₹1.5 ಕೋಟಿ ಕಾರಿನಲ್ಲಿ ಅಮ್ಮನ ಸುತ್ತಾಟ! ನ್ಯಾನೋ ಕಾರು ಖರೀದಿ ವೇಳೆ ನಕ್ಕವರಿಗೆ ಭರ್ಜರಿ ತಿರುಗೇಟು!

Published : Aug 28, 2026, 01:27 PM IST
viral video

ಸಾರಾಂಶ

ಒಮ್ಮೆ ನ್ಯಾನೋ ಕಾರ್ ಕನಸಿಗೆ ಅಪಹಾಸ್ಯಕ್ಕೊಳಗಾಗಿದ್ದ ಹರ್ಷಿತ್ ಪಟೇಲ್ ಎಂಬ ಯುವಕ, ಇಂದು ಟ್ರೇಡಿಂಗ್ ಮೂಲಕ 1.5 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಕಾರು ಖರೀದಿಸಿ ಯಶಸ್ಸು ಕಂಡಿದ್ದಾನೆ. ತನ್ನ ಹೊಸ ಕಾರಿನಲ್ಲಿ ತಾಯಿಯನ್ನು ಕೂರಿಸಿ ಆಕೆಯ ಆನಂದಭಾಷ್ಪದ ವಿಡಿಯೋ ಹಂಚಿಕೊಂಡಿದ್ದು, ತನ್ನ ಯಶಸ್ಸೇ ಟೀಕಾಕಾರರಿಗೆ ಉತ್ತರ ಎಂದು ಹೇಳಿಕೊಂಡಿದ್ದಾನೆ.

ಒಂದು ಕಾಲದಲ್ಲಿ ನ್ಯಾನೋ ಕಾರ್ ಕೊಳ್ಳುವ ಕನಸು ಕಂಡಿದ್ದಕ್ಕೆ ಜನರಿಂದ ಅಪಹಾಸ್ಯಕ್ಕೊಳಗಾಗಿದ್ದ ಯುವಕನೊಬ್ಬ, ಇಂದು ಅದೇ ಜನ ಹುಬ್ಬೇರಿಸುವಂತೆ 1.5 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಕಾರು ಖರೀದಿಸಿದ್ದಾನೆ. ಹರ್ಷಿತ್ ಪಟೇಲ್ ಎಂಬ ಈ ಯುವಕ, ಟ್ರೇಡಿಂಗ್ ಮೂಲಕ ಈ ಆರ್ಥಿಕ ಯಶಸ್ಸನ್ನು ಸಾಧಿಸಿದ್ದಾನೆ. ತನ್ನ ಹೊಸ ಕಾರಿನಲ್ಲಿ ತಾಯಿಯನ್ನು ಕೂರಿಸಿದಾಗ, ಆ ತಾಯಿ ಆನಂದಭಾಷ್ಪ ಸುರಿಸುತ್ತಿರುವ ದೃಶ್ಯವನ್ನು ಹರ್ಷಿತ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ವಿಡಿಯೋ ವೈರಲ್ ಆಗಿದೆ. ತನ್ನ ಸಣ್ಣ ಆರಂಭ ಮತ್ತು ದೊಡ್ಡ ಕನಸುಗಳನ್ನು ಪ್ರಶ್ನಿಸಿದವರಿಗೆ ಈ ಗೆಲುವೇ ಉತ್ತರ ಎಂದು ಹರ್ಷಿತ್ ಹೇಳಿಕೊಂಡಿದ್ದಾನೆ.

ನ್ಯಾನೋ ಕಾರ್ ಬಗ್ಗೆ ಮಾತಾಡಿದಾಗ ಜನ ನಕ್ಕಿದ್ರು

‘ನಾವು ಒಂದು ನ್ಯಾನೋ ಕಾರ್ ಬಗ್ಗೆ ಮಾತಾಡಿದಾಗ ಜನ ನಕ್ಕಿದ್ರು. ಇವತ್ತು ನಮ್ಮ ಅಮ್ಮ 1.5 ಕೋಟಿ ರೂಪಾಯಿ ಕಾರಲ್ಲಿ ಕೂತಿದ್ದಾರೆ. ನಿಮ್ಮ ಆರಂಭ ತುಂಬಾ ಚಿಕ್ಕದಾಗಿದ್ದರೆ, ಜನ ಯಾವಾಗಲೂ ನಿಮ್ಮ ಗುರಿಗಳನ್ನು ಅನುಮಾನಿಸುತ್ತಾರೆ. ‘ರಿಸ್ಕ್ ಬೇಡ, ಸೇಫ್ ಆಗಿರು, ಒಂದು ಸಾಮಾನ್ಯ ಕೆಲಸ ಹಿಡಿ, ದೊಡ್ಡ ಕನಸು ಕಾಣೋದನ್ನ ಬಿಡು’ ಅಂತ ಬುದ್ಧಿವಾದ ಹೇಳ್ತಾರೆ. ನಾವು ಆ ಚಿಕ್ಕ ರೂಮಲ್ಲಿ ವಾಸವಾಗಿದ್ದಾಗ ಇಂತಹ ಮಾತುಗಳಿಗೆ ಲೆಕ್ಕವೇ ಇರಲಿಲ್ಲ. ಆದರೆ, ಅವರ ಪ್ರತಿಯೊಂದು ಅನುಮಾನದ ಮಾತುಗಳೇ ನಮಗೆ ಇನ್ನಷ್ಟು ಸ್ಫೂರ್ತಿ ನೀಡಿದವು,’ ಎಂದು ಹರ್ಷಿತ್ ಬರೆದುಕೊಂಡಿದ್ದಾರೆ.

ಟ್ರೇಡಿಂಗ್ ಅಂದ್ರೆ ಬರೀ ದುಡ್ಡು ಮಾಡೋದಲ್ಲ

‘ಟ್ರೇಡಿಂಗ್ ಅಂದ್ರೆ ಬರೀ ದುಡ್ಡು ಮಾಡೋದಲ್ಲ, ನಮ್ಮ ತಂದೆ-ತಾಯಿಗೆ ಅವರು ಅರ್ಹವಾದ ಜೀವನವನ್ನು ನೀಡುವ ಸ್ವಾತಂತ್ರ್ಯವನ್ನು ಮರಳಿ ಪಡೆಯುವುದು. ನಿಮ್ಮ ಅಮ್ಮನ ಕಣ್ಣಲ್ಲಿ ಬರುವ ಆನಂದಭಾಷ್ಪ, ನೀವು ನಿದ್ದೆಯಿಲ್ಲದೆ ಕಳೆದ ರಾತ್ರಿಗಳು, ಅನುಭವಿಸಿದ ನಷ್ಟ, ಮಾನಸಿಕ ಒತ್ತಡ ಎಲ್ಲವನ್ನೂ ಸಾರ್ಥಕಗೊಳಿಸುತ್ತೆ. ಪ್ರಯತ್ನಿಸುತ್ತಲೇ ಇರಿ, ನಿಮ್ಮ ಯಶಸ್ಸಿನ ತೂಕವೇ ನಿಮ್ಮ ದೊಡ್ಡ ಉತ್ತರವಾಗಲಿ' ಎಂದು ಹರ್ಷಿತ್ ಹೇಳಿದ್ದಾರೆ.

ಹರ್ಷಿತ್ ಅವರ ಈ ವಿಡಿಯೋಗೆ ಸಾವಿರಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದು, 'ಇದೇ ನಮ್ಮ ಕನಸು ಕೂಡ,’ ಎಂದು ಹಲವರು ಕಮೆಂಟ್ ಮಾಡಿದ್ದಾರೆ. “ಇದು ಪ್ರತಿಯೊಂದು ಸಾಮಾನ್ಯ ಕುಟುಂಬದ ಕನಸು,” ಎಂದು ಅನೇಕರು ಹೇಳಿದ್ದಾರೆ.

PREV
Read more Articles on
click me!

Recommended Stories

ಎಲ್ಲಾ ಸಬ್ಜೆಕ್ಟ್‌ನಲ್ಲೂ ಫೇಲ್.. ಇಂದು 'ಸ್ಪೇಸ್' ಕಂಪನಿ ಮಾಲೀಕ! ಟ್ರ್ಯಾಕ್ಟರ್ ಚಾಲಕನ ಮಗನ ₹800 ಕೋಟಿ ಸಾಮ್ರಾಜ್ಯ
ಮಂಡ್ಯ ಜನರ ಧೈರ್ಯ: ಪೊಲೀಸ್ ಠಾಣೆಯಿಂದ ಪರಾರಿ ಆಗ್ತಿದ್ದ ಕಳ್ಳನನ್ನ, ಕೈಲಿರೋ ಬೇಡಿ ನೋಡಿ ಅಟ್ಟಾಡಿಸಿ ಹಿಡಿದರು!