ಇಲ್ಲಿ ದ್ರಾಕ್ಷಿ ತೋಟಗಳ ರಕ್ಷಣೆಗೆ ಗೂಬೆಗಳ ನೇಮಕ.. ಕೋಟಿ, ಕೋಟಿ ಬೆಳೆಗಳಿಗೆ ಸೈನಿಕರಂತೆ ರಕ್ಷಣೆ..!

Published : Aug 07, 2026, 12:27 PM IST
barn owls for pest control

ಸಾರಾಂಶ

ರೈತರಿಗೆ ಪ್ರಕೃತಿ ನೀಡಿದ ಅದ್ಭುತ ಕೊಡುಗೆ ಎಂದರೆ ಅದು 'ಆಕಾಶದ ಬೇಟೆಗಾರ' ಗೂಬೆಗಳು. ಕೋಟ್ಯಂತರ ರೂಪಾಯಿ ಬೆಳೆ ನಾಶ ಮಾಡುತ್ತಿದ್ದ ಇಲಿಗಳ ಗುಂಪನ್ನು ಬೇಟೆಯಾಡಲು ದ್ರಾಕ್ಷಿ ತೋಟಗಳ ಮಾಲೀಕರು ಒಂದು ವಿಶಿಷ್ಟ ತಂತ್ರ ರೂಪಿಸಿದ್ದಾರೆ. ಈ ಕುರಿತ ಕಂಪ್ಲೀಟ್ ಮಾಹಿತಿ ಇಲ್ಲಿದೆ..

ರೈತರಿಗೆ ಪ್ರಕೃತಿ ನೀಡಿದ ಅದ್ಭುತ ಕೊಡುಗೆ ಎಂದರೆ ಅದು 'ಆಕಾಶದ ಬೇಟೆಗಾರ' ಗೂಬೆಗಳು. ಕೋಟ್ಯಂತರ ರೂಪಾಯಿ ಬೆಳೆ ನಾಶ ಮಾಡುತ್ತಿದ್ದ ಇಲಿಗಳ ಗುಂಪನ್ನು ಬೇಟೆಯಾಡಲು ದ್ರಾಕ್ಷಿ ತೋಟಗಳ ಮಾಲೀಕರು ಒಂದು ವಿಶಿಷ್ಟ ತಂತ್ರ ರೂಪಿಸಿದ್ದಾರೆ. ವಿಷಕಾರಿ ರಾಸಾಯನಿಕಗಳ ಬದಲಿಗೆ 'ಬರ್ನ್ ಗೂಬೆ'ಗಳ (Barn Owls) ಸಹಾಯದಿಂದ ಇಲಿಗಳ ಹಾವಳಿಗೆ ಬ್ರೇಕ್ ಹಾಕುತ್ತಿದ್ದಾರೆ.

ಕ್ಯಾಲಿಫೋರ್ನಿಯಾ ರೈತರ ಹೊಸ ದಾರಿ

ಕ್ಯಾಲಿಫೋರ್ನಿಯಾದ ದ್ರಾಕ್ಷಿ ತೋಟಗಳ ಮಾಲೀಕರು ತಮ್ಮ ಬೆಳೆ ರಕ್ಷಿಸಿಕೊಳ್ಳಲು ಈಗ ಪ್ರಕೃತಿಯ ಮೊರೆ ಹೋಗಿದ್ದಾರೆ. ಸಾಮಾನ್ಯವಾಗಿ ಬೆಳೆಗಳಿರುವ ಕಡೆ ಇಲಿಗಳು, ಮೂಷಕಗಳು ಮತ್ತು ವಿಷಕಾರಿ ಹುಳುಗಳ ಕಾಟ ಹೆಚ್ಚು. ಅದರಲ್ಲೂ ಕ್ಯಾಲಿಫೋರ್ನಿಯಾದ ಹವಾಮಾನ ಇವುಗಳ ಸಂತಾನೋತ್ಪತ್ತಿಗೆ ಪೂರಕವಾಗಿದೆ. ಇದರಿಂದ ಪ್ರತಿವರ್ಷ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿತ್ತು. ಇದಕ್ಕೆ ಪರಿಹಾರವಾಗಿ ಅಲ್ಲಿನ ವೈನ್ ತಯಾರಕರು ಗೂಬೆಗಳನ್ನು ತಮ್ಮ ತೋಟಕ್ಕೆ ಆಹ್ವಾನಿಸುತ್ತಿದ್ದಾರೆ!

ವೈಜ್ಞಾನಿಕ ಅಧ್ಯಯನದಲ್ಲಿ ಬಯಲಾದ ಸತ್ಯ

ಕ್ಯಾಲಿಫೋರ್ನಿಯಾದ ಹಂಬೋಲ್ಟ್ ವಿಶ್ವವಿದ್ಯಾಲಯದ ಪ್ರೊಫೆಸರ್ ಮ್ಯಾಟ್ ಜಾನ್ಸನ್ ಮತ್ತು ಅವರ ತಂಡ ಈ ಬಗ್ಗೆ ವಿಶೇಷ ಸಂಶೋಧನೆ ನಡೆಸಿದೆ. ನಾಪಾ ವ್ಯಾಲಿಯ ದ್ರಾಕ್ಷಿ ತೋಟಗಳಲ್ಲಿ ಗೂಬೆಗಳಿಗಾಗಿ ವಿಶೇಷ ಗೂಡುಗಳನ್ನು (Owl Boxes) ನಿರ್ಮಿಸಿ ಅದರ ದತ್ತಾಂಶವನ್ನು ವಿಶ್ಲೇಷಿಸಿದಾಗ ಆಶ್ಚರ್ಯಕರ ಸಂಗತಿಗಳು ಬೆಳಕಿಗೆ ಬಂದಿವೆ. ಇಲಿಗಳ ಸಂಖ್ಯೆಯಲ್ಲಿ ಶೇ. 52ರಷ್ಟು ಇಳಿಕೆ: ಗೂಬೆಗಳ ಗೂಡುಗಳಿರುವ ತೋಟಗಳಲ್ಲಿ ಇಲಿಗಳ ಸಂಚಾರ ಗಣನೀಯವಾಗಿ ಕಡಿಮೆಯಾಗಿದೆ.

ಒಂದು ಗೂಬೆ ಕುಟುಂಬ – ಸಾವಿರಾರು ಇಲಿಗಳ ಬೇಟೆ ಒಂದು ಬರ್ನ್ ಗೂಬೆ ಕುಟುಂಬವು ವರ್ಷಕ್ಕೆ ಸುಮಾರು 1,000 ದಿಂದ 4,000 ಇಲಿಗಳನ್ನು ಬೇಟೆಯಾಡುತ್ತವೆ. ಗೂಬೆಗಳು ಕೇವಲ ಬೇಟೆಯಾಡುವುದು ಮಾತ್ರವಲ್ಲದೆ, ಅವುಗಳ ಇರುವಿಕೆಯಿಂದಲೇ ಶೇ. 16 ರಿಂದ 38 ರಷ್ಟು ಇಲಿಗಳು ಭಯಪಟ್ಟು ತೋಟದ ಹತ್ತಿರ ಸುಳಿಯುತ್ತಿಲ್ಲ. ಅಂದರೆ ಇವು ಜೀವಂತ 'ಬೆದರು ಬೊಂಬೆ'ಗಳಂತೆ ಕೆಲಸ ಮಾಡುತ್ತಿವೆ.

ದ್ರಾಕ್ಷಿ ಬಳ್ಳಿಗಳು ಗೂಬೆಗಳಿಗೆ ಅಡಗಿಕೊಳ್ಳಲು ರಕ್ಷಣೆ ನೀಡಿದರೆ, ಗೂಬೆಗಳು ಇಲಿಗಳ ಮೇಲೆ ಸದ್ದಿಲ್ಲದೆ ದಾಳಿ ಮಾಡುತ್ತವೆ. ಇಲಿಗಳ ದೃಷ್ಟಿಗಿಂತ ಗೂಬೆಗಳ ಕೇಳುವ ಶಕ್ತಿ ತೀಕ್ಷ್ಣವಾಗಿರುವುದರಿಂದ ಇಲಿಗಳು ಸುಲಭವಾಗಿ ಬಲಿಯಾಗುತ್ತವೆ. ಈ ಗೂಡುಗಳಲ್ಲಿ ಗೂಬೆಗಳು ನೆಲೆಸಲು 1 ರಿಂದ 3 ವರ್ಷ ಬೇಕಾಗಬಹುದು, ಆದರೆ ಒಮ್ಮೆ ಅವು ಅಲ್ಲಿ ವಾಸಿಸಲು ಆರಂಭಿಸಿದರೆ ರೈತರಿಗೆ ಯಾವುದೇ ಖರ್ಚಿಲ್ಲದೆ ಉಚಿತ ರಕ್ಷಣೆ ಸಿಗುತ್ತದೆ. ರಾಸಾಯನಿಕ ಮುಕ್ತ ಮತ್ತು ಪರಿಸರ ಸ್ನೇಹಿ ವಿಧಾನದಿಂದ ಬೆಳೆ ರಕ್ಷಿಸುತ್ತಿರುವ ಈ ಗೂಬೆಗಳನ್ನು ಈಗ ಕ್ಯಾಲಿಫೋರ್ನಿಯಾ ರೈತರು 'ರಿಯಲ್ ಹೀರೋಸ್' ಎಂದು ಕರೆಯುತ್ತಿದ್ದಾರೆ.

PREV
Read more Articles on
click me!

Recommended Stories

ಇಂದು ಸಿಎಂ ವಿಜಯ್-ಸಂಗೀತಾ ಡಿವೋರ್ಸ್ ಕೇಸ್ ವಿಚಾರಣೆ; ಗಂಡ-ಹೆಂಡ್ತಿ ಒಂದಾಗೋ ಚಾನ್ಸ್‌ ಎಷ್ಟು ಪರ್ಸೆಂಟ್ ಇದೆ?
ಪ್ರಧಾನಿ ಮೋದಿ ಮತ್ತೊಂದು ವಿಡಿಯೋ ; ಈ ಬಾರಿ ಮನವಿ ಮಾಡಿದ್ದು ಏನೆಂದರೆ..