3 ವರ್ಷಗಳ ಬಳಿಕ ಮನೆಗೆ ಬಂದ ಪುತ್ರಿ.. ಮಗಳ ಸರ್ಪ್ರೈಸ್‌ಗೆ ಅಮ್ಮ ಕಕ್ಕಾಬಿಕ್ಕಿ..! VIDEO

Published : Jul 28, 2026, 12:40 PM IST
mother and daughter sentiments

ಸಾರಾಂಶ

ಸುಮಾರು ಮೂರು ವರ್ಷಗಳ ಕಾಲ ಕುಟುಂಬದಿಂದ ದೂರವಿದ್ದ ಮೈತ್ರಿ ಎಂಬ ಯುವತಿ, ಯಾರಿಗೂ ತಿಳಿಸದೆ ಅನಿರೀಕ್ಷಿತವಾಗಿ ಮನೆಗೆ ಮರಳಿದ್ದಾಳೆ. ತನ್ನ ಮಗಳನ್ನು ಕಂಡ ತಾಯಿ, ತಂದೆ ಮತ್ತು ಸಹೋದರಿ ಸೇರಿದಂತೆ ಇಡೀ ಕುಟುಂಬದ ಭಾವುಕ ಪುನರ್ಮಿಲನದ ಕ್ಷಣಗಳು ಇಂಟರ್ನೆಟ್‌ನಲ್ಲಿ ವೈರಲ್ ಆಗಿವೆ.

ಬೆಂಗಳೂರು: ಕುಟುಂಬದಿಂದ ದೂರವಿರುವುದು ಎಷ್ಟು ಕಷ್ಟ ಎಂಬುದು ಪರವೂರಿನಲ್ಲಿ ಅಥವಾ ವಿದೇಶದಲ್ಲಿರುವವರಿಗೆ ಚೆನ್ನಾಗಿ ತಿಳಿದಿರುತ್ತದೆ. ಅದೆಷ್ಟೋ ತಿಂಗಳುಗಳು ಅಥವಾ ವರ್ಷಗಳ ಕಾಲ ಕುಟುಂಬವನ್ನು ಕಾಣದೆ ಕಾಯುವ ಆ ಕ್ಷಣಗಳು ಬಹಳ ನೋವಿನಿಂದ ಕೂಡಿರುತ್ತವೆ. ಆದರೆ, ಅನಿರೀಕ್ಷಿತವಾಗಿ ಮಗಳು ಮನೆಗೆ ಬಂದಾಗ ಆ ಕುಟುಂಬ ಅನುಭವಿಸುವ ಸಂಭ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅಂತಹದ್ದೇ ಒಂದು ಹೃದಯಸ್ಪರ್ಶಿ ವಿಡಿಯೋ ಈಗ ಇಂಟರ್ನೆಟ್‌ನಲ್ಲಿ ಕೋಟ್ಯಂತರ ಜನರ ಕಣ್ಣಾಲಿಗಳನ್ನು ಒದ್ದೆ ಮಾಡಿದೆ.

ಮೂರು ವರ್ಷಗಳ ಸುದೀರ್ಘ ಕಾಯುವಿಕೆ

ಮೈತ್ರಿ ಎಂಬ ಯುವತಿ ಸುಮಾರು ಮೂರು ವರ್ಷಗಳ ಕಾಲ ತನ್ನ ಕುಟುಂಬದಿಂದ ದೂರವಿದ್ದಳು. ಅಂತಿಮವಾಗಿ ಯಾರಿಗೂ ತಿಳಿಸದೆ ಮನೆಗೆ ಮರಳಲು ನಿರ್ಧರಿಸಿದ ಆಕೆ, ತನ್ನ ಪ್ರಯಾಣದ ಹಂತಗಳನ್ನು ವಿಡಿಯೋ ಮಾಡಿಕೊಂಡಿದ್ದಾಳೆ. ವಿಮಾನ ನಿಲ್ದಾಣ, ಪಾಸ್‌ಪೋರ್ಟ್ ಮತ್ತು ವಿಮಾನದ ದೃಶ್ಯಗಳೊಂದಿಗೆ ಆರಂಭವಾಗುವ ಈ ವಿಡಿಯೋ ಮುಂದೆ ಅತ್ಯಂತ ಭಾವುಕ ತಿರುವು ಪಡೆಯುತ್ತದೆ.

ಮನೆಗೆ ಕಾಲಿಡುತ್ತಿದ್ದಂತೆ ಮೈತ್ರಿ ನೇರವಾಗಿ ಓಡಿ ಹೋಗಿ ತನ್ನ ತಾಯಿಯನ್ನು ಅಪ್ಪಿಕೊಳ್ಳುತ್ತಾಳೆ. ತನ್ನ ಮಗಳು ಕಣ್ಣಮುಂದೆ ನಿಂತಿರುವುದನ್ನು ಕಂಡ ತಾಯಿಗೆ ಒಂದು ಕ್ಷಣ ನಂಬಲಾಗುವುದಿಲ್ಲ. ಮಗಳನ್ನು ಅಪ್ಪಿ ಬಿಕ್ಕಿ ಬಿಕ್ಕಿ ಅಳುವ ತಾಯಿಯ ದೃಶ್ಯ ನೋಡುಗರ ಮನ ಕರಗಿಸುತ್ತದೆ.

ನಂತರ ತನ್ನ ಸಹೋದರಿಯನ್ನು ಕಂಡ ಮೈತ್ರಿ ಆಕೆಯನ್ನು ತಬ್ಬಿಕೊಳ್ಳುತ್ತಾಳೆ. ಮೆಟ್ಟಿಲು ಇಳಿದು ಬರುತ್ತಿದ್ದ ಮನೆಯ ಇತರೆ ಸದಸ್ಯರು ಮೈತ್ರಿಯನ್ನು ಕಂಡು ಆಶ್ಚರ್ಯ ಮತ್ತು ಸಂತೋಷದಿಂದ ದಂಗಾಗುತ್ತಾರೆ. ಇನ್ನು ಮನೆಯ ಒಳಗಿದ್ದ ತಂದೆಯ ಬಳಿ ಹೋದಾಗ, ಅವರು ಮಗಳನ್ನು ಪ್ರೀತಿಯಿಂದ ಅಪ್ಪಿಕೊಂಡು ಹಣೆಯ ಮೇಲೆ ಮುತ್ತಿಡುವ ದೃಶ್ಯ ಅತ್ಯಂತ ಸುಂದರವಾಗಿದೆ.

ಮೈತ್ರಿ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಈಗ ಲಕ್ಷಾಂತರ ವೀಕ್ಷಣೆಗಳನ್ನು ಪಡೆದಿದೆ. ನೆಟ್ಟಿಗರು ಈ ವಿಡಿಯೋ ಕಂಡು ಭಾವುಕರಾಗಿದ್ದಾರೆ. ಈ ಸರ್ಪ್ರೈಸ್‌ಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದರೆ, ಪ್ರೀತಿ ಮತ್ತು ಸಂಬಂಧ ಗಟ್ಟಿಯಾಗಿದ್ದಾಗ ದೂರ ಎಂಬುದು ಕೇವಲ ಅಂಕಿಅಂಶವಷ್ಟೇ ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ. ದೂರದ ಊರಿನಲ್ಲಿರುವ ಮಕ್ಕಳನ್ನು ಕಾಣಲು ಕಾಯುತ್ತಿರುವ ಪ್ರತಿಯೊಬ್ಬ ತಂದೆ-ತಾಯಿಗೂ ಈ ವಿಡಿಯೋ ಕನೆಕ್ಟ್ ಆಗುತ್ತಿದೆ. ಒಟ್ಟಿನಲ್ಲಿ, ಮೂರು ವರ್ಷಗಳ ನಂತರ ಮಗಳು ಮನೆಗೆ ಮರಳಿದ ಈ ಸಂಭ್ರಮದ ಕ್ಷಣಗಳು ಇಡೀ ಇಂಟರ್ನೆಟ್ ಲೋಕಕ್ಕೆ 'ಫ್ಯಾಮಿಲಿ ಗೋಲ್ಸ್' ನೀಡುತ್ತಿವೆ.

 

 

PREV
Read more Articles on
click me!

Recommended Stories

ಇದು ಜೋಡೆತ್ತು ಕಥೆ.. ಜೈಲಲ್ಲೂ ದರ್ಶನ್‌ಗೆ 'ಯಶ್‌' ಯೋಚ್ನೆನಾ? ರಕ್ಷಿತಾ ಬಳಿ 'ದಾಸ' ಕೇಳಿ ಪಡೆದ ಉತ್ತರವೇನು?
ಕಲ್ಲು, ಮರಳಿಗೆ ನೀರಿನ ಬದಲು 40 ಸಾವಿರ ಕೆಜಿ ತುಪ್ಪ ಬಳಸಿ ಕಟ್ಟಿದ ದೇವಾಲಯ; ಈಗಲೂ ಗೋಡೆಗಳಿಂದ ಬೆಣ್ಣೆ ಬಸಿಯುತ್ತೆ!