಮನ್ ಬಾಂಗ್ಲಾದೇಶ ಏರ್‌ಲೈನ್ಸ್‌ ವಿಮಾನವು ಲಂಡನ್‌ನಿಂದ ಡಾಕಾಗೆ ಹೊರಟಿತ್ತು. ಈ ವೇಳೆ ಇಬ್ಬರು ಪ್ರಯಾಣಿಕರು ಕ್ಷುಲ್ಲಕ ಕಾರಣಕ್ಕೆ ಪರಸ್ಪರ ಮಾತಿಗೆ ಮಾತು ಬೆಳೆಸಿದ್ದಾರೆ. ಬಳಿಕ ಪರಸ್ಪರ ಹಲ್ಲೆಗೆ ಮಾಡಿಕೊಂಡಿದ್ದಾರೆ. ಪರಸ್ಪರ ಒದ್ದುಕೊಂಡಿದ್ದಾರೆ. ಈ ವೇಳೆ ಓರ್ವನ ಟೀಶರ್ಟ್ ಹರಿದುಹೋಗಿದೆ.

ಘಟನೆ ಬಗ್ಗೆ ಬಿಮಾನ್ ಬಾಂಗ್ಲಾದೇಶ ಪ್ರತಿಕ್ರಿಯಿಸಿದ್ದು, ಸಂಸ್ಥೆಯ ಜನರಲ್ ಮ್ಯಾನೇಜರ್ ಮಹ್ಬುದ್ದೀನ್ ಅಹ್ಮದ್ ಘಟನೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಆದರೆ ಶೀಘ್ರದಲ್ಲೇ ವಿಮಾನದಲ್ಲಿ ಆತಂಕ ಸೃಷ್ಟಿಸಿದ ಆರೋಪಿಗಳನ್ನು ಪತ್ತೆಹಚ್ಚುತ್ತೇವೆ ಎಂದು ಹೇಳಿದ್ದಾರೆ. ಘಟನೆಯ ಕುರಿತು ವಿಮಾನಯಾನ ಸಂಸ್ಥೆಯು ಹೆಚ್ಚಿನ ಪ್ರತಿಕ್ರಿಯೆ ನೀಡಿಲ್ಲ.

ಈ ವಿಡಿಯೋ ನೋಡಿದ ಸೋಷಿಯಲ್ ಮೀಡಿಯಾ ಬಳಕೆದಾರು ವಿಭಿನ್ನ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಬಾಂಗ್ಲಾದೇಶಿಗರು ಅನಾಗರಿಕರು ಇವರು ನೆಲದ ಮೇಲೆ ಜಗಳ ಮಾಡಲು ಸ್ಥಳವೇ ಇಲ್ಲ. ಹೀಗಾಗಿ ಆಕಾಶದಲ್ಲಿ ಜಗಳ ಮಾಡುವ ಪ್ರಯತ್ನ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಇನ್ನೊರ್ವ, ಇನ್ನೊಮ್ಮೆ ಇಂಥ ಘಟನೆ ಮರುಕಳಿಸಿದರೆ ಆಕಾಶದಿಂದ ಹೊರಗೆ ದಬ್ಬಿಬಿಡಿ ಅಂತಾ ಅಪಾಯಕಾರಿ ಸಲಹೆ ನೀಡದ್ದಾರೆ. ಒಟ್ಟಾರೆ ಈ ಘಟನೆಯಿಂದ ಪ್ರಯಾಣಿಕರು ಆತಂಕಗೊಂಡಿದ್ದು ಹೌದು.

PREV
Read more Articles on
click me!

Recommended Stories

ಪತ್ನಿ ತವರಿಗೆ ಹೋದಳೆಂದು ಕಾಲ್​ಗರ್ಲ್​ ಬುಕ್​ ಮಾಡಿದ ಗಂಡ! ಪರಸ್ಪರ ಮುಖ ನೋಡಿದಾಗ ಆಗಿದ್ದೇ ಬೇರೆ
AI ಫೋಟೋದಿಂದ 45 ವರ್ಷದ ಹಿಂದಿನ ಕಳ್ಳತನ ಪತ್ತೆ: ವೈರಲ್ ಕಥೆಗೆ ಪೊಲೀಸರಿಂದಲೇ ಸಿಕ್ತು ಬಿಗ್ ಟ್ವಿಸ್ಟ್!