ಟಾಕ್ಸಿಕ್‌ ಯಶಸ್ಸಿಗಾಗಿ ತಿರುಪತಿಯಲ್ಲಿ ಮುಡಿ ಕೊಟ್ರಾ ಲೇಡಿ ಸೂಪರ್‌ಸ್ಟಾರ್‌ ನಯನತಾರಾ? ಏನಿದು ಫೋಟೋ ರಹಸ್ಯ?

Published : Aug 18, 2026, 06:27 PM IST
Nayantara

ಸಾರಾಂಶ

ನಟಿ ನಯನತಾರಾ ಅವರು 'ಟಾಕ್ಸಿಕ್' ಸಿನಿಮಾದ ಯಶಸ್ಸಿಗಾಗಿ ತಿರುಪತಿಯಲ್ಲಿ ಮುಡಿ ಕೊಟ್ಟಿದ್ದಾರೆ ಎನ್ನಲಾದ ಫೋಟೋಗಳು ವೈರಲ್ ಆಗಿವೆ. ಆದರೆ, ಈ ಫೋಟೋಗಳು ಸಂಪೂರ್ಣ ನಕಲಿಯಾಗಿದ್ದು, ಎಐ ತಂತ್ರಜ್ಞಾನ ಬಳಸಿ ಹಳೆಯ ಚಿತ್ರಗಳನ್ನು ಮಾರ್ಫ್ ಮಾಡಿ ಸೃಷ್ಟಿಸಲಾಗಿದೆ ಎಂಬ ಸತ್ಯ ಬಯಲಾಗಿದೆ.

ಬೆಂಗಳೂರು (ಆ.18): ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್', ಬಾಲಿವುಡ್‌ನ 'SVC63' ಹಾಗೂ 'ಹಾಯ್' ನಂತಹ ಪ್ರಮುಖ ಸಿನಿಮಾಗಳು ಬಿಡುಗಡೆಗೆ ಸಜ್ಜಾಗುತ್ತಿರುವ ಬೆನ್ನಲ್ಲೇ, ಲೇಡಿ ಸೂಪರ್ ಸ್ಟಾರ್ ನಯನತಾರಾ ಅವರ ಫೋಟೋ ಸಿರೀಸ್‌ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾಗ ನಯನತಾರಾ ತಮ್ಮ ಮುಡಿ ಕೊಟ್ಟಿದ್ದಾರೆ (ಮುಂಡನ ಮಾಡಿಸಿಕೊಂಡಿದ್ದಾರೆ) ಎನ್ನಲಾದ ಚಿತ್ರಗಳು ಸೋಶಿಯಲ್‌ ಮೀಡಿಯಾದಲ್ಲಿ ಕಾಳ್ಗಿಚ್ಚಿನಂತೆ ಹರಿದಾಡುತ್ತಿವೆ.

'ಟಾಕ್ಸಿಕ್' ಸೇರಿದಂತೆ ತಮ್ಮ ಮುಂಬರುವ ಸಿನಿಮಾಗಳ ಯಶಸ್ಸಿಗಾಗಿ ನಯನತಾರಾ ಅವರು ಶ್ರೀವಾರಿಗೆ ಮುಡಿ ಅರ್ಪಿಸಿದ್ದಾರೆ ಎಂದೇ ಅಭಿಮಾನಿಗಳು ಭಾವಿಸಿ ಅಚ್ಚರಿ ವ್ಯಕ್ತಪಡಿಸುತ್ತಿದ್ದರು. ಆದರೆ, ಈ ಫೋಟೋಗಳ ಪೋಸ್ಟ್ ಮಾರ್ಟಮ್ ಮಾಡಿದಾಗ ಇದರ ಹಿಂದಿರುವ ಅಸಲಿ ರಹಸ್ಯ ಬಯಲಾಗಿದೆ!

ಫೋಟೋಗಳ ಹಿಂದಿರುವ ಅಸಲಿ ರಹಸ್ಯವೇನು?

ನೆಟ್ಟಿಗರು ಹಾಗೂ ಫ್ಯಾಕ್ಟ್ ಚಾಕ್ ನಡೆಸಿದಾಗ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಫೋಟೋಗಳು ಸಂಪೂರ್ಣ ನಕಲಿ (Fake) ಎಂಬುದು ಸಾಬೀತಾಗಿದೆ. ಕೃತಕ ಬುದ್ಧಿಮತ್ತೆ ಅಥವಾ ಎಐ (Artificial Intelligence) ತಂತ್ರಜ್ಞಾನವನ್ನು ಬಳಸಿಕೊಂಡು ಈ ಫೋಟೋಗಳನ್ನು ಸೃಷ್ಟಿಸಲಾಗಿದೆ.

ಜೆಮಿನಿ ವಾಟರ್‌ಮಾರ್ಕ್ ಪತ್ತೆ: ವೈರಲ್ ಆಗಿರುವ ಚಿತ್ರಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಅದರ ಮೇಲೆ ಎಐ ಇಮೇಜ್ ಜನರೇಟರ್ 'ಜೆಮಿನಿ' (Gemini) ವಾಟರ್‌ಮಾರ್ಕ್ ಇರುವುದು ಕಂಡುಬಂದಿದೆ.

ಹಳೆಯ ಫೋಟೋಗಳ ಮಾರ್ಫಿಂಗ್: ಕಳೆದ ಏಪ್ರಿಲ್ ತಿಂಗಳಿನಲ್ಲಿ ನಯನತಾರಾ ಅವರು ತಮ್ಮ ಪತಿ ವಿಘ್ನೇಶ್ ಶಿವನ್ ಅವರೊಂದಿಗೆ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ತೆಗೆಯಲಾಗಿದ್ದ ಅಸಲಿ ಫೋಟೋಗಳನ್ನು ಎಐ ಟೂಲ್ ಬಳಸಿ ಎಡಿಟ್ ಮಾಡಲಾಗಿದ್ದು, ನಯನತಾರಾ ಮುಡಿ ಕೊಟ್ಟಿರುವ ರೀತಿಯಲ್ಲಿ ನಕಲಿ ಚಿತ್ರವನ್ನು ಹೆಣೆಯಲಾಗಿದೆ.

ಒಟ್ಟಿನಲ್ಲಿ, 'ಟಾಕ್ಸಿಕ್' ಸಿನಿಮಾಗಾಗಿ ನಯನತಾರಾ ಮುಡಿ ಕೊಟ್ಟಿದ್ದಾರೆ ಎನ್ನುವುದೆಲ್ಲಾ ಎಐ ತಂತ್ರಜ್ಞಾನದಿಂದ ಸೃಷ್ಟಿಯಾದ ವದಂತಿಯಷ್ಟೇ.

PREV
Read more Articles on
click me!

Recommended Stories

ಜಮೀನು, ಚಿನ್ನಾಭರಣ, ನಗದು ಎಲ್ಲಾ ಸೇರಿ 100 ಕೋಟಿ ಆಸ್ತಿ ಸರ್ಕಾರಕ್ಕೆ ಬರೆದು ಕೊಟ್ಟ ಡಾಕ್ಟರ್​
ದೆಹಲಿ ₹60, ಮುಂಬೈ ₹80 ಆದ್ರೆ, ಎಳನೀರಿಗೆ ವಿಶ್ವ ಪ್ರಸಿದ್ಧವಾಗಿರುವ ಮದ್ದೂರು ಪಕ್ಕದಲ್ಲಿರೋ ಬೆಂಗಳೂರಲ್ಲಿ ₹120!