ಚಾಟ್ ಜಿಪಿಟಿಯನ್ನ ಮನುಷ್ಯರೆಂದು ಭಾವಿಸಿ, ಮೊಮ್ಮಗನ ಮದುವೆ ಮಾತುಕತೆ ನಡೆಸಿದ ಅಜ್ಜಿ! ವಿಡಿಯೋ ವೈರಲ್

Published : Aug 28, 2026, 09:33 AM IST
viral video

ಸಾರಾಂಶ

ಚಾಟ್‌ಜಿಪಿಟಿಯನ್ನು ನಿಜವಾದ ಮನುಷ್ಯ ಎಂದು ಭಾವಿಸಿ, ಅಜ್ಜಿಯೊಬ್ಬರು ತಮ್ಮ ಮೊಮ್ಮಗನ ಮದುವೆಯ ಬಗ್ಗೆ ಚರ್ಚಿಸುವ ವಿಡಿಯೋ ವೈರಲ್ ಆಗಿದೆ. ಈ ಮುದ್ದಾದ ಸಂಭಾಷಣೆಯು ಹಿರಿಯರ ಮುಗ್ಧತೆ ಮತ್ತು ಹೊಸ ತಂತ್ರಜ್ಞಾನದ ಕುರಿತ ಅವರ ಗ್ರಹಿಕೆಯನ್ನು ತೋರಿಸುತ್ತದೆ.

ಹಿರಿಯರಿಗೆಲ್ಲಾ ಈಗಿನ ಹೊಸ ಟೆಕ್ನಾಲಜಿ ಬಗ್ಗೆ ಅಷ್ಟಾಗಿ ಗೊತ್ತಿರಲ್ಲ. ಹೀಗಾಗಿಯೇ ಚಾಟ್‌ಜಿಪಿಟಿಯಂತಹ ತಂತ್ರಜ್ಞಾನವನ್ನು ನಿಜವಾದ ಮನುಷ್ಯರು ಅಂತಾ ಅಂದುಕೊಳ್ಳುವವರೂ ಇದ್ದಾರೆ. ಸದ್ಯ, ಇಂಥದ್ದೇ ಒಬ್ಬರು ಅಜ್ಜಿಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಈ ವಿಡಿಯೋದಲ್ಲಿ ಅಜ್ಜಿ, ಚಾಟ್‌ಜಿಪಿಟಿ ಜೊತೆ ಮಾತಾಡುತ್ತಿದ್ದು, ಅವರ ಜೊತೆ ಮೊಮ್ಮಗಳೂ ಇದ್ದಾಳೆ. ಆ ಕಡೆ ಇರೋದು ನಿಜವಾದ ಮನುಷ್ಯ ಅಂತಾನೇ ಅಜ್ಜಿ ಭಾವಿಸಿದ್ದಾರೆ.

ಅಭಿರುಚಿ ಭಟ್ಟಿ ಎಂಬ ಯುವತಿ ಈ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ‘ನನ್ನ ಅಜ್ಜಿ ಚಾಟ್‌ಜಿಪಿಟಿ ಜೊತೆ ಮಾತಾಡ್ತಿದ್ದಾರೆ. ಆ ಕಡೆ ಇರೋದು ನಿಜವಾದ ಮನುಷ್ಯ ಅಂತ ಅವರು ನಂಬಿದ್ದಾರೆ... ಸಣ್ಣ ಸಣ್ಣ ವಿಷಯಗಳಲ್ಲೂ ಖುಷಿ ಕಾಣುವ ಈ ಮುಗ್ಧ ತಲೆಮಾರನ್ನು ನಾವು ಯಾವಾಗಲೂ ಕಾಪಾಡಬೇಕು’ ಎಂದು ಅವರು ಬರೆದುಕೊಂಡಿದ್ದಾರೆ.

ಸಣ್ಣ ಸಣ್ಣ ವಿಷಯಗಳಲ್ಲೂ ಖುಷಿ

ವಿಡಿಯೋ ಶುರುವಾಗುತ್ತಿದ್ದಂತೆ, ಅಜ್ಜಿ ತನ್ನ ಮೊಮ್ಮಗಳು ಅಭಿರುಚಿ ಬಳಿ ಮೊಮ್ಮಗ ಅಭಿಷು (ಆಶು) ಮದುವೆ ಪ್ರಸ್ತಾಪದ ಬಗ್ಗೆ ಮಾತಾಡುತ್ತಾರೆ. ‘ಆ ಹುಡುಗಿ ವಿದೇಶದವಳಾ? ಅವಳಿಗೆ ಹಿಂದಿ ಮಾತಾಡೋಕೆ ಬರುತ್ತಾ?’ ಅಂತ ಅಜ್ಜಿ ಕೇಳ್ತಾರೆ. ಇದೇ ಹೊತ್ತಿಗೆ, ಚಾಟ್‌ಜಿಪಿಟಿ ‘ಹಲೋ’ ಎಂದು ಸಂಭಾಷಣೆಗೆ ಎಂಟ್ರಿ ಕೊಡುತ್ತೆ. ಇದಕ್ಕೆ ಅಜ್ಜಿ ತಕ್ಷಣವೇ ಪ್ರತಿಕ್ರಿಯೆ ನೀಡುತ್ತಾರೆ. "ನಾನು ನಿಮ್ಮ ಜೊತೆ ಮಾತನಾಡಲು ಅಥವಾ ಏನಾದರೂ ಕೇಳಲು ಇಲ್ಲಿದ್ದೇನೆ" ಎಂದು ಎಐ ತನ್ನನ್ನು ಪರಿಚಯಿಸಿಕೊಳ್ಳುತ್ತದೆ.

ನಂತರ, ಮೊಮ್ಮಗಳು ಚಾಟ್‌ಜಿಪಿಟಿಗೆ ಅಜ್ಜಿಯ ಆರೋಗ್ಯ ವಿಚಾರಿಸುವಂತೆ ಕೇಳುತ್ತಾಳೆ. ಎಐ, ‘ಕೈಸೆ ಹೋ ಆಪ್? ಠೀಕ್ ಹೋ?’ (ಹೇಗಿದ್ದೀರಾ? ಚೆನ್ನಾಗಿದ್ದೀರಾ?) ಎಂದು ಕೇಳಿದಾಗ, ಅಜ್ಜಿ ‘ಹಾಂ, ಬಿಲ್ಕುಲ್’ (ಹೌದು, ಖಂಡಿತ) ಎಂದು ಉತ್ತರಿಸುತ್ತಾರೆ.

ಅವನು ಮದುವೆ ಆಗ್ತಿಲ್ವಾ?

ಮಾತಾಡುತ್ತಿರುವುದು ಅಭಿಷುವಿನ ದಾದಿ (ಅಜ್ಜಿ) ಎಂದು ಮೊಮ್ಮಗಳು ಎಐಗೆ ವಿವರಿಸಿದಾಗ, ಅದಕ್ಕೂ ಎಐ ಪ್ರತಿಕ್ರಿಯಿಸುತ್ತದೆ. ಅಜ್ಜಿಗೆ ಮದುವೆ ಬಗ್ಗೆ ಮಾತಾಡಬೇಕಿದೆ ಎಂದು ಮೊಮ್ಮಗಳು ಮತ್ತೆ ಎಐಗೆ ಹೇಳುತ್ತಾಳೆ. ಈ ನಡುವೆ ಅಜ್ಜಿ ‘ಕ್ಯಾ ಬೋಲ್ತಾ?’ (ಏನ್ ಹೇಳ್ತಾನೆ?) ಅಂತಾನೂ ಕೇಳ್ತಾರೆ. "ಇಬ್ಬರೂ ಖುಷಿಯಾಗಿರಬೇಕು. ಅವನು ಮದುವೆ ಆಗ್ತಿಲ್ವಾ?" ಎಂಬ ಪ್ರಶ್ನೆಯೊಂದಿಗೆ ವಿಡಿಯೋ ಕೊನೆಯಾಗುತ್ತದೆ. ಇದಕ್ಕೆ ಮೊಮ್ಮಗಳು "ಹಾಂ" (ಹೌದು) ಎಂದು ಉತ್ತರಿಸುತ್ತಾಳೆ.

ಈ ವಿಡಿಯೋಗೆ ಅನೇಕರು ಕಾಮೆಂಟ್ ಮಾಡಿದ್ದು, ಇದು ತುಂಬಾ ಮುದ್ದಾದ ವಿಡಿಯೋ ಎಂದು ಹೆಚ್ಚಿನವರು ಅಭಿಪ್ರಾಯಪಟ್ಟಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಈ ಪೋಸ್ಟ್ ನೋಡಿ

PREV
Read more Articles on
click me!

Recommended Stories

ಇನ್ನು ಕೇವಲ 2 ತಿಂಗಳು ಬಾಕಿ.. 'ಜಗತ್ತು ಅಂತ್ಯ' ಆಗುತ್ತಾ? 60 ವರ್ಷಗಳ ಹಿಂದೆ ಬರೆದ ಭವಿಷ್ಯದ ಸತ್ಯಾಸತ್ಯತೆ ಏನು?
ರೆಬೀಸ್‌ನ ಲಾಸ್ಟ್ ಸ್ಟೇಜ್‌ ಗೆದ್ದು ಮನೆಗೆ ಬಂದ ಬಾಲಕ.. ಇದು ಹೇಗೆ ಸಾಧ್ಯ? ವೈದ್ಯರಿಂದ ಅಚ್ಚರಿ ಉತ್ತರ