'ಮುಂದೆ ಏನಾಗ್ತಿಯಾ ಪುಟ್ಟಾ' ಎಂದಾಗ ಈ ವೇಷದಲ್ಲಿ ಬಂದ ಬಾಲಕ ರಾತ್ರೋರಾತ್ರಿ ಫೇಮಸ್​- ಪುಟಾಣಿ ಹೇಳಿದ್ದೇನು

Published : Jul 06, 2026, 07:39 PM IST
Viral Boy

ಸಾರಾಂಶ

ಮಕ್ಕಳ ಮೇಲೆ ಹೇರಲಾಗುವ ವೃತ್ತಿಪರ ಒತ್ತಡದ ನಡುವೆ, ಶಾಲಾ ಕಾರ್ಯಕ್ರಮವೊಂದರಲ್ಲಿ 'ಅಪ್ಪನಂತೆ ಆಗುತ್ತೇನೆ' ಎಂದು ಹೇಳಿ ಅಪ್ಪನ ವೇಷ ಧರಿಸಿದ ಬಾಲಕನೊಬ್ಬನ ವಿಡಿಯೋ ವೈರಲ್ ಆಗಿದೆ. ಈ ಪುಟಾಣಿಯ ಮುಗ್ಧ ಆಸೆ ಮತ್ತು ಸರಳ ಉತ್ತರ ಸೋಷಿಯಲ್ ಮೀಡಿಯಾದಲ್ಲಿ ಎಲ್ಲರ ಮನಗೆದ್ದಿದೆ.

ಸಾಮಾನ್ಯವಾಗಿ ಮಕ್ಕಳಿಗೆ ಎದುರಾಗುವ ಮೊದಲ ಪ್ರಶ್ನೆ ನೀನು ಮುಂದೆ ಓದಿ ಏನಾಗ್ತಿಯಾ ಎನ್ನುವುದು. ಬಹುತೇಕ ಮಕ್ಕಳು ಹೇಳುವುದು ಡಾಕ್ಟರ್​ ಆಗ್ತೇನೆ, ಎಂಜಿನಿಯರ್​ ಆಗ್ತೇನೆ ಎನ್ನುವುದು. ಡಾಕ್ಟರ್​ ಮತ್ತು ಎಂಜಿನಿಯರ್​ ಬಿಟ್ಟರೆ ಬೇರೆ ಮಾತುಗಳು ಮಕ್ಕಳ ಬಾಯಿಯಿಂದ ಬರುವುದು ಅತಿ ವಿರಳ. ಏಕೆಂದರೆ ಅವರ ಅಪ್ಪ-ಅಮ್ಮ ಮಕ್ಕಳು ಹುಟ್ಟಿನಿಂದಲೇ ದಿನನಿತ್ಯವೂ ಅದನ್ನೇ ಹೇಳಿ ಹೇಳಿ ಮಕ್ಕಳ ತಲೆಗೆ ತುಂಬಿಸುವುದು ಇದೆ. ಡಾಕ್ಟರ್​ ಬಲು ದುಬಾರಿ ಎಂದು ಎಂಜಿನಿಯರ್ ಆಗುವೆ, ಅದರಲ್ಲಿಯೂ ಸಾಫ್ಟ್​ವೇರ್​ ಎಂಜಿನಿಯರ್​ ಆಗುವೆ ಎಂದೇ ಕೆಲವು ದಶಕಗಳಿಂದ ಮಕ್ಕಳು ಹೇಳಿಕೊಂಡೇ ಬಂದಿದ್ದಾರೆ. ಅದರ ಪ್ರಭಾವ ಈಗ ಸಾಫ್ಟ್​ವೇರ್​ ಎಂಜಿನಿಯರಿಂಗ್​ ಕಲಿಯುತ್ತಿರುವ ಪದವೀಧರರ ಮೇಲೆ ಆಗುತ್ತಿರುವುದು ನಮ್ಮ ಕಣ್ಣಮುಂದೆಯೇ ಇದೆ. ಎಐ ಬಂದ ಮೇಲೆ ಈ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆ ಪದವೀಧರರನ್ನು ಕುಸಿಯುವಂತೆ ಮಾಡುತ್ತಿದೆ. ಆದ್ದರಿಂದ ಯಾವ ಕ್ಷೇತ್ರ ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ವಿಷಯವನ್ನು ಪಾಲಕರು ತಮ್ಮ ಪ್ರತಿಷ್ಠೆಯ ಪ್ರಶ್ನೆಯಾಗಿಸದೇ ಅವರ ಪಾಡಿಗೆ ಅವರಿಗೆ ಬಿಡಿ ಎನ್ನುವ ಮಾತುಗಳು ಸಾಕಷ್ಟು ಕೇಳಿಬರುತ್ತಿವೆ.

ಹೆಚ್ಚಿನ ಮಕ್ಕಳು ಹೇಳೋದೇನು?

ಅದೇನೇ ಇದ್ದರೂ ಅಪ್ಪ-ಅಮ್ಮ ತಲೆಯಲ್ಲಿ ಏನೂ ತುಂಬದಿದ್ದ ಮಕ್ಕಳು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸುವುದು ಇದೆ. ತಾವು ಏನಾಗಬೇಕು, ತಮಗೆ ಏನು ಇಷ್ಟ ಎನ್ನುವುದು ಕಾಲ ಬದಲಾದಂತೆ ಸ್ವಂತ ಬುದ್ಧಿ ಉಪಯೋಗಿಸುವ ಮಕ್ಕಳಲ್ಲಿ ಬದಲಾಗುತ್ತಾ ಬಂದರೂ, ಪುಟಾಣಿಗಳಾಗಿರುವಾಗ ಅವರ ಇಚ್ಛೆಯೇ ಬೇರೆಯಾಗಿರುತ್ತದೆ. ನೀನು ಹೀಗೆಯೇ ಆಗು, ಪಕ್ಕದ ಮನೆಯವರ ರೀತಿಯೇ ಆಗು, ಸಂಬಂಧಿಕರಿಗಿಂತ ಒಂದು ಹುದ್ದೆ ಮೇಲೆ ಹೋಗು... ಎಂದು ಅಪ್ಪ-ಅಮ್ಮ ತಮ್ಮ ಪ್ರತಿಷ್ಠೆಯನ್ನು ಮಕ್ಕಳ ತಲೆಯಲ್ಲಿ ತುಂಬದೇ ಇದ್ದರೆ, ಆ ಮಕ್ಕಳು ತಮ್ಮ ಸ್ವಂತ ಬುದ್ಧಿ ಉಪಯೋಗಿಸಿ, ತಮ್ಮಿಷ್ಟದ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು, ಅದರಲ್ಲಿ ಯಾರ ಒತ್ತಡವೂ ಇಲ್ಲದೇ ಮುಂದೆ ಬರುವುದು ಇದೆ. ಅದರಲ್ಲಂತೂ  ಭವಿಷ್ಯದ ಯೋಚನೆ ಇಲ್ಲದೇ ಆ ಕ್ಷಣದಲ್ಲಿ ಬದುಕುವ ಪುಟಾಣಿಗಳ ಮನಸ್ಸಿನಲ್ಲಿ ಇರುವುದು ಮಾತ್ರ ತುಂಬಾ ಇಂಟರೆಸ್ಟಿಂಗ್​ ಆಗಿರುತ್ತದೆ.  

ಮಕ್ಕಳಿಗೆ ಭವಿಷ್ಯದಲ್ಲಿ ನೀವೇನು ಆಗ್ತೀರಿ, ಅದರ ಡ್ರೆಸ್​​ ಮಾಡಿಕೊಂಡು ಬರಬೇಕು ಎಂದಾಗ ಬಹುತೇಕ ಮಕ್ಕಳು ಅಪ್ಪ-ಅಮ್ಮಂದಿರ ಅಣತಿಯಂತೆ ಡಾಕ್ಟರ್​, ಎಂಜಿನಿಯರ್​, ಸೈಂಟಿಸ್ಟ್​, ಕೆಲವರು ಟೀಚರ್​... ಹೀಗೆ ಹಲವು ರೀತಿಯ ಡ್ರೆಸ್​ ಮಾಡಿಕೊಂಡು ಬಂದರು. ಈ ಬಾಲಕ ಮಾತ್ರ ವಿಭಿನ್ನ ರೀತಿಯಲ್ಲಿ ಬಂದ ಕಾರಣದಿಂದ ರಾತ್ರೋ ರಾತ್ರಿ ವೈರಲ್​ ಆಗಿಬಿಟ್ಟಿದ್ದಾನೆ. ಶಾಲೆಯಲ್ಲಿ ಸಿಂಪಲ್​ ಡ್ರೆಸ್​ಅಪ್​ ಡೇ ಇದೀಗ ದೇಶದ ಗಮನ ಸೆಳೆದಿದ್ದು ಈ ಬಾಲಕನ ಡ್ರೆಸ್​ಗೆ ಹಾಗೂ ಆತನ ಮುದ್ದು ಮೊಗಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಮೀಸೆ ಹಚ್ಚಿ ಬಂದ ಬಾಲಕ ಹೇಳಿದ್ದೇನು?

ಅಷ್ಟಕ್ಕೂ ಆ ಬಾಲಕ ಮೀಸೆ ಹಚ್ಚಿಕೊಂಡು ಬಂದಿದ್ದ ಅಷ್ಟೇ. ಆದರೆ ಅದರ ಹಿಂದಿರುವ ಉದ್ದೇಶ ಕೇಳಿ ಎಲ್ಲರೂ ಅಚ್ಚರಿಪಟ್ಟುಕೊಂಡರು. ಇದ್ಯಾರ ವೇಷ ಎಂದು ಕೇಳಿದಾಗ ಬಾಲಕ, ಇದು ನನ್ನ ಅಪ್ಪನ ವೇಷ. ಮುಂದೆ ನಾನು ಅಪ್ಪನಂತೆ ಆಗುತ್ತೇನೆ ಎಂದಿದ್ದಾನೆ. ಆತನ ಕಡೆ ವಿಡಿಯೋ ತಿರುಗಿಸಿದಾಗ ಬಾಲಕ ನಾಚಿ ನೀರಾಗಿದ್ದಾನೆ. ನಾನು ನನ್ನ ಅಪ್ಪನಂತೆ ಕಾಣಿಸಬೇಕು ಎನ್ನೋದೇ ನನ್ನ ಆಸೆ ಎಂದು ಆ ಪುಟಾಣಿ ಹೇಳಿದ್ದರಿಂದ ಅವನಿಗೆ ಶಹಬ್ಬಾಸ್​ಗಿರಿ ಸಿಕ್ಕಿದೆ. ಅವರ ವಿಡಿಯೋ ಈಗ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ವೈರಲ್​ ಆಗುತ್ತಿದೆ.

PREV
Read more Articles on
click me!

Recommended Stories

116ರ ಕನ್ನಡದ ಅಜ್ಜಿಗೆ ರಾಷ್ಟ್ರಪತಿಗೆ ಕೊಡೋ ದರ್ಶನ ಕೊಡಿಸಿದ್ಯಾಕೆ ಟಿಟಿಡಿ? ಅತೀ ಸಮೀಪದಿಂದ ತಿಮ್ಮಪ್ಪನ ದರ್ಶನ!
15 ರೂ. ಆರ್ಡರ್​- 500 ರೂ. ಟಿಪ್ಸ್​: ಡೆಲಿವರಿ ಬಾಯ್ ಭಾವನಾತ್ಮಕ​ ವಿಡಿಯೋಗೆ ಕೋಟಿಗೂ ಅಧಿಕ ವ್ಯೂವ್ಸ್​