ಭಾರತೀಯನನ್ನು ಮದುವೆಯಾದ ಇಟಲಿ ಯುವತಿ: ಅತ್ತೆ ಹೀಗೆ ಮಾಡ್ತಾರೆ ಅಂತ ಅಂದುಕೊಂಡಿರಲಿಲ್ಲ ಎಂದ ಸೊಸೆ

Published : Jul 27, 2026, 12:44 PM IST
italian woman shares what she surprised life in an indian family after marriage

ಸಾರಾಂಶ

ಭಾರತೀಯ ಕುಟುಂಬಕ್ಕೆ ಮದುವೆಯಾಗಿ ಬಂದ ಇಟಲಿ ಮೂಲದ ಮಹಿಳೆಯೊಬ್ಬರು, ಭಾರತೀಯ ಕುಟುಂಬದ ಜೀವನಶೈಲಿ ಮತ್ತು ಸಂಸ್ಕೃತಿಯಲ್ಲಿ ತಮಗೆ ಅಚ್ಚರಿ ಮೂಡಿಸಿದ ಮೂರು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಭಾರತೀಯ ಕುಟುಂಬಕ್ಕೆ ಮದುವೆಯಾಗಿ ಬಂದ ಇಟಲಿ ಮೂಲದ ಮಹಿಳೆಯೊಬ್ಬರು, ಭಾರತೀಯ ಕುಟುಂಬದ ಜೀವನಶೈಲಿ ಮತ್ತು ಸಂಸ್ಕೃತಿಯಲ್ಲಿ ತಮಗೆ ಅಚ್ಚರಿ ಮೂಡಿಸಿದ ಮೂರು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಅನುಭವದ ಕುರಿತು ಅವರು ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರತೀಯ ಸಂಸ್ಕೃತಿಯ ಬಗ್ಗೆ ವಿದೇಶಿ ಮಹಿಳೆಯೊಬ್ಬರು ನೀಡಿರುವ ಈ ಪ್ರಾಮಾಣಿಕ ಅಭಿಪ್ರಾಯ ನೆಟ್ಟಿಗರ ಗಮನ ಸೆಳೆದಿದೆ.

ಇಟಲಿ ಕುಟುಂಬದಲ್ಲಿ ಬೆಳೆದ ಕ್ರಿಸ್ಸಿ ವರುಘೀಸ್ (Chrissy Varughese), ಭಾರತೀಯ ಕುಟುಂಬಕ್ಕೆ ಸೊಸೆಯಾಗಿ ಬಂದ ನಂತರ ತಮಗೆ ಎದುರಾದ ಸಾಂಸ್ಕೃತಿಕ ವ್ಯತ್ಯಾಸಗಳ ಬಗ್ಗೆ ಮಾತನಾಡಿದ್ದಾರೆ. ಭಾರತೀಯ ಕುಟುಂಬದ ಆಹಾರ ಪದ್ಧತಿ, ಅತಿಥಿ ಸತ್ಕಾರ ಮತ್ತು ಕುಟುಂಬದವರ ನೇರ ಮಾತಿನ ಶೈಲಿ ತಮ್ಮನ್ನು ಅಚ್ಚರಿಗೊಳಿಸಿತು ಎಂದು ಅವರು ಹೇಳಿದ್ದಾರೆ.

ಭಾರತೀಯ ಮನೆಗಳಲ್ಲಿ ಯಾರನ್ನೂ ಹಸಿವಿನಿಂದ ಇರಲು ಬಿಡಲ್ಲ

ಕ್ರಿಸ್ಸಿ ಅವರನ್ನು ಅಚ್ಚರಿಗೊಳಿಸಿದ ಮೊದಲ ವಿಚಾರವೆಂದರೆ ಭಾರತೀಯ ಕುಟುಂಬಗಳಲ್ಲಿರುವ ಆಹಾರದ ಮೇಲಿನ ವಿಶೇಷ ಕಾಳಜಿ. ಭಾರತೀಯ ಮನೆಗಳಲ್ಲಿ ಅತಿಥಿಗಳು ಅಥವಾ ಕುಟುಂಬದ ಸದಸ್ಯರು ಊಟ ಮಾಡಿದ ಬಳಿಕವೂ ‘ಇನ್ನೂ ಸ್ವಲ್ಪ ತಿನ್ನಿ’ ಎಂದು ಪದೇಪದೇ ಒತ್ತಾಯಿಸುವುದು ಸಾಮಾನ್ಯ. ಆದರೆ ಇಟಲಿ ಕುಟುಂಬದ ಸಂಸ್ಕೃತಿಗೆ ಹೋಲಿಸಿದರೆ ಇದು ತಮಗೆ ವಿಭಿನ್ನವಾಗಿ ಕಂಡಿತು ಎಂದು ಕ್ರಿಸ್ಸಿ ಹೇಳಿದ್ದಾರೆ.

ಹೊಟ್ಟೆ ತುಂಬಿದೆ ಎಂದು ಹೇಳಿದರೂ ಭಾರತೀಯ ಕುಟುಂಬದವರು ಅದನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಬದಲಿಗೆ ಮತ್ತೆ ಮತ್ತೆ ಊಟ ನೀಡಲು ಮುಂದಾಗುತ್ತಾರೆ ಎಂದು ಅವರು ಹಾಸ್ಯಮಯವಾಗಿ ವಿವರಿಸಿದ್ದಾರೆ. ಅವರ ಪ್ರಕಾರ, ಭಾರತೀಯ ಕುಟುಂಬಗಳಲ್ಲಿ ಆಹಾರ ನೀಡುವುದು ಕೇವಲ ಹೊಟ್ಟೆ ತುಂಬಿಸುವ ವಿಚಾರವಲ್ಲ. ಅದು ಕುಟುಂಬದವರ ಮೇಲಿನ ಪ್ರೀತಿ, ಕಾಳಜಿ ಮತ್ತು ಆತಿಥ್ಯವನ್ನು ವ್ಯಕ್ತಪಡಿಸುವ ಒಂದು ರೀತಿಯ ಭಾಷೆಯಾಗಿದೆ.

ನೀವು ಅತಿಥಿ, ಅಡುಗೆ ಮನೆಗೆ ಹೋಗಬೇಡಿ

ಕ್ರಿಸ್ಸಿ ಹಂಚಿಕೊಂಡ ಎರಡನೇ ಅನುಭವ ಭಾರತೀಯರ ಅತಿಥಿ ಸತ್ಕಾರ. ಇಟಲಿ ಕುಟುಂಬದಲ್ಲಿ ಅತಿಥಿಗಳು ಮನೆಗೆ ಬಂದಾಗ, ಕೆಲವೊಮ್ಮೆ ಎಲ್ಲರೂ ಸೇರಿ ಅಡುಗೆ ಕೆಲಸದಲ್ಲಿ ಕೈಜೋಡಿಸುವುದು ಸಾಮಾನ್ಯವಾಗಿರಬಹುದು. ಆದರೆ ತಮ್ಮ ಪತಿಯ ಭಾರತೀಯ ಕುಟುಂಬದಲ್ಲಿ ಅತಿಥಿಗಳಿಗೆ ವಿಶೇಷ ಗೌರವ ನೀಡಲಾಗುತ್ತದೆ ಎಂದು ಕ್ರಿಸ್ಸಿ ಹೇಳಿದ್ದಾರೆ. ಅತಿಥಿಗಳು ಅಡುಗೆಮನೆಗೆ ಹೋಗಿ ಕೆಲಸ ಮಾಡುವ ಬದಲು ಆರಾಮವಾಗಿ ಕುಳಿತುಕೊಂಡು ಊಟವನ್ನು ಆನಂದಿಸಬೇಕು ಎಂಬ ಮನೋಭಾವವನ್ನು ಅವರು ಗಮನಿಸಿದ್ದಾರೆ.

ನೀವು ಅತಿಥಿ. ನೀವು ಕುಳಿತುಕೊಂಡು ಎಂಜಾಯ್ ಮಾಡಿ. ಉಳಿದದ್ದನ್ನು ನಾವು ನೋಡಿಕೊಳ್ಳುತ್ತೇವೆ’ ಎಂಬ ರೀತಿಯ ಆತಿಥ್ಯವನ್ನು ಭಾರತೀಯ ಕುಟುಂಬದಲ್ಲಿ ಕಂಡಿರುವುದಾಗಿ ಅವರು ತಿಳಿಸಿದ್ದಾರೆ. ಈ ವಿಚಾರವೂ ಭಾರತೀಯ ಕುಟುಂಬದ ಸಂಸ್ಕೃತಿಯ ಬಗ್ಗೆ ತಮಗೆ ಹೊಸ ಅನುಭವ ನೀಡಿತು ಎಂದು ಕ್ರಿಸ್ಸಿ ಹೇಳಿದ್ದಾರೆ.

ನಿಮ್ಮ ಹುಬ್ಬು ಮಾಡಿಸಿಕೊಳ್ಳಿ’ ಎಂದರೂ ಬೇಸರ ಮಾಡಿಕೊಳ್ಳಬಾರದು

ಕ್ರಿಸ್ಸಿ ಅವರನ್ನು ಅಚ್ಚರಿಗೊಳಿಸಿದ ಮೂರನೇ ವಿಚಾರವೆಂದರೆ ಭಾರತೀಯ ಕುಟುಂಬದವರ ನೇರ ಮಾತಿನ ಶೈಲಿ. ಕುಟುಂಬದ ಸದಸ್ಯರು ತಮ್ಮ ಉಡುಗೆ, ಲುಕ್ ಅಥವಾ ರೂಪದ ಬಗ್ಗೆ ನೇರವಾಗಿ ಅಭಿಪ್ರಾಯ ವ್ಯಕ್ತಪಡಿಸುವುದು ಆರಂಭದಲ್ಲಿ ಅವರಿಗೆ ವಿಚಿತ್ರವಾಗಿ ಕಂಡಿತಂತೆ.

ಉದಾಹರಣೆಗೆ ನೀವು ಹುಬ್ಬು ಮಾಡಿಸಿಕೊಳ್ಳಬೇಕು’ ಅಥವಾ ‘ನಿಮ್ಮ ಲೆಹೆಂಗಾಗೆ ಈ ಚೋಲಿ ಚೆನ್ನಾಗಿ ಕಾಣುತ್ತಿಲ್ಲ’ ಎಂಬಂತಹ ನೇರ ಅಭಿಪ್ರಾಯಗಳನ್ನು ಕೇಳಿದಾಗ, ಆರಂಭದಲ್ಲಿ ತಮ್ಮ ಮೇಲೆ ಯಾರಿಗಾದರೂ ಕೋಪವಿದೆಯೇ ಎಂದು ಅವರು ಭಾವಿಸಿದ್ದರಂತೆ. ಆದರೆ ನಂತರ ಭಾರತೀಯ ಕುಟುಂಬಗಳಲ್ಲಿನ ಇಂತಹ ನೇರ ಮಾತುಗಳು ಸಾಮಾನ್ಯ ಸಂಭಾಷಣೆಯ ಭಾಗವಾಗಿರಬಹುದು ಎಂಬುದನ್ನು ಅರ್ಥಮಾಡಿಕೊಂಡೆ ಎಂದು ಕ್ರಿಸ್ಸಿ ಹೇಳಿದ್ದಾರೆ.

ಭಾರತೀಯ ಕುಟುಂಬದಿಂದ ಸಾಕಷ್ಟು ಕಲಿತಿದ್ದೇನೆ

ಭಾರತೀಯ ಮತ್ತು ಇಟಲಿ ಕುಟುಂಬಗಳ ಸಂಸ್ಕೃತಿಯಲ್ಲಿ ಸಾಕಷ್ಟು ವ್ಯತ್ಯಾಸಗಳಿದ್ದರೂ, ಈ ಅನುಭವ ತಮ್ಮ ಪಾಲಿಗೆ ಅತ್ಯಂತ ಸಂತಸದಾಯಕವಾಗಿದೆ ಎಂದು ಕ್ರಿಸ್ಸಿ ಹೇಳಿದ್ದಾರೆ. ಭಾರತೀಯ ಕುಟುಂಬಕ್ಕೆ ಸೊಸೆಯಾಗಿ ಬಂದ ನಂತರ ಹೊಸ ಸಂಸ್ಕೃತಿ, ಹೊಸ ಸಂಪ್ರದಾಯಗಳು ಮತ್ತು ಕುಟುಂಬದ ಹೊಸ ರೀತಿಯ ಜೀವನಶೈಲಿಯನ್ನು ಕಲಿಯಲು ಸಾಧ್ಯವಾಗಿದೆ. ಅದೇ ಸಮಯದಲ್ಲಿ ತಮ್ಮ ಇಟಲಿ ಕುಟುಂಬದ ಸಂಪ್ರದಾಯಗಳನ್ನೂ ಹೊಸ ಕುಟುಂಬದೊಂದಿಗೆ ಹಂಚಿಕೊಳ್ಳಲು ಸಾಧ್ಯವಾಗಿದೆ ಎಂದು ಅವರು ಹೇಳಿದ್ದಾರೆ.

PREV
Read more Articles on
click me!

Recommended Stories

Ramayana: ರಾಮಾಯಣ ಸಿನಿಮಾ 2 ಭಾಗಗಳಲ್ಲಿ ಮಾಡುತ್ತಿರೋದೇಕೆ? ಭಾರೀ ಗುಟ್ಟು ಬಿಚ್ಚಿಟ್ಟ ನಿರ್ಮಾಪಕರು!
ಶಿವಗಂಗೆ ಬೆಟ್ಟದಲ್ಲಿ ಯುವತಿಯ ಮೊಬೈಲ್ ಕಸಿದು ಗೋಪುರ ಏರಿದ ಮಂಗ: ಯುವತಿ ಪರದಾಡುವ ವಿಡಿಯೋ ವೈರಲ್!