ದೇವಸ್ಥಾನಕ್ಕೆ ಬಂದ ಕೋತಿ ಶಿವನಿಗೆ ಕೈಮುಗಿದು ನಮಸ್ಕಾರ! ನಾಯಿ ಬೊಗಳುತ್ತಿದ್ದಂತೆ ನಡೆದಿದ್ದೇನು?

Published : Nov 14, 2026, 09:25 AM IST
Monkey walks temple bows before lord shiva with folded hand

ಸಾರಾಂಶ

ಉತ್ತರ ಪ್ರದೇಶದ ಲಖನೌದಲ್ಲಿರುವ ಬುದ್ದೇಶ್ವರ ಮಹಾದೇವ ದೇಗುಲಕ್ಕೆ ಮಂಗವೊಂದು ಭೇಟಿ ನೀಡಿ ಮನುಷ್ಯರಂತೆ ದೇವರಿಗೆ ನಮಸ್ಕರಿಸಿದ ವಿಡಿಯೋ ವೈರಲ್ ಆಗಿದೆ. ಈ ಕೋತಿ ನಾಯಿಯೊಂದಿಗೂ ಆತ್ಮೀಯವಾಗಿ ವರ್ತಿಸಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಹಿಂದೂ ಧರ್ಮದಲ್ಲಿ ಮಂಗಗಳಿಗೆ ವಿಶೇಷ ಪೂಜನೀಯ ಸ್ಥಾನವಿದೆ. ಎಷ್ಟೇ ಕೀಟಲೆ ಮಾಡಿದರು ಅವುಗಳನ್ನ ದೇವರಂತೆ ನೋಡಲಾಗುತ್ತೆ. ಕೆಲವೊಮ್ಮೆ ಮಂಗಗಳು ಮನುಷ್ಯರಂತೆಯೇ ವರ್ತಿಸುವುದು ಕಂಡಾಗ ಅಚ್ಚರಿಯಾಗುತ್ತದೆ. ಇತ್ತೀಚಿಗೆ ಶಾಪ್‌ನಲ್ಲಿ ಕುಳಿತಿದ್ದ ಯುವಕನ ಬಳಿಗೆ ಬಂದ ಕೋತಿಯೊಂದು ಅವನನ್ನು ತಬ್ಬಿ ಸಂತೈಸಿದ ವಿಡಿಯೋ ವೈರಲ್ ಆಗಿತ್ತು.

ದೇವರಿಗೆ ಕೈಮುಗಿದು ನಮಸ್ಕರಿಸಿದ ಕೋತಿ!

ಇದೀಗ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ವಿಡಿಯೋದಲ್ಲಿ ದೇವಸ್ಥಾನಕ್ಕೆ ಬಂದ ಕೋತಿಯೊಂದು ಮನುಷ್ಯರಂತೆಯೇ ಮೆಟ್ಟಿಲುಗಳನ್ನ ಹತ್ತಿ ದೇವರ ಮೂರ್ತಿಗಳಿಗೆ ಕೈಮುಗಿದು ನಮಸ್ಕರಿಸಿದೆ. ಅಷ್ಟೇ ಅಲ್ಲದೆ ದೇವಸ್ಥಾನದ ಒಳಹೋಗವ ಮುನ್ನ ಅಲ್ಲಿನ ನಾಯಿಯೊಂದಿಗೆ ಎಷ್ಟೊಂದು ಆತ್ಮೀಯವಾಗಿ ನಡೆದುಕೊಂಡಿದೆ ಎಂದರೆ ಮನುಷ್ಯರನ್ನ ನಾಚಿಸುವಂತಿದೆ.

ಲಖನೌ ಮಹದೇವ ದೇವಾಲಯದಲ್ಲಿ ನಡೆದ ಘಟನೆಯ ವಿಡಿಯೋ

ಈ ವಿಡಿಯೋ ಉತ್ತರ ಪ್ರದೇಶದ ಲಖನೌದಲ್ಲಿರುವ ಬುದ್ದೇಶ್ವರ ಮಹಾದೇವ ದೇಗುಲದಲ್ಲಿ ನಡೆದಿರುವ ಘಟನೆಯ ವಿಡಿಯೋ ಎನ್ನಲಾಗಿದೆ. ವಿಡಿಯೋ ಹಳೆಯದಾದರೂ ಇದೀಗ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸ್ಥಳೀಯರು ಹೇಳುವಂತೆ, ಈ ಕೋತಿ ಆಗಾಗ ದೇವಸ್ಥಾನಕ್ಕೆ ಭೇಟಿ ನೀಡುತ್ತದಂತೆ. ದೇಗುಲಕ್ಕೆ ಬಂದು ಅಲ್ಲಿ ಭಗವಾನ್ ಪರಶುರಾಮ, ಶಿವನ ವಿಗ್ರಹಗಳ ಮುಂದೆ ತಲೆಬಾಗಿ ನಮಸ್ಕರಿಸಿ ಹೋಗುತ್ತದಂತೆ.

ಕೆಲವರು ಈ ವಿಡಿಯೋವನ್ನು ಆಯೋಧ್ಯೆಯ ರಾಮಮಂದಿರದ್ದು ಎಂದು ತಪ್ಪಾಗಿ ಭಾವಿಸಿದ್ದರು. ಫ್ಯಾಕ್ಟ್ ಚೆಕ್ ಮಾಡಿದಾಗ ವಿಡಿಯೋ ಲಖನೌದಲ್ಲಿ ಸೆರೆಹಿಡಿದಿರುವ ವಿಡಿಯೋ ಎಂಬುದು ತಿಳಿದು ಬಂತು.

PREV
Read more Articles on
click me!

Recommended Stories

'ಲ್ಯಾಂಡ್‌ ಕರಾ ದೇ ಭಾಯ್‌..' ಫೇಮ್‌ ವಿಪಿನ್‌ ಸಾಹು ತನ್ನ ಈ ವೈರಲ್‌ ವಿಡಿಯೋದಿಂದಲೇ ಗಳಿಸಿದ್ದು ಲಕ್ಷಾಂತರ ರೂಪಾಯಿ!
ಬೈಕ್​ನಲ್ಲಿ ಮಹಿಳೆ ಒಂದೇ ಸೈಡ್​ ಕುಳಿತುಕೊಳ್ಳೋದ್ಯಾಕೆ? ಊಹಿಸಲೂ ಸಾಧ್ಯವಿಲ್ಲದ ರೋಚಕ ಇತಿಹಾಸ ತೆರೆದಿಟ್ಟ ಪಾಕ್​ ಲೇಡಿ