US Jobs Layoff: ಕೆಲಸ ಕಳೆದುಕೊಂಡು ಕಣ್ಣೀರಿನ ವಿದಾಯ ಹೇಳಿದ ಭಾರತೀಯ ಯುವತಿ- ವಿಡಿಯೋ ವೈರಲ್

Published : Oct 01, 2025, 10:14 PM IST
Indian Woman Shares Emotional Video After US Job Layoff

ಸಾರಾಂಶ

Indian Woman Shares Emotional Video After US Job Layoff: ಅಮೆರಿಕ ಬಿಡುವುದು ಭಾವನಾತ್ಮಕವಾಗಿ ತುಂಬಾ ನೋವು ಕೊಡುತ್ತಿದೆ. ಇದನ್ನು ಎದುರಿಸಲು ನನಗೆ ಸಾಧ್ಯವಾಗುತ್ತಿಲ್ಲ, ಇಷ್ಟು ದಿನ ಅಮೆರಿಕದಲ್ಲಿ ಸಿಕ್ಕ ಅವಕಾಶಗಳಿಗೆ ಧನ್ಯವಾದ ಎಂದು ಅನನ್ಯಾ ಜೋಶಿ ಇನ್‌ಸ್ಟಾಗ್ರಾಮ್‌ ಬರೆದುಕೊಂಡಿದ್ದಾರೆ.

Indian Woman Shares Emotional Video After US Job Layoff:: ಅಮೆರಿಕದಲ್ಲಿ ಕೆಲಸದಿಂದ ವಜಾಗೊಳಿಸಿದ ನಂತರ ಭಾರತೀಯ ಯುವತಿಯೊಬ್ಬಳು ಭಾವನಾತ್ಮಕವಾಗಿ ವಿದಾಯ ಹೇಳುತ್ತಿರುವ ವಿಡಿಯೋ ವೈರಲ್ ಆಗಿದೆ. 

ಅನನ್ಯಾ ಜೋಶಿ ಎಂಬ ಭಾರತೀಯ ಯುವತಿ ಕಣ್ಣೀರು ಹಾಕುತ್ತಾ ಅಮೆರಿಕ ಬಿಟ್ಟು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲಸ ಕಳೆದುಕೊಂಡ ನಂತರ ಹೊಸ ಕೆಲಸಕ್ಕೆ ಪ್ರಯತ್ನಿಸಿದರೂ, ಯಾವುದೂ ಸರಿಹೋಗದ ಕಾರಣ ಅನನ್ಯಾ ಜೋಶಿ ಅಮೆರಿಕವನ್ನು ತೊರೆಯಲು ನಿರ್ಧರಿಸಿದರು. ಯುವತಿಯೇ ಕಣ್ಣೀರಿನಿಂದ ಅಮೆರಿಕಕ್ಕೆ ವಿದಾಯ ಹೇಳುವ ದೃಶ್ಯಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಸೆಪ್ಟೆಂಬರ್ 29 ರಂದು ಅನನ್ಯಾ ಯುಎಸ್‌ನಿಂದ ಹಿಂತಿರುಗುವ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಅಮೆರಿಕ ತನ್ನ ಮೊದಲ ಮನೆಯಾಗಿತ್ತು ಎಂದು ಅನನ್ಯಾ ಹೇಳುತ್ತಾರೆ. ತಾನು ಕಠಿಣ ಹಂತವನ್ನು ಎದುರಿಸುತ್ತಿದ್ದೇನೆ ಮತ್ತು ವಾಸ್ತವವನ್ನು ಒಪ್ಪಿಕೊಳ್ಳುತ್ತಿದ್ದೇನೆ ಎಂದು ಅನನ್ಯಾ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ. 

ಅಮೆರಿಕವನ್ನು ಬಿಡುವುದು ಭಾವನಾತ್ಮಕವಾಗಿ ತುಂಬಾ ನೋವು ಕೊಡುತ್ತಿದೆ. ಇದನ್ನು ಎದುರಿಸಲು ನನಗೆ ಸಾಧ್ಯವಾಗುತ್ತಿಲ್ಲ, ಇಷ್ಟು ದಿನ ಅಮೆರಿಕದಲ್ಲಿ ಸಿಕ್ಕ ಅವಕಾಶಗಳಿಗೆ ಧನ್ಯವಾದಗಳು ಎಂದು ಅನನ್ಯಾ ಜೋಶಿ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ಅಲ್ಪಾವಧಿಯದ್ದಾದರೂ, ನೀವು ನನಗೆ ನೀಡಿದ ಜೀವನವನ್ನು ನಾನು ನಿಜವಾಗಿಯೂ ಪ್ರಶಂಸಿಸುತ್ತೇನೆ,  ಐ ಲವ್ ಯು ಅಮೆರಿಕ- ಎಂಬ ಸಾಲುಗಳೊಂದಿಗೆ ಅನನ್ಯಾ ಪೋಸ್ಟ್ ಮುಗಿಸಿದ್ದಾರೆ.

 

 

PREV
Read more Articles on
click me!

Recommended Stories

2.7 ಕೋಟಿ ರೂಪಾಯಿ ಸಂಬಳಕ್ಕೆ 'ಗುಡ್ ಬೈ': ನೆಮ್ಮದಿಗಾಗಿ ಉದ್ಯೋಗ ತೊರೆದ 22ರ ಯುವಕ! ನೀವಾಗಿದ್ದರೆ?
ಹೊಸ ಮನೆಗೆ 1 ಕೋಟಿಯ ಸ್ಟೌವ್‌, 14 ಲಕ್ಷದ ಫ್ರಿಜ್‌: ಅನನ್ಯಾ ಪಾಂಡೆ ಸೋದರಸಂಬಂಧಿಯ ಐಷಾರಾಮಿ ಶಾಪಿಂಗ್ ವಿಡಿಯೋ ವೈರಲ್!