
ದೆಹಲಿ (ಆ.20) ಮಗುವಿನ ಪೋಷಣೆ ಮುಖ್ಯವಾಯಿತು. ಇತ್ತ ಮಗು ತಾಯಿಯನ್ನು ಬಿಟ್ಟು ಇರಲು ಕೇಳುತ್ತಿರಲಿಲ್ಲ. ಬೇಬಿ ಡೇ ಕೇರ್, ಬೇಬಿ ಕೇರ್ ಟೇಕರ್ ಸೇರಿದಂತೆ ಹಲವು ಪ್ರಯೋಗ ಮಾಡಿದರೂ ಮಗು ಕೇಳುತ್ತಿಲ್ಲ. ಇರೋದು ಒಂದು ಕಾರ್ಪೋರೇಟ್ ಉದ್ಯೋಗ. ಉತ್ತಮ ವೇತನದಿಂದ ಕುಟುಂಬ ನಿರ್ವಹಣೆಯಾಗುತ್ತಿದೆ. ಆದರೆ ಗಟ್ಟಿ ನಿರ್ಧಾರ ಮಾಡಬೇಕಾದ ಅನಿವಾರ್ಯತೆ ಮಹಿಳೆಗೆ ಎದುರಾಗಿತ್ತು. ಮಗುವಿನ ಪಾಲನೆ, ಪೋಷಣೆಗಾಗಿ ಕಾರ್ಪೋರೇಟ್ ಉದ್ಯೋಗ ತೊರೆದ ಮಹಿಳೆ, ಮನೆಯಲ್ಲೇ ಕುಳಿತು ಆದಾಯಗಳಿಸಲು ಪ್ಲಾನ್ ಮಾಡಿದ್ದಾಳೆ. ಇದೀಗ 21 ಲಕ್ಷ ರೂಪಾಯಿ ಆದಾಯದ ಮೂಲಕ ಇದೀಗ ಹೊಸ ಉದ್ಯಮ ಆರಂಭಿಸಿ ಭರ್ಜರಿ ಯಶಸ್ಸು ಕಂಡಿದ್ದಾರೆ.
ಸ್ನಿಗ್ದಾ ಅನ್ನೋ ಮಹಿಳೆ ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್ ಮೂಲಕ ಈ ಮಾಹಿತಿ ಹಂಚಿಕೊಂಡಿದ್ದಾರೆ. ಕಾರ್ಪೋರೇಟ್ ಕೆಲಸಕ್ಕೆ ಹೋಗುವ ಬೆಳಗಿನ ಹೊತ್ತು ಮಗು ತೀವ್ರ ಆತಂಗೊಳ್ಳುತ್ತಿತ್ತು. ನನ್ನ ಬಿಟ್ಟಿರಲು ಕೇಳುತ್ತಿರಲಿಲ್ಲ. ಹಲವು ಮಹಿಳೆಯರು ಮಕ್ಕಳನ್ನು ಎಲ್ಲೆಲ್ಲೋ ಬಿಟ್ಟು ಕೆಲಸಕ್ಕೆ ತೆರಳುತ್ತಿದ್ದರು. ಆದರೆ ನನ್ನ ಮಗು ಹಾಗೂ ನನಗೂ ಸಾಧ್ಯವಾಗಲಿಲ್ಲ. ಹೀಗಾಗಿ ಕೆಲಸ ಬಿಡಲು ನಿರ್ಧರಿಸಿದೆ ಎಂದು ಸ್ನಿಗ್ಧಾ ಹೇಳಿದ್ದಾರೆ.
ಮಗುವನ್ನು ಬಿಟ್ಟು ಕೆಲಸಕ್ಕೆ ಹೋಗುವಾಗ ನನಗೆ ಅಪರಾಧ ಪ್ರಜ್ಞೆ ಕಾಡುತ್ತಿತ್ತು. ಮಗುವಿನ ಆತಂಕ, ನನ್ನ ದುಗುಡ ಪ್ರತಿ ದಿನ ಕಷ್ಟವಾಗತೊಡಗಿತ್ತು. ಹೀಗಾಗಿ ಕೆಲಸ ಬಿಡಲು ನಿರ್ಧರಿಸಿದ್ದೆ. 9 ರಿಂದ 5 ಗಂಟೆಯ ಕಾರ್ಪೋರೇಟ್ ಉದ್ಯೋಗ ತೊರೆಯುವಾಗ ನನ್ನ ಬಳಿ ಯಾವುದೇ ಉದ್ಯಮದ ಪ್ಲಾನ್ ಇರಲಿಲ್ಲ. ಮಗುವಿನ ಆರೈಕೆ, ಪಾಲನೆ ಬಿಟ್ಟರೆ ತಲೆಯಲ್ಲಿ ಯಾವುದೇ ಯೋಚನೆಯೂ ಇರಲಿಲ್ಲ. ಕೆಲಸ ಬಿಟ್ಟ ಬಳಿಕ ಮಗುವಿನ ಜೊತೆಯಲ್ಲೇ ಇದ್ದುಕೊಂಡು ಏನು ಮಾಡಲು ಸಾಧ್ಯ ಅನ್ನೋ ಕುರಿತು ಆಲೋಚನೆ ಮಾಡಲು ಆರಂಭಿಸಿದ್ದೆ ಎಂದು ಸ್ನಿಗ್ದಾ ಹೇಳಿಕೊಂಡಿದ್ದಾರೆ.
ಮಗುವಿನ ಜೊತೆಗೆ, ಮನೆಯಲ್ಲೇ ಆದಾಯಗಳಿಸುವ ದಾರಿ ಹುಡುಕಲು ಆರಂಬಿಸಿದ ಸ್ನಿಗ್ದಾ ಹೋಮ್ ಸ್ಟೇ ಉದ್ಯಮ ಆರಂಭಿಸಲು ನಿರ್ಧರಿಸಿದ್ದಾರೆ. ಶಾರ್ಟ್ ಟರ್ಮ್ ರೆಂಟ್ ಉದ್ಯಮ ಕುರಿತು ಅಧ್ಯಯನ ಆರಂಭಿಸಿದೆ. ಮಾಹಿತಿ ಹುಡುಕಿದೆ. 'Airbnb ನಾನು ತಂಗಿರಲಿಲ್ಲ. ಎಲ್ಲಾ ಮಾಹಿತಿ ಪಡೆದು ಹೋಮ್ ಸ್ಟೇ ಉದ್ಯಮ ಆರಂಭಗೊಂಡಿತು. ಮೊದಲ ದಿನವೇ ನನ್ನ ಅನುಮಾನ ದೂರವಾಯಿತು.
ಹೋಮ್ ಸ್ಟೇ ಉದ್ಯಮ ಆರಂಭಗೊಂಡು ಯಶಸ್ವಿಯಾಗಿ ನಡೆಯುತ್ತಿದೆ. ಇದೀಗ ಹೋಮ್ ಸ್ಟೇ ಉದ್ಯಮದಿಂದ 21 ಲಕ್ಷ ರೂಪಾಯಿ ಆದಾಯಗಳಿಸಿದ್ದೇನೆ ಎಂದಿ ಸ್ನಿಗ್ದಾ ಹೇಳಿದ್ದಾರೆ. ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದೇನೆ. ಮಗನ ಜೊತೆಗೆ ಸಮಯ ಕಳೆಯಲು ಸಾಧ್ಯವಾಗುತ್ತಿದೆ ಎಂದು ಸ್ನಿಗ್ದಾ ಹೇಳಿದ್ದಾರೆ.