ಎಲ್ಲರೂ ಡಾಲರ್ ನೋಡ್ತಾರೆ, ಆದ್ರೆ ತ್ಯಾಗಗಳನ್ನಲ್ಲ...; ಕೆನಡಾದಲ್ಲಿರುವ ಭಾರತೀಯ ಯುವತಿಯ ವಿಡಿಯೋ ವೈರಲ್

Published : Sep 27, 2026, 01:10 PM IST
Sacrifices of Living Abroad

ಸಾರಾಂಶ

ವಿದೇಶದಲ್ಲಿ ಕೆಲಸ ಮಾಡುವವರ ಲೈಫ್ ಹೊರಗಡೆ ನೋಡೋಕೆ ಮಾತ್ರ ಚೆನ್ನಾಗಿರುತ್ತೆ. ಆದರೆ, ಅದರ ಹಿಂದಿರುವ ಒಂಟಿತನ ಹಾಗೂ ಕಷ್ಟಗಳನ್ನು ಕೆನಡಾದಲ್ಲಿರುವ ಭಾರತೀಯ ಯುವತಿಯೊಬ್ಬಳು ಬಿಚ್ಚಿಟ್ಟಿದ್ದಾಳೆ. ಕೈತುಂಬಾ ಡಾಲರ್ ಸಂಪಾದನೆ ಮಾಡಿದರೂ, ಕುಟುಂಬದಿಂದ ದೂರ ಉಳಿಯುವ ನೋವು ಎಷ್ಟಿರುತ್ತದೆ ಎಂಬುದನ್ನು ಈಕೆ ಇನ್‌ಸ್ಟಾಗ್ರಾಮ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾಳೆ.

ವಿದೇಶದಲ್ಲಿ ಕೆಲಸ ಮಾಡಿಕೊಂಡು ಕೈತುಂಬಾ ಸಂಪಾದನೆ ಮಾಡುವವರ ಲೈಫ್‌ಸ್ಟೈಲ್ ಹೊರಗಿನಿಂದ ನೋಡೋಕೆ ಸಖತ್ ಅಟ್ರಾಕ್ಟಿವ್ ಆಗಿ ಕಾಣುತ್ತೆ. ಆದರೆ, ಅದರ ಹಿಂದಿರುವ ಒಂಟಿತನ, ಕುಟುಂಬದಿಂದ ದೂರವಿರುವ ನೋವು ಹಾಗೂ ದಿನನಿತ್ಯದ ಒದ್ದಾಟಗಳು ಯಾರಿಗೂ ಕಾಣಿಸುವುದಿಲ್ಲ. ಇದೇ ವಿಚಾರವನ್ನು ಕೆನಡಾದಲ್ಲಿ ನೆಲೆಸಿರುವ ಭಾರತೀಯ ಯುವತಿಯೊಬ್ಬಳು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ. ಕನುಪ್ರಿಯಾ ಎಂಬ ಯುವತಿ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಒಂದು ವಿಡಿಯೋ ಪೋಸ್ಟ್ ಮಾಡಿದ್ದಾಳೆ.

ಎಲ್ಲರೂ ಡಾಲರ್ ನೋಡ್ತಾರೆ, ಆದ್ರೆ ತ್ಯಾಗಗಳನ್ನಲ್ಲ...

ವಿದೇಶದಲ್ಲಿರುವವರು ಸಾಕಷ್ಟು ಹಣ ಸಂಪಾದನೆ ಮಾಡುತ್ತಾರೆ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ, ಅದಕ್ಕಾಗಿ ಅವರು ತೆರುವ ಬೆಲೆಯನ್ನು ಕೂಡ ಅರ್ಥಮಾಡಿಕೊಳ್ಳಬೇಕು ಎನ್ನುವುದು ಈ ಯುವತಿಯ ಸಂದೇಶ. ಎರಡು-ಮೂರು ವರ್ಷಗಳ ನಂತರ ಊರಿಗೆ ವಾಪಸ್ ಹೋದಾಗ, ಅಪ್ಪ-ಅಮ್ಮನಿಗೆ ವಯಸ್ಸಾಗಿರುವುದು ಅರಿವಿಗೆ ಬರುತ್ತದೆ. ಮನೆಯಲ್ಲಿ ನಡೆಯುವ ಶುಭಕಾರ್ಯಗಳು ಹಾಗೂ ಹಬ್ಬ-ಹರಿದಿನಗಳನ್ನು ಕೇವಲ ವಿಡಿಯೋ ಕಾಲ್ ಮೂಲಕವಷ್ಟೇ ನೋಡಬೇಕಾದ ಅನಿವಾರ್ಯತೆ ಇರುತ್ತದೆ. ಒಂದು ಸಣ್ಣ ಹುಷಾರಿಲ್ಲದಿದ್ದರೂ, ವಿದೇಶದಲ್ಲಿ ನಮ್ಮನ್ನು ನಾವೇ ನೋಡಿಕೊಳ್ಳಬೇಕಾದ ಪರಿಸ್ಥಿತಿಯನ್ನು ಆಕೆ ವಿವರಿಸಿದ್ದಾಳೆ.

ಮಾತ್ರೆ ನುಂಗುವುದರಿಂದ ಹಿಡಿದು, ಅಡುಗೆ ಮಾಡುವುದು ಹಾಗೂ ಮನೆಗೆಲಸದವರೆಗೆ ಪ್ರತಿಯೊಂದೂ ನಮ್ಮದೇ ಜವಾಬ್ದಾರಿಯಾಗಿರುತ್ತದೆ. 'ಒಂದು ಕಪ್ ಟೀ ಬೇಕಾ?' ಎಂದು ಕೇಳಲು ಕೂಡ ಹತ್ತಿರದಲ್ಲಿ ಯಾರೂ ಇರುವುದಿಲ್ಲ. ಕೆಲವೊಮ್ಮೆ ಹುಷಾರಿಲ್ಲದಿದ್ದರೂ ಕೆಲಸಕ್ಕೆ ಹೋಗಲೇಬೇಕಾದ ಅನಿವಾರ್ಯತೆ ಇರುತ್ತದೆ ಎಂದು ಆಕೆ ಹೇಳಿದ್ದಾಳೆ. ಊರಿನಲ್ಲಿ ಕುಟುಂಬದವರೆಲ್ಲಾ ಒಟ್ಟಾಗಿ ಹಬ್ಬ ಆಚರಿಸುವಾಗ, ವಿದೇಶದಲ್ಲಿ ಕೆಲಸ ಮಾಡಬೇಕಾದಾಗಿನ ಬೇಸರವನ್ನು ಯುವತಿ ವಿಡಿಯೋದಲ್ಲಿ ಹಂಚಿಕೊಂಡಿದ್ದಾಳೆ. 'ಎಲ್ಲರೂ ಡಾಲರ್ ಲೆಕ್ಕ ಹಾಕ್ತಾರೆ, ಆದ್ರೆ ನಮ್ಮ ತ್ಯಾಗಗಳು ಯಾರಿಗೂ ಕಾಣಲ್ಲ' ಎನ್ನುವ ಸಂದೇಶವನ್ನು ಕನುಪ್ರಿಯಾ ಈ ವಿಡಿಯೋ ಮೂಲಕ ಸಾರಿದ್ದಾಳೆ.

ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ವಿದೇಶದಲ್ಲಿ ನೆಲೆಸಿರುವ ಅನೇಕರು ಕಮೆಂಟ್ ಮಾಡಿದ್ದಾರೆ. ವಿದೇಶಿ ಜೀವನ ಯಾವಾಗಲೂ ಐಷಾರಾಮಿಯಾಗಿರುವುದಿಲ್ಲ, ಕುಟುಂಬವನ್ನು ಮಿಸ್ ಮಾಡಿಕೊಳ್ಳುವುದೇ ಅತಿ ದೊಡ್ಡ ಕಷ್ಟ ಎಂದು ಹಲವರು ಒಪ್ಪಿಕೊಂಡಿದ್ದಾರೆ. ಆದರೆ, ಇನ್ನೊಂದೆಡೆ ಕೆಲವರು ಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ. 'ಹೆಚ್ಚು ಹಣ ಸಂಪಾದನೆ ಮಾಡಬೇಕೆಂದರೆ, ಕೆಲವೊಂದನ್ನು ಕಳೆದುಕೊಳ್ಳಲೇಬೇಕು. ಎಲ್ಲವೂ ಒಟ್ಟಿಗೆ ಸಿಗಬೇಕು ಎನ್ನುವುದು ಕೇವಲ ಆಸೆ ಮಾತ್ರ. ಒಂದು ಕಡೆ ಕಳೆದುಕೊಂಡರೆ, ಇನ್ನೊಂದು ಕಡೆ ಏನಾದರೂ ಸಿಗುತ್ತದೆ' ಎಂದು ಕೆಲವರು ವಾಸ್ತವವನ್ನು ಎತ್ತಿ ತೋರಿಸಿದ್ದಾರೆ.

PREV
Read more Articles on
click me!

Recommended Stories

ಕಾಲೇಜು ಹಾಸ್ಟೆಲ್‌ಗೆ ಹೊರಟಿದ್ದ 22ರ ವಿದ್ಯಾರ್ಥಿನಿ ಹೋಮ್‌ಸ್ಟೇನಲ್ಲಿ ಅನುಮಾನಾಸ್ಪದ ಸಾವು!
ಸ್ವಿಗ್ಗಿ ಡೆಲಿವರಿ ಬಾಯ್‌ ಜೊತೆ 5 ಸ್ಟಾರ್ ಹೋಟೆಲ್‌ಗೆ ಹೊರಟ ಕಂಟೆಂಟ್ ಕ್ರಿಯೇಟರ್! ಮುಂದೆ ನಡೆದಿದ್ದೇನು ಗೊತ್ತಾ?