ಭಾರತಕ್ಕೆ ಬಂದ ಅನ್ಯಗ್ರಹ ಜೀವಿ? ಚಂದ್ರಲೋಕದಿಂದ ಬಂದವನಂತೆ ಈತ! 3 ವರ್ಷ ಭೂಮಿ ಮೇಲೆ ಇದ್ದವ ಏನಂದ

Published : Jul 11, 2026, 05:28 PM IST
Viral Video

ಸಾರಾಂಶ

ಉತ್ತರ ಪ್ರದೇಶದ ವೃಂದಾವನದಲ್ಲಿ ವ್ಯಕ್ತಿಯೊಬ್ಬ ತಾನು ಚಂದ್ರನಿಂದ ಬಂದವನು ಎಂದು ಹೇಳಿಕೊಂಡಿದ್ದು, ಈ ವಿಡಿಯೋ ವೈರಲ್ ಆಗಿದೆ. ಕಳೆದ ಮೂರು ವರ್ಷಗಳಿಂದ ಭೂಮಿಯ ಮೇಲೆ ವಾಸಿಸುತ್ತಿದ್ದು, ಜನರ ಮನಸ್ಸನ್ನು ಓದುವ ಶಕ್ತಿ ತನಗಿದೆ ಎಂದು ಹೇಳಿಕೊಂಡಿದ್ದಾನೆ. ಈ ಭೂಮಿಯ ಮೇಲೆ ಯಾವುದೂ ಸರಿಯಿಲ್ಲ ಎಂದು ಹೇಳಿ, ತಾನು ಚಂದ್ರಲೋಕಕ್ಕೆ ವಾಪಸ್ ಹೋಗುವುದಾಗಿ ತಿಳಿಸಿದ್ದಾನೆ.

ಏಲಿಯನ್‌ಗಳು ಎನ್ನುವ ಕಲ್ಪನೆಯೇ ಕುತೂಹಲವಾದದ್ದು. ಮನುಷ್ಯದ ಊಹೆಗೂ ನಿಲುಕದ ಅದೆಷ್ಟೋ ಪ್ರಕೃತಿ ವಿಸ್ಮಯಗಳು ನಡೆದೇ ಇರುತ್ತವೆ. ವಿಜ್ಞಾನ-ತಂತ್ರಜ್ಞಾನದಲ್ಲಿ ಎಷ್ಟೇ ಮುಂದುವರೆದರೂ ಕೆಲವು ವಿಷಯಗಳು ಎಲ್ಲವನ್ನೂ ಮೀರಿದ್ದೇ ಆಗಿವೆ. ಅಂಥದ್ದರಲ್ಲಿ ಒಂದು ಈ ಏಲಿಯನ್‌. ಏಲಿಯನ್‌ ಅಸ್ತಿತ್ವದಲ್ಲಿ ಇದೆಯೋ ಇಲ್ಲವೋ ಎನ್ನುವ ಜಿಜ್ಞಾಸೆ ಇಂದು ನಿನ್ನೆಯದ್ದಲ್ಲ. ಎಷ್ಟೋ ದಶಕಗಳಿಂದ ಈ ಬಗ್ಗೆ ಅಧ್ಯಯನ ನಡೆಯುತ್ತಲೇ ಇದೆ, ಪರ-ವಿರೋಧಗಳ ಚರ್ಚೆಗಳೂ ಆಗುತ್ತಿವೆ. ಕೆಲವು ವರ್ಷಗಳ ಹಿಂದೆ ಅಮೆರಿಕದಲ್ಲಿ ಈಗಾಗಲೇ ಏಲಿಯನ್ಸ್ ಬಗ್ಗೆ ಮಾಹಿತಿ ಇದೆ ಎಂಬ ಸುದ್ದಿ ಇತ್ತು. ಆದರೆ ಏಲಿಯನ್​ಗಳ ಮಾಹಿತಿಗಳನ್ನು ಅಮರಿಕ ಮರೆಮಾಚುತ್ತಿದೆ ಎಂಬ ಗಂಭೀರ ಆರೋಪಗಳೂ ಇವೆ. ನೂರಾರು ವರ್ಷಗಳ ಭವಿಷ್ಯ ನುಡಿದಿದ್ದ ಬಾಬಾ ವಾಂಗಾ ಮುಂದೊಂದು ದಿನ ಈ ಭೂಮಿಯ ಮೇಲೆ ಏಲಿಯನ್​ ಆಳುತ್ತದೆ ಎಂದಿದ್ದರು. ಅದೇ ರೀತಿ, 2026ರಲ್ಲಿಯೇ ಏಲಿಯನ್​ಗಳು ಪ್ರತ್ಯಕ್ಷವಾಗಲಿವೆ ಎಂದೂ ಭವಿಷ್ಯ ನುಡಿಯಲಾಗಿತ್ತು.

ನಿಜ ಹೇಳಿದ್ರೂ ನಂಬಲ್ಲ

ಇದರ ನಡುವೆಯೇ ತಾನು ಚಂದ್ರಲೋಕದವ, ಭೂಮಿಯ ಮೇಲೆ ಮೂರು ವರ್ಷಗಳಿಂದ ವಾಸವಾಗಿದ್ದೇನೆ ಎಂದು ವ್ಯಕ್ತಿಯೊಬ್ಬ ಹೇಳಿಕೊಂಡು ಬಂದಿದ್ದು, ಅದರ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ವೈರಲ್​ ಆಗುತ್ತಿದೆ. ಉತ್ತರ ಪ್ರದೇಶದ ವೃಂದಾವನದ ವ್ಯಕ್ತಿ ತಾನು ಚಂದ್ರನಿಂದ ಬಂದಿರುವುದಾಗಿ ಹೇಳುತ್ತಿದ್ದಾನೆ. ಇದನ್ನು ಹೇಳಿದ್ರೆ ಯಾರೂ ನಂಬಲ್ಲ. ಎಷ್ಟು ಹೇಳಿದರೂ ಯಾರೂ ಕೇಳುವುದಿಲ್ಲ. ನಾನು ತಮಾಷೆಗೆ ಹೇಳ್ತೇನೆ ಎಂದುಕೊಂಡಿದ್ದಾರೆ. ನಾನು ನಿಜವಾಗಿಯೂ ಚಂದ್ರನಿಂದ ಬಂದ ವ್ಯಕ್ತಿ ಎಂದು ಈತ ಹೇಳುತ್ತಿರುವ ವಿಡಿಯೋ ವೈರಲ್​ ಆಗಿದೆ.

ಭೂಮಿ ಮೇಲೆ ಯಾರೂ ಸರಿಯಿಲ್ಲ

ವೈರಲ್ ಆಗಿರುವ ಈ ಕ್ಲಿಪ್‌ನಲ್ಲಿ, ಆ ವ್ಯಕ್ತಿ ತನ್ನನ್ನು ತಾನು ಭೂಮಿಗೆ ಸೇರಿದವನಲ್ಲ ಎಂದು ಆತ್ಮವಿಶ್ವಾಸದಿಂದ ಪರಿಚಯಿಸಿಕೊಳ್ಳುತ್ತಾ, ನಾನು ಚಂದ್ರನಿಂದ ಬಂದಿದ್ದೇನೆ ಮತ್ತು ಕಳೆದ ಮೂರು ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದೇನೆ ಎಂದು ಹೇಳಿಕೊಳ್ಳುತ್ತಾನೆ. ನಾನು ಜನರ ಮನಸ್ಸಿನಲ್ಲಿ ಏನಿದೆ ಎಲ್ಲವನ್ನೂ ಹೇಳುತ್ತೇನೆ. ಚಂದ್ರನಲ್ಲಿ ವಾಸಿಸುವವರಿಗೆ ಈ ವಿಶೇಷ ಶಕ್ತಿ ಇದೆ. ನನಗೂ ಅದು ಬಂದಿದೆ ಎಂದು ವ್ಯಕ್ತಿ ಹೇಳಿದ್ದಾನೆ. ಈ ಭೂಮಿಯ ಮೇಲೆ ಯಾರೂ ಸರಿಯಿಲ್ಲ, ಇದು ನಡೆಯುತ್ತಿರುವುದು ಯಾವುದೂ ಸರಿಯಲ್ಲ ಎಂದಿರುವ ಆತ, ತಾನು ವಾಪಸ್​ ಚಂದ್ರಲೋಕಕ್ಕೆ ಹೋಗುತ್ತಿರುವುದಾಗಿ ಹೇಳಿದ್ದಾನೆ.

ಇದರ ವಿಡಿಯೋ ನೋಡಿ ನೆಟ್ಟಿಗರಿಂದ ತಮಾಷೆಯ ಪ್ರತಿಕ್ರಿಯೆಗಳು ಬರುತ್ತಿವೆ. ಈತನನ್ನು ಮೊದಲು ಮೆಂಟಲ್​ ಆಸ್ಪತ್ರೆಗೆ ಸೇರಿಸಿ ಎಂದು ಕೆಲವರು ಹೇಳುತ್ತಿದ್ದರೆ, ಈತನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕಿತ್ತು ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ. ಮತ್ತೆ ಕೆಲವರು ರೀಲ್ಸ್​ಗಾಗಿ ಈ ರೀತಿಯ ಖತರ್ನಾಕ್​ ಪ್ಲ್ಯಾನ್​ ಯಾರೋ ಕಂಟೆಂಟ್​ ಕ್ರಿಯೇಟರ್​ ಮಾಡಿರಲಿಕ್ಕೆ ಸಾಕು ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಈತನ ವೇಷ ಮತ್ತು ಮಾತು ನೋಡಿ ಸೋಷಿಯಲ್​ ಮೀಡಿಯಾದಲ್ಲಿ ಹಾಸ್ಯದ ಹೊಳೆಯೇ ಹರಿಯುತ್ತಿದೆ.

 

PREV
Read more Articles on
click me!

Recommended Stories

Huma Qureshi Shocking Statement: ಮಿತಿ ಮೀರಿ ಹೋಗಲ್ಲ, ಕ್ಯಾಮೆರಾ ಮುಂದೆ ಬೆ*ತ್ತಲಾಗಲ್ಲ; ವೈರಲ್ ಆಯ್ತು ಟಾಕ್ಸಿಕ್ ಬ್ಯೂಟಿ ಮಾತು!
ಮಟನ್ ಕೊಡ್ತೀವಿ ಅಂದು ಚಿಕನ್ ಬಡಿಸಿದ್ರು, ಅಕ್ಷತೆ ಕಾಳು ಹಾಕಿದವ್ರೇ ಕತ್ತಿ ಕೋಲು ಹಿಡಿದ್ರು!