
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಎಲ್ಲ ವಿಡಿಯೋಗಳನ್ನು ನಂಬೋದು ಕಷ್ಟ. ಅನೇಕ ವಿಡಿಯೋಗಳನ್ನು ಜನರು ವೈರಲ್ ಆಗಲು ಮಾಡ್ತಾರೆ. ಕೆಲ ದಿನಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಒಂದು ವಿಡಿಯೋಕ್ಕೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ.
75 ವರ್ಷದ ರಾಮ್ಸಾಗರ್ ಮಹಿಳ ಬ್ಲಾಗರ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವ ವಿಡಿಯೋವೊಂದು ವೈರಲ್ ಆಗಿತ್ತು. ಈ ವೈರಲ್ ವಿಡಿಯೋ ಉತ್ತರ ಪ್ರದೇಶದ ಔರೈಯಾದ್ದು ಎನ್ನಲಾಗಿದೆ. ರೀನಾ ಎಂಬ ಮಹಿಳೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಲವಾರು ವೀಡಿಯೊಗಳನ್ನು ಪೋಸ್ಟ್ ಮಾಡಿದ್ದರು. ಈಗ ವೃದ್ಧ ವ್ಯಕ್ತಿ ಜೊತೆ ನಿಶ್ಚಿತಾರ್ಥ ಮಾಡ್ಕೊಂಡಿದ್ದನ್ನು ನಿರಾಕರಿಸಿದ್ದಾರೆ. ವೀಡಿಯೊದಲ್ಲಿ, ತನ್ನ ಪತಿ ವಾಪಸ್ ಬಂದಿದ್ದಾರೆ, ಅವರ ಜೊತೆ ವಾಸ ಮಾಡ್ತಿದ್ದೇನೆ ಎಂದಿದ್ದಲ್ಲದೆ, 75 ವರ್ಷದ ವ್ಯಕ್ತಿಯೊಂದಿಗೆ ನಿಶ್ಚಿತಾರ್ಥದ ಕೇವಲ ವಿಡಿಯೋಕ್ಕಾಗಿ ಮಾಡಿದ್ದು ಎಂದು ರೀನಾ ರಜಪೂತ್ ಹೇಳಿದ್ದಾರೆ.
ತನ್ನ ನಿಶ್ಚಿತಾರ್ಥದ ವಿಡಿಯೋ ನೋಡಿ ಪತಿ ವಾಪಸ್ ಬಂದಿದ್ದಾರೆ. ನಾವಿಬ್ಬರು ಮತ್ತೆ ಮದುವೆ ಆಗ್ತೇವೆ ಎಂದಿದ್ದ ರೀನಾ, ಇನ್ನೊಂದು ವಿಡಿಯೋದಲ್ಲಿ ಹಾರ ಬದಲಿಸಿಕೊಳ್ಳುವುದನ್ನು ತೋರಿಸಿದ್ದಾರೆ. ಇನ್ನೊಂದು ವಿಡಿಯೋದಲ್ಲಿ ರೀನಾ ಹಣೆಗೆ ಪತಿ ಸಿಂಧೂರ ಇಡ್ತಿದ್ದಾರೆ.
ಮಾಹಿತಿಯ ಪ್ರಕಾರ, ವೃದ್ಧ ರಾಮ್ಸುಗ್ಗರ್, ಔರೈಯಾ ಜಿಲ್ಲೆಯ ಅರಿಯಾರಿ ಗ್ರಾಮದ ನಿವಾಸಿ. ರಾಮ್ಸುಗ್ಗರ್ ಅವರ ಹೆಸರು ರಾಮ್ಸುಗ್ಗರ್. ಅವರಿಗೆ ರಾಧಾ ಎಂಬ ಮಗಳಿದ್ದಾರೆ. ಅವರು ಸಾಮಾಜಿಕ ಮಾಧ್ಯಮಕ್ಕಾಗಿ ವೀಡಿಯೊಗಳನ್ನು ಮಾಡುತ್ತಾರೆ. ಈ ಸಮಯದಲ್ಲಿ, ರಾಣಿ ರಾಮ್ಸುಗ್ಗರ್ ಅವರ ಮನೆಗೆ ಭೇಟಿ ನೀಡಲು ಪ್ರಾರಂಭಿಸಿದರು ಮತ್ತು ಇಬ್ಬರೂ ಪ್ರೀತಿಯಲ್ಲಿ ಸಿಲುಕಿದರು ಎಂದು ಹೇಳಲಾಗಿದೆ. ನಂತರ ಅವರು ಮದುವೆಯಾಗಲು ನಿರ್ಧರಿಸಿದರು. ರಾಧಿ, ವಿಡಿಯೋ ಹಂಚಿಕೊಂಡಿದ್ದಾರೆ. ಈಗ ರಾಧಾ ಮೇಲೆಯೂ ರಾಣಿ ಕಿಡಿಕಾಡಿದ್ದಾರೆ.