ಜಸ್ಟ್ 8 ಸೆಕೆಂಡ್‌ನಲ್ಲಿ ಅಜ್ಜ-ಅಜ್ಜಿಯ ಜೀವ ಉಳಿಸಿದ ಶ್ವಾನ, ಶ್ವಾನದ ಸಮಯಪ್ರಜ್ಞೆಗೆ ಬೆರಗಾದ ಜನ

Published : Nov 11, 2026, 07:26 PM IST
Loyal Pet Dog Alerts Elderly Woman in Wheelchair Seconds Before Disaster Saves Her Life

ಸಾರಾಂಶ

ವೀಲ್‌ಚೇರ್‌ನಲ್ಲಿದ್ದ ಅಜ್ಜಿ ಮತ್ತು ಅಜ್ಜನಿಗೆ ಅಪಾಯದ ಮುನ್ಸೂಚನೆ ನೀಡಿ ಶ್ವಾನವೊಂದು ಪ್ರಾಣ ಉಳಿಸಿದೆ. ಕಟ್ಟಡದ ಮೇಲ್ಛಾವಣಿ ಕುಸಿಯುವ ಕೆಲವೇ ಕ್ಷಣಗಳ ಮೊದಲು ನಾಯಿ ಎಚ್ಚರಿಸಿದ ಈ ವಿಡಿಯೋ ವೈರಲ್ ಆಗಿದೆ.

Viral Video: ನಂಬಿಕೆಗೆ ಇನ್ನೊಂದು ಹೆಸರೇ ಶ್ವಾನ. ತಾವು ನಂಬಿದ ಜನರನ್ನ ಅವು ಯಾವತ್ತೂ ಬಿಟ್ಟು ಕೊಡುವುದಿಲ್ಲ ಎಂಬ ಮಾತಿದೆ. ತಮ್ಮ ಜೀವ ಅದೆಷ್ಟೇ ಅಪಾಯದಲ್ಲಿದ್ದೂ ಕಾಪಾಡಿಯೇ ತೀರುತ್ತವೆ.ಇದಕ್ಕೆ ಅನೇಕ ಉದಾಹರಣೆಗಳು ನಮ್ಮ ಕಣ್ಮುಂದೆ ಇವೆ. ಅಂತೆಯೇ ಇದೀಗ ಮತ್ತೊಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಇಬ್ಬರು ವೃದ್ಧ ದಂಪತಿಯನ್ನ ರೋಚಕವಾಗಿ ಪಾರು ಮಾಡಿದೆ.

ವಿಡಿಯೋದಲ್ಲಿ ಏನಿದೆ?

ಅದೊಂದು ರಸ್ತೆ. ರಸ್ತೆ ಪಕ್ಕದಲ್ಲಿರುವ ಕಟ್ಟಡವೊಂದರಲ್ಲಿ ವೃದ್ಧ ದಂಪತಿ ಇರುತ್ತಾರೆ. ಅಜ್ಜಿ ವೀಲ್‌ ಚೇರ್‍‌ನಲ್ಲಿ ಕೂತಿರುತ್ತಾರೆ. ಅಜ್ಜ ಆಕೆಯನ್ನ ಕೇರ್ ಮಾಡುತ್ತ ಕೂತಿರುತ್ತಾರೆ. ಅವರ ಬಳಿ ಇದ್ದಕ್ಕಿದ್ದಂತೆ ಒಂದು ನಾಯಿ ಓಡಿ ಬಂದಿದೆ.ಕೂಗುತ್ತ ಬಂದ ನಾಯಿ ಅವರ ಬಳಿ ಜೋರಾಗಿ ಕೂಗಿ ಏನೋ ಅನಾಹುತ ಕಾದಿದೆ ಎಂಬ ಮುನ್ಸೂಚನೆಯನ್ನ ನೀಡಿದೆ. ನಾಯಿ ತಮ್ಮ ಬಳಿ ಬರುತ್ತಿದ್ದಂತೆಯೇ ವೃದ್ಧ ದಂಪತಿ ಒಮ್ಮೆ ಗಾಬರಿ ಆಗಿದ್ದಾರೆ.

ತಮ್ಮ ಮೇಲೆ ದಾಳಿ ಮಾಡದೇ ಏಕಾಏಕಿ ಕೂಗುತ್ತಿರೋದನ್ನು ನೋಡಿ ವೃದ್ಧ ದಂಪತಿ ನಮಗೆ ಏನೋ ಅಪಾಯದ ಸೂಚನೆ ನೀಡುತ್ತಿರಬಹುದು ಅಂದುಕೊಳ್ಳುತ್ತಾರೆ. ಆಗ ಅಜ್ಜ, ವೀಲ್‌ಚೇರ್‍‌ನಲ್ಲಿದ್ದ ಅಜ್ಜಿಯನ್ನ ಕಟ್ಟಡದ ಒಳಗೆ ಕರೆದುಕೊಂಡು ಹೋಗುತ್ತಾರೆ. ಅವರ ಹಿಂದೆಯೇ ನಾಯಿ ಕೂಡ ಒಳಗೆ ಪ್ರವೇಶ ಮಾಡಿದೆ. ಮೂವರು ಬಿಲ್ಡಿಂಗ್‌ನ ಒಳಗೆ ಹೋಗುತ್ತಿದ್ದಂತೆಯೇ ಕಟ್ಟಡದ ಮೇಲ್ಛಾವಣಿ ಕುಸಿದು ಬದ್ದಿದೆ. ಏಕಾಏಕಿ ಕುಸಿದು ಬೀಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಅದೃಷ್ಟವಶಾತ್ ಆ ನಾಯಿ ಅಲ್ಲಿಗೆ ಬಾರದಿದ್ದರೆ.. ವೃದ್ಧ ದಂಪತಿಗಳಿಬ್ಬರೂ ಛಾವಣಿ ಕುಸಿತ ದುರಂತದಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದರು. ಯಾಕೆಂದರೆ ಛಾವಣಿ ಕುಸಿತದ ರಭಸ ಅಷ್ಟು ಜೋರಾಗಿದೆ. ಇನ್ನು ಈ ದೃಶ್ಯ ಮೈಜುಮ್ ಎನಿಸುವಂತಿದ್ದು, ನಾಯಿಯ ಸಮಯಪ್ರಜ್ಞೆಗೆ ಎಲ್ಲರೂ ಶಾಕ್ ಆಗಿದ್ದಾರೆ.

ಎಲ್ಲಿಯ ವಿಡಿಯೋ?

ಆದರೆ ವಿಡಿಯೋ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಈ ಘಟನೆ ನಡೆದಿರೋದು ಎಲ್ಲಿ? ಯಾವಾಗ ನಡೆದಿದೆ ಅನ್ನೋದ್ರ ಬಗ್ಗೆ ಯಾವುದೇ ಕ್ಲಾರಿಟಿ ಇಲ್ಲ. ಕೆಲವರು ಇದು ಹಳೆಯ ವಿಡಿಯೋ ಎನ್ನುತ್ತಿದ್ದಾರೆ. ಇನ್ನು ವೃದ್ಧ ದಂಪತಿಯನ್ನ ಕಾಪಾಡಿದ್ದು ಬೀದಿ ನಾಯಿಯಾ? ಅಥವಾ ಅವರೇ ಸಾಕಿರೋದಾ ಎಂಬ ಪ್ರಶ್ನೆಯೂ ಇದೆ.

ಆದರೆ, ಹಾರ್ಟ್‌ ಟಚಿಂಗ್ ವಿಡಿಯೋ ಇದಾಗಿದೆ. ದೃಶ್ಯದಲ್ಲಿ ಕಾಣುವ ನಾಯಿ ಎಲ್ಲರ ಗಮನ ಸೆಳೆಯುತ್ತಿದೆ. ಪ್ರಾಣಿಗಳಿಗೆ ಭವಿಷ್ಯದ ಸೂಚನೆಗಳು ಸಿಗುತ್ತವೆ. ಮುಂದೆ ಆಗಬಹುದಾದ ಅನಾಹುತಗಳೆಲ್ಲ ತಿಳಿಯುತ್ತವೆ ಎನ್ನಲಾಗುತ್ತದೆ. ಅಂತೆಯೇ ಈ ನಾಯಿ ಇಬ್ಬರು ವೃದ್ಧ ದಂಪತಿಯನ್ನ ಕೆಲವು ಸೆಕೆಂಡ್‌ಗಳ ಅಂತರದಲ್ಲಿ ಜೀವ ಉಳಿಸಿರೋದನ್ನ ನೋಡಿದ್ರೆ, ನಿಜಕ್ಕೂ ಗ್ರೇಟ್ ಅಲ್ಬಾ?

PREV
Read more Articles on
click me!

Recommended Stories

ಬೆಕ್ಕನ್ನು ಜೇಮ್ಸ್ ಬಾಂಡ್ ಮಾಡಲು ಹೊರಟ CIA! 20 ಮಿಲಿಯನ್ ಡಾಲರ್ ಖರ್ಚು! ಕೊನೆಗೆ ಮಿಷನ್ ಫೈಲ್!
ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾರೋ, ಅಡುಗೆ ಮನೆ ಮಾಡಿಕೊಂಡಿದ್ದಾರೋ? 3AC ಕೋಚ್‌ನಲ್ಲಿ ಕುಟುಂಬದ ವಿಚಿತ್ರ ವರ್ತನೆ!