ಇದು ಪ್ಲಾಸ್ಟಿಕ್​ ಕವರ್​ ಜಾಹೀರಾತು ಕಣ್ರೀ- ಮಾಡೆಲ್​ಗಳ ಕ್ಯಾಟ್​ವಾಕ್​: ಒಂದರ ಬೆಲೆ ಕೇವಲ 1.67 ಲಕ್ಷ ರೂ

Published : Mar 20, 2026, 01:04 PM IST
Plastic Cover

ಸಾರಾಂಶ

ಸೋಷಿಯಲ್ ಮೀಡಿಯಾದಲ್ಲಿ ಚೀನಿ ಮಾಡೆಲ್‌ಗಳು ಪ್ಲಾಸ್ಟಿಕ್ ಕವರ್ ಹಿಡಿದು ಕ್ಯಾಟ್‌ವಾಕ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಈ ಪ್ಲಾಸ್ಟಿಕ್ ಕವರ್‌ನ ಬೆಲೆ 1.67 ಲಕ್ಷ ರೂಪಾಯಿ ಆಗಿದ್ದು, ಇದು ಪ್ಲಾಸ್ಟಿಕ್ ಬ್ಯಾನ್ ಮತ್ತು ಅದರ ಹಾವಳಿಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.

ಕಸದಿಂದ ರಸ ಎನ್ನುವ ಮಾತು ಬಹಳ ಹಳೆಯದ್ದು. ಕಸಕ್ಕೆ ಬೀಸಾಡುವ ವಸ್ತುಗಳನ್ನೇ ಎಷ್ಟೋ ಮಂದಿ ಅಲಂಕರಣ ಮಾಡಿ ಅದರಿಂದ ಗಳಿಕೆ ಮಾಡುವುದು ಇದೆ. ಬೇಡ ಎಂದುಕೊಂಡಿದ್ದ ವಸ್ತುಗಳಿಗೆ ಬ್ಯೂಟಿಫುಲ್​ ಟಚಪ್​ ಕೊಟ್ಟು ಸುಂದರ ಮಾಡುವುದು ಇದೆ. ಆದರೆ ಇಲ್ಲಿ ಎಲ್ಲವನ್ನೂ ಮೀರಿದ ಒಂದು ಜಾಹೀರಾತು ಸೋಷಿಯಲ್​ ಮೀಡಿಯಾದಲ್ಲಿ ಹಲ್​ಚಲ್​ ಸೃಷ್ಟಿಸಿದೆ. ಇದು ಅಂತಿಂಥ ಜಾಹೀರಾತು ಅಲ್ಲ. ಬಿನ್ನಾಣಗಿತ್ತಿಯರು ಹಾಗೂ ಸ್ಮಾರ್ಟ್​ ಯುವಕರು ಕ್ಯಾಟ್​ವಾಕ್​ ಮಾಡಿದ್ದಾರೆ, ಅದೂ ಪ್ಲಾಸ್ಟಿಕ್​ ಕವರ್​ ಹಿಡಿದು! ಛೇ ಪ್ಲಾಸ್ಟಿಕ್​ ಕವರ್​ ಹಿಡಿದು ಬಂದ್ರಾ ಎಂದು ಮೂಗು ಮುರಿಯಬೇಡಿ. ನಿಜಕ್ಕೂ ಇವರು ಕೈಯಲ್ಲಿ ಹಿಡಿದಿರೋದು ಪ್ಲಾಸ್ಟಿಕ್​ ಕವರೇ.

1.67 ಲಕ್ಷ ರೂಪಾಯಿ

ಅದರ ಬೆಲೆ ಎಷ್ಟು ಗೊತ್ತಾ? 1,790 ಡಾಲರ್​ ಅರ್ಥಾತ್​ ರೂಪಾಯಿಗೆ ಮಾಡಿದರೆ 1.67 ಲಕ್ಷ ರೂಪಾಯಿ ಆಗುತ್ತದೆ. ಇದನ್ನು ನಂಬಲು ಆಗದಿದ್ರೆ ಈ ಫೋಟೋದಲ್ಲಿಯೇ ಅದರ ಬೆಲೆ ಹಾಕಿದ್ದಾರೆ ನೋಡಿ. ಈ ಸೆಲೆಬ್ರಿಟಿಗಳನ್ನು ನೋಡಿದರೆ ಅವರು ಚೀನಿಯರು ಎನ್ನುವುದು ತಿಳಿಯುತ್ತದೆ. ಆದರೆ ಈ ಪ್ಲಾಸ್ಟಿಕ್​ ಕವರ್​ ಹಿಡಿದು ಅವರು ಏಕೆ ಬಂದಿದ್ದಾರೆ ಎನ್ನುವುದು ಮಾತ್ರ ತಿಳಿದಿಲ್ಲ.

ಪ್ಲಾಸ್ಟಿಕ್​ ಬ್ಯಾನ್​

ಅಷ್ಟಕ್ಕೂ ಒಂದುಬಾರಿ ಬಳಕೆ ಮಾಡುವ ಪ್ಲಾಸ್ಟಿಕ್​ ಅನ್ನು ಸರ್ಕಾರ ಇದಾಗಲೇ ಬ್ಯಾನ್​ ಮಾಡಿದೆ. ಇದರ ಹೊರತಾಗಿಯೂ ಇದರ ಬಳಕೆ ಆಗುತ್ತಲೇ ಇದೆ ಎನ್ನಿ. ಒಂದಿಷ್ಟು ದಿನಗಳು ಇದರ ಬಗ್ಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿತ್ತು. ಆದರೆ ನಮ್ಮ ಜನರಿಗೆ ಪ್ಲಾಸ್ಟಿಕ್​ ಬೇಕೇ ಬೇಕು. ಅಂಗಡಿಗೆ ಹೋಗುವಾಗ ಬ್ಯಾಗ್​ ತೆಗೆದುಕೊಂಡು ಹೋಗುವ ರೂಢಿ ಇಲ್ಲ. ಅಂಗಡಿಯಲ್ಲಿ ಪ್ಲಾಸ್ಟಿಕ್​ ಕವರ್​ ಇಟ್ಟಿಲ್ಲ ಎಂದರೆ ಸಾಮಾಗ್ರಿಗಳನ್ನೇ ರಿಜೆಕ್ಟ್​ ಮಾಡಿ ಬರುವವರೂ ಇದ್ದಾರೆ. ಅದಕ್ಕಾಗಿ ಇದರ ಬಳಕೆ ಆಗುತ್ತಿದೆ.

ಪ್ಲಾಸ್ಟಿಕ್​ ಹಾವಳಿ

ಆದರೆ, ಇಲ್ಲಿ ವೈರಲ್​ ಆಗ್ತಿರೋ ವಿಡಿಯೋಗಳು ಮಾತ್ರ ಎಲ್ಲರ ಹುಬ್ಬೇರಿಸಿದೆ. ಇದರ ಜಾಹೀರಾತು ಏಕೆ ಎನ್ನುವುದು ಸದ್ಯ ಎಲ್ಲಿಯೂ ವೈರಲ್​ ಆಗಲಿಲ್ಲ. ಅಯ್ಯೋ ನಮ್ಮ ಭಾರತವೇ ಅಡ್ಡಲ್ಲಪ್ಪ, ಎಲ್ಲಾ ಫ್ರೀ ಫ್ರೀಕೊಡ್ತಾರೆ ಎಂದು ಕೆಲವರು ಹೇಳ್ತಿದ್ರೆ, ನಮ್ಮಲ್ಲೂ ಹೀಗೆಯೇ ಮಾಡಿದರೆ, ಪ್ಲಾಸ್ಟಿಕ್​ಗೆ ಕಡಿವಾಣ ಬೀಳಬಹುದು. ಇಲ್ಲದಿದ್ದರೆ ಪ್ಲಾಸ್ಟಿಕ್​ ಹಾವಳಿ ಹೆಚ್ಚಾಗುತ್ತದೆ ಎಂದು ಇನ್ನು ಕೆಲವರು ಹೇಳ್ತಿದ್ದಾರೆ.

 

 

PREV
Read more Articles on
click me!

Recommended Stories

ಆಪ್ತರಕ್ಷಕ ಇವನೇ ನೋಡಿ; ಪೈಪ್‌ಲೈನ್ ಕಾಮಗಾರಿ ವೇಳೆ ಕುಸಿಯುವ ಗೋಡೆಯಿಂದ ಮೇಸ್ತ್ರಿ ರಕ್ಷಿಸಿದ ಜೆಸಿಬಿ ಆಪರೇಟರ್!
ಲಂಡನ್ ಮೆಟ್ರೋ ನೋಡಿ ಬೆಚ್ಚಿಬಿದ್ದ ಯೂಟ್ಯೂಬರ್, ಬೆಂಗಳೂರು ಮೆಟ್ರೋ ಬಗ್ಗೆ ಹೊಗಳಿಕೆ! ವಿಡಿಯೋ ಭಾರೀ ವೈರಲ್!