ಸ್ಟಾಲ್‌ನಲ್ಲಿ ಒಂದೇ ಒಂದು ಮಾರಾಟವಿಲ್ಲ! ಕಣ್ಣೀರಿಟ್ಟ ಪತ್ನಿಗೆ ಧೈರ್ಯ ತುಂಬಿದ ಕಂಟೆಂಟ್ ಕ್ರಿಯೇಟರ್

Published : Oct 25, 2026, 06:13 PM IST
Business Loss

ಸಾರಾಂಶ

Viral Video : ಉತ್ತಮ ವ್ಯಾಪಾರದ ನಿರೀಕ್ಷೆಯಲ್ಲಿ ಸ್ಟಾಲ್‌ ಇಟ್ಟ ಮಹಿಳೆಗೆ ನಿರಾಸೆಯಾಗಿದೆ. ನೋವಿನಲ್ಲಿದ್ದ ಪತ್ನಿಗೆ ಸಾಂತ್ವಾನ ಹೇಳಿದ ಪತಿ ವೈರಲ್‌ ಆಗಿದ್ದಾನೆ.

ರಸ್ತೆ ಬದಿಯಲ್ಲಿ ವ್ಯಾಪಾರ ಶುರು ಮಾಡಿದವರು ಒಂದೇ ದಿನದಲ್ಲಿ ಫೇಮಸ್‌ ಆಗೋದು ಅಸಾಧ್ಯವಾದ ಮಾತು. ಹಾಗೇ ಎಲ್ಲ ದಿನ ಉತ್ತಮವಾಗಿ ಬ್ಯುಸಿನೆಸ್‌ ನಡೆಯುತ್ತೆ ಅನ್ನೋಕೆ ಸಾಧ್ಯವಿಲ್ಲ. ಆದ್ರೆ ಒಂದೇ ಒಂದು ವಸ್ತು ಸೇಲ್‌ ಆಗಿಲ್ಲ ಅಂದ್ರೆ ಬೇಸರವಾಗೋದು ಸಾಮಾನ್ಯ. ಅದೂ ಬ್ಯುಸಿನೆಸ್‌ ಶುರು ಮಾಡಿದ ಮೊದಲ ದಿನವೇ ವ್ಯಾಪಾರ ಆಗಿಲ್ಲ ಅಂದ್ರೆ ದುಃಖ ಉಮ್ಮಳಿಸಿ ಬರುತ್ತೆ. ಇದೇ ಸ್ಥಿತಿಯಲ್ಲಿದ್ದ ಪತ್ನಿಗೆ ಪತಿಯೊಬ್ಬ ಧೈರ್ಯ ತುಂಬಿದ್ದಾರೆ. ಅದ್ರ ವಿಡಿಯೋ ಈಗ ವೈರಲ್‌ ಆಗಿದೆ.

ಇಡೀ ದಿನ ವ್ಯಾಪಾರ ಶೂನ್ಯ

ದೆಹಲಿಯ ಮಯೂರ್ ವಿಹಾರ್ ಫೇಸ್ 3ರಲ್ಲಿ ನಡೆದ ಘಟನೆಯೊಂದು ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದೆ. ದಸರಾ ಹಬ್ಬದ ದಿನ ಸ್ನ್ಯಾಕ್ಸ್ ಮಾರಾಟ ಮಾಡಲು ಸ್ಟಾಲ್ ಹಾಕಿದ್ದ ದಂಪತಿಗೆ ಒಂದೇ ಒಂದು ಆರ್ಡರ್ ಕೂಡ ಸಿಗಲಿಲ್ಲ. ಸಂಜೆ ಶುರುವಾದ ವ್ಯಾಪಾರ ರಾತ್ರಿ 10.30 ಆದರೂ ಒಂದೇ ಒಂದು ಮಾರಾಟವಿಲ್ಲದೆ ಮುಗಿದಿತ್ತು. ಇದರಿಂದ ನಿರಾಶೆಗೊಂಡ ಪತ್ನಿಗೆ ಪತಿ ಧೈರ್ಯ ತುಂಬಿದ್ದಾರೆ.

ವಿಡಿಯೋದಲ್ಲಿ ಪತಿ, ಮಧ್ಯಾಹ್ನ 3 ಗಂಟೆಗೆ ಸಣ್ಣ ಟೇಬಲ್ ಮೇಲೆ ಸ್ನ್ಯಾಕ್ಸ್ ಸ್ಟಾಲ್ ಶುರುಮಾಡಿದ್ದೆವು. ಹೆಚ್ಚು ಜನ ಬಂದು ಖರೀದಿ ಮಾಡಬಹುದು ಎಂಬ ನಿರೀಕ್ಷೆಯಲ್ಲಿದ್ದೆಚು. ಆದರೆ ಸಮಯ ಕಳೆದರೂ ಗ್ರಾಹಕರು ಮಾತ್ರ ಬರಲಿಲ್ಲ. ರಾತ್ರಿ 10.30 ಆದರೂ ಒಂದೇ ಒಂದು ಉತ್ಪನ್ನವೂ ಮಾರಾಟವಾಗಲಿಲ್ಲ.ಇದರಿಂದ ಪತ್ನಿ ಬೇಸರಗೊಂಡಿದ್ದಾಳೆ ಎಂದು ವಿಡಿಯೋದಲ್ಲಿ ವ್ಯಕ್ತಿ ಹೇಳಿದ್ದಾರೆ.

ಪತ್ನಿಯ ಬೇಸರವನ್ನು ಗಮನಿಸಿದ ಕಂಟೆಂಟ್ ಕ್ರಿಯೇಟರ್, ವ್ಯಾಪಾರದಲ್ಲಿ ತಾಳ್ಮೆ ಬಹಳ ಮುಖ್ಯ. ತಮ್ಮ ಮುಖ್ಯ ವ್ಯವಹಾರ ಆನ್ಲೈನ್ನಲ್ಲಿದೆ, ಆಫ್ಲೈನ್ ಮಾರಾಟದಲ್ಲಿ ತಕ್ಷಣವೇ ಯಶಸ್ಸು ಸಿಗಬೇಕು ಎಂದೇನಿಲ್ಲ. ಅನೇಕರು ಬಂದು ಹೋಗಿದ್ದಾರೆ. ನಂಬರ್‌ ತೆಗೆದುಕೊಂಡು ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ಆರ್ಡರ್‌ ಬರುವ ನಿರೀಕ್ಷೆ ಇದೆ ಎಂದಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ದಂಪತಿಗೆ ಬೆಂಬಲ

ವಿಡಿಯೋ ವೈರಲ್ ಆಗುತ್ತಿದ್ದಂತೆ, ಹಲವರು ದಂಪತಿಗೆ ಬೆಂಬಲ ಸೂಚಿಸುತ್ತಿದ್ದಾರೆ. ವ್ಯಾಪಾರದಲ್ಲಿ ಕೆಲವೊಮ್ಮೆ ನಷ್ಟ ಅಥವಾ ನಿರಾಸೆ ಎದುರಾಗಬಹುದು, ಆದರೆ ಅದರಿಂದ ಪ್ರಯತ್ನ ನಿಲ್ಲಿಸಬಾರದು ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

PREV
Read more Articles on
click me!

Recommended Stories

“ಈಗಾಗಲೇ ನಷ್ಟದಲ್ಲಿದ್ದೇನೆ, ದಯವಿಟ್ಟು ರಿಟರ್ನ್ ಮಾಡಬೇಡಿ”; Flipkart Parcelನಲ್ಲಿ ಸಿಕ್ಕಿತು ಮನಕಲಕುವ ಮನವಿ!
75 ವರ್ಷದ ವ್ಯಕ್ತಿ ಜೊತೆ ಎಂಗೇಜ್ಮೆಂಟ್ ಮಾಡ್ಕೊಂಡಿದ್ದ ಬ್ಲಾಗರ್ ಯು ಟರ್ನ್ ! ಗಂಡನ ಜೊತೆ ಮರುಮದುವೆ