
ಮದುವೆ ಮಾಡಿಕೊಳ್ಳಬೇಕು ಎಂದರೆ, ಅತ್ತ ಏಳು ತಲೆಮಾರು, ಇತ್ತ ಏಳು ತಲೆಮಾರು ನೋಡಬೇಕು ಎಂದು ಹಿರಿಯರು ಹೇಳುತ್ತಾರೆ. ಈಗ ಅಷ್ಟು ಚರಿತ್ರೆಯನ್ನು ನೋಡುವ ತಾಳ್ಮೆ ಯಾರಿಗೂ ಇಲ್ಲ. ಆದರೆ ಹಿರಿಯರು ನಿರ್ಧರಿಸಿದ ವಿವಾಹ ಆಗಲಿ, ಇಬ್ಬರ ನಡುವಿನ ಅಭಿರುಚಿ, ಆಲೋಚನೆಗಳು ಒಂದಾಗಬೇಕು ಎಂದು ಇಂದಿನ ಯುವ ಜನತೆ ನೋಡುತ್ತಾರೆ. ಒಂದು ವಿಚಾರದಲ್ಲಿ ರಾಜಿಯದರೂ ಸಮಸ್ಯೆಗಳು ಎದುರಾಗುತ್ತದೆ ಎಂದು ಬಹಳ ಯೋಚನ ಮಾಡ್ತಾರೆ. ಇಂತಹದ್ದೇ ಯೋಚನೆಯಲ್ಲಿದ್ದ ಪುಣೆ ಮೂಲದ ವಿಕಾಸ್ ಲೋಹಿಯಾ ಎಂಬ ಯುವಕ ತಮ್ಮ ಮದುವೆ ಸಂಬಂಧಗಳ ಕುರಿತ ಅಪ್ ಡೇಟ್ಸ್ ಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಒಂದು ಎಕ್ಸ್ ಎಲ್ ಶೀಟ್ ಮಾಡಿದ್ದ. 29 ವರ್ಷ ಈ ಯುವಕ ಒಂದು ವರ್ಷ ವಧುವಿನ ಹುಡುಕಾಟ ಮಾಡಿ, ಸುಮಾರು 55 ಮ್ಯಾಚ್‌ಗಳನ್ನು ನೋಡಿದ ಬಳಿಕ ಕೊನೆಗೂ ಮದುವೆಗೆ ಓಕೆ ಅಂದಿದ್ದಾನೆ. ಆತನ ವಿವಾಹ ಕಾರ್ಯಕ್ರಮವೂ 2027 ಜೂನ್‌ಗೆ ನಿಗದಿಯಾಗಿದೆಯಂತೆ.
ವೃತ್ತಿಯಲ್ಲಿ ಮ್ಯಾನೇಜರ್ ಆಗಿರುವ ವಿಕಾಸ್, ಜೊತೆ ಜೊತೆ ಕಂಟೆಂಟ್ ಕ್ರಿಯೇಟ್ ಮಾಡುವ ಕೆಲಸವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಇದರಂತೆ ತಮ್ಮ ಒಂದು ವರ್ಷದ ಹುಡುಕಾಟದಲ್ಲಿ 55 ಪ್ರಪೋಸಲ್‌ಗಳನ್ನು ಟ್ರ್ಯಾಕ್ ಮಾಡಿ ಕೊನೆಗೂ ಸಂಗಾತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕುಟುಂಬಸ್ಥರು ಮದುವೆಗೆ ಗ್ರೀನ್ ಸಿಗ್ನಲ್ ನೀಡಿದ್ದು, ಮದುವೆಗೂ ಮುನ್ನ ಒಬ್ಬರನ್ನು ಒಬ್ಬರು ಅರಿತುಕೊಳ್ಳಲು ಸಾಕಷ್ಟು ಸಮಯವನ್ನು ತೆಗೆದುಕೊಂಡಿದ್ದಾರಂತೆ.
ಈ ಕುರಿತಂತೆ ತಮ್ಮ ಇನ್ ಸ್ಟಾದಲ್ಲಿ ಪೋಸ್ಟ್ ಮಾಡಿರುವ ವಿಕಾಸ್, 2025 ನವೆಂಬರ್ ನಿಂದ 2026 ಜುಲೈ ವರೆಗೂ ಸುಮಾರು 55ಕ್ಕೂ ಹೆಚ್ಚು ಮಹಿಳೆಯೊಂದಿಗೆ ಚಾಟ್ ಮಾಡಿದ್ದು, ಅವುಗಳನ್ನು ಟ್ರ್ಯಾಕ್ ಮಾಡಲು ಎಕ್ಸ್ ಎಲ್ ಶೀಟ್ ಮಾಡಿದ್ದೆ. ಇದರಲ್ಲಿ ಯಾರೊಂದಿಗೆ ಮಾತನಾಡುತ್ತಿದ್ದೇನೆ, ಯಾರು ರಿಜೆಕ್ಟ್ ಮಾಡಿದ್ದಾರೆ, ಯಾರನ್ನು ಮಾತನಾಡಬೇಕಿದೆ, ಯಾರೊಂದಿಗೆ ಯಾವ ವಿಚಾರಗಳನ್ನು ಹಂಚಿಕೊಂಡಿದ್ದೇನೆ ಎಂಬ ವಿವರಗಳನ್ನು ದಾಖಲು ಮಾಡಿದ್ದೆ. ಇದರಲ್ಲಿ ಪೋಷಕರ ಪ್ರತಿಕ್ರಿಯೆ ಏನು? ಸಂಬಂಧ ಮುಚ್ಚಿದೆಯೇ, ಉತ್ತಮ ಸಂಭಾಷಣೆಗಳು ಯಾವುದಿದೆ, ಉತ್ತಮ ಸ್ಥಿತಿಗಳು ಯಾವುದು ಎಂಬ ವಿವರಗಳನ್ನು ಈ ಶೀಟ್‌ನಲ್ಲಿ ಪಾಯಿಂಟ್ಸ್ ಮಾಡಿ ಸೇವ್ ಮಾಡುತ್ತಿದ್ದರಂತೆ.
ಇನ್ನು, ಹೊಸ ಪೋಸ್ಟ್ ವಿಕಾಸ್, ನಾನು ನನ್ನವಳನ್ನು ಹುಡುಕಾಟ ಮಾಡಿದ್ದು, ಜೂನ್ 2027ರಲ್ಲಿ ಮದುವೆ ನಿಗದಿಯಾಗಿದೆ ಎಂದು ತಿಳಿಸಿದ್ದಾರೆ. ವಿಕಾಸ್ ಅವರ ಈ ಪ್ರಯಾಣವನ್ನು ನೋಡಿದ ನೆಟ್ಟಿಗರು, ಕೊನೆಗೂ ಒಬ್ಬರನ್ನು ಕಂಡುಕೊಂಡಿದ್ದೀರಿ ಶುಭಾಶಯಗಳು ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಹಲವರು ತಮ್ಮದೇ ಪ್ರತಿಕ್ರಿಯೆ ನೀಡಿದ್ದು, ಎಕ್ಸ್ ಎಲ್ ಶೀಟ್ ಸರಿಯಾದ ಬಳಕೆ ಇದಾಗಿದೆ. ಇಡೀ ವಿವಾಹ ಸಮುದಾಯದ ಪರವಾಗಿ ನಿಮಗೆ ಅಭಿನಂದನೆಗಳು ಎಂದು ಕಾಮೆಂಟ್ ಮಾಡಿದ್ದಾರೆ.
ಈ ಕುರಿತಂತೆ ಮನಿಕಂಟ್ರೋಲ್ ಜೊತೆ ಮಾತನಾಡರುವ ವಿಕಾಸ್, ಇಬ್ಬರೂ ಹರಿಯಾಣ ಮೂಲದವರು, ಇಬ್ಬರು ಕೆಲಸ ಮಾಡುತ್ತಿದ್ದೇವೆ. ಮೊದಲ ಬಾರಿಗೆ ಆಕೆಯೊಂದಿಗೆ ಮಾತನಾಡುವ ಸಂದರ್ಭದಲ್ಲಿ ನನಗೆ ಬರುತ್ತಿರುವ ಸಂಬಳದಲ್ಲಿ ಅರ್ಧ ಮೊತ್ತವನ್ನು ಮಾತ್ರ ಹೇಳಿದ್ದೆ. ಇಬ್ಬರ ನಡುವಿನ ಸಾಮಾನ್ಯ ಸಂಗತಿಗಳಿಗೆ ಒಟ್ಟಾಗಲು ಕಾರಣವಾಯ್ತು. ಏಕೆಂದರೆ ನಾನು ಮಾತನಾಡಿದ ಹಲವು ಯುವತಿಯರಿಗೆ ತಮ್ಮಗೆ ಸಂಗತಿಯಾಗುವ ವ್ಯಕ್ತಿ ಎಷ್ಟು ಸಂಪಾದನೆ ಮಾಡಬೇಕು ಎಂಬ ಬಗ್ಗೆ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದರು. ನಾವು ಇಬ್ಬರು ಕೆಲಸ ಮಾಡುತ್ತಿರುವ ಕಾರಣ ಉತ್ತಮ ಜೀವನ ನಡೆಸಬಹುದು. ಆದರೆ ಕೆಲ ಮಾತುಕತೆಗಳ ಬಳಿಕ ಆಕೆಗೆ ನಿಜವಾದ ಸಂಬಳ ಎಷ್ಟು ಅಂತ ಹೇಳ್ದೆ, ಆಗ ಇಬ್ಬರ ಮುಖದಲ್ಲಿ ನಗು ಇತ್ತು ಎಂದು ವಿವರಿಸಿದ್ದಾರೆ.