ಮೆಟ್ರೋ ನಿಲ್ದಾಣದ ಬಾಕ್ಸ್‌ನಲ್ಲಿ ಬೆಚ್ಚಗೆ ನಿದ್ದೆಗೆ ಜಾರಿದ ಬೆಕ್ಕು, ಹೊಸ ಟಿಕೆಟ್ ಕಲೆಕ್ಟರ್ ಎಂದ ನೆಟ್ಟಿಗರು

Published : Sep 26, 2026, 12:54 PM IST
Metro Station Box Becomes Cozy Bed for Cat

ಸಾರಾಂಶ

ಮೆಟ್ರೋ ನಿಲ್ದಾಣದೊಳಗೆ ಟಿಕೆಟ್ ಸೇರಿದಂತೆ ಚೀಟಿಗಳನ್ನು ಹಾಕಲು ಇಟ್ಟಿದ್ದ ಬಾಕ್ಸ್‌ನೊಳಗೆ ಬೆಕ್ಕೊಂದು ಗಡದ್ ನಿದ್ದೆಗೆ ಜಾರಿದ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಚೀಟಿ ಎಸೆಯುವ ಬದಲು ಬೆಕ್ಕನ್ನೇ ಎಸೆದ್ರಾ ಎಂದು ಹಲವರು ಪ್ರಶ್ನಿಸಿದ್ದಾರೆ.

ಮುಂಬೈ (ಸೆ.26) ಮೆಟ್ರೋ ರೈಲಿನಲ್ಲಿ ಪ್ರತಿದಿನ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಸಂಚಾರ ದಟ್ಟಣೆ ನಡುವೆ ಹಲವು ಸ್ವಾರಸ್ಯಕರ ಘಟನೆಗಳು ನಡೆದಿದೆ. ಇದೀಗ ಮೆಟ್ರೋ ನಿಲ್ದಾಣದಲ್ಲಿ ಇಟ್ಟಿರುವ ಬಾಕ್ಸ್ ಒಂದರಲ್ಲಿ ಬೆಕ್ಕೊಂದು ಗಡದ್ ನಿದ್ದೆ ಜಾರಿದ ವಿಡಿಯೋ ಭಾರಿ ಚರ್ಚೆಗೆ ಕಾರಣವಾಗಿದೆ. ಟಿಕೆಟ್ ಸೇರಿದಂತೆ ಇತರ ಚೀಟಿಗಳನ್ನು ಹರಿದು ಎಲ್ಲೆಂದರಲ್ಲಿ ಹಾಕುವ ಬದಲು ಬಾಕ್ಸ್‌ನಲ್ಲಿ ಹಾಕಲು ಸೂಚಿಸಲಾಗಿದೆ. ಹಲವು ಈ ಬಾಕ್ಸ್‌ನಲ್ಲಿ ಹರಿದ ಚೀಟಿಗಳನ್ನು ಹಾಕಿದ್ದಾರೆ. ಈ ಬಾಕ್ಸ್ ಒಳಗೆ ಬೆಕ್ಕು ಹತ್ತಿ ನಿದ್ದೆಗೆ ಜಾರಿದೆ. ಪ್ರಯಾಣಿಕರೊಬ್ಬರು ಈ ವಿಡಿಯೋ ಪೋಸ್ಟ್ ಮಾಡಿದ್ದು, ಭಾರಿ ವೈರಲ್ ಆಗಿದೆ.

ಮೆಟ್ರೋ ನಿಲ್ದಾಣದ ಬಾಕ್ಸ್ ಒಳಗೆ ಬೆಕ್ಕು

ಈ ಘಟನೆ ಮುಂಬೈ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ. ಮೆಟ್ರೋ ಪ್ರಯಾಣಿಕ ಶ್ರೇಯಾ ಶಾಜಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಮುಂಬೈ ಮೆಟ್ರೋ ನಿಲ್ದಾಣ ಒಂದರಲ್ಲಿ ಈ ಪಾರದರ್ಶಕ ಬಾಕ್ಸ್ ಇಡಲಾಗಿದೆ. ಬಳಸಿದ ಟಿಕೆಟ್ ಚೀಟಿಗಳು ಸೇರಿದಂತೆ ಇತರ ಚೀಟಿಗಳನ್ನು ಎಲ್ಲೆಂದರಲ್ಲಿ ಬಿಸಾಡದಂತೆ ತಡೆಯಲು ಈ ಬಾಕ್ಸ್ ಇಡಲಾಗಿದೆ. ಪ್ರಯಾಣಿಕರು ಬಳಸಿದ ಚೀಟಿದಳನ್ನು ಈ ಬಾಕ್ಸ್‌ನಲ್ಲಿ ಹಾಕುತ್ತಾರೆ.

ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ

ಬಾಕ್ಸ್ ಮೇಲ್ಬಾಗದಲ್ಲಿ ವೃತ್ತಾಕಾರದ ರಂಧ್ರ ಮಾಡಲಾಗಿದೆ. ಈ ರಂಧ್ರದ ಮೂಲಕ ಚೀಟಿಗಳನ್ನು ಹಾಕಲಾಗುತ್ತದೆ. ಟ್ರಾನ್ಸ್‌ಪರೆಂಟ್ ಬಾಕ್ಸ್‌ನಲ್ಲಿ ಹೊರಗಿನಿಂದ ನೋಡಿದರೆ ಹರಿದ ಚೀಟಿಗಳು ಕಾಣಿಸುತ್ತದೆ. ಹೀಗೆ ಚೀಟಿ ಹಾಕಲು ಹೋದಾಗ ಪ್ರಯಾಣಿಕರಿಗೆ ಬಾಕ್ಸ್ ಒಳಗೆ ಬೆಕ್ಕು ಮಲಗಿರುವುದು ಗಮನಿಸಿದ್ದಾರೆ. ಹೀಗಾಗಿ ಪ್ರಯಾಣಿಕರು ಈ ಬೆಕ್ಕಿನ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಪೋಸ್ಟ್ ಮಾಡಿದ ಬೆನ್ನಲ್ಲೇ ಚರ್ಚೆಗಳು ಶುರುವಾಗಿದೆ. ಹಲವು ಅದ್ಭುತ ಕಮೆಂಟ್ಸ್ ಮಾಡಿದ್ದಾರೆ.

ಮೆಟ್ರೋ ಟಿಕೆಟ್ ಕಲೆಕ್ಟರ್

ಕೆಲ ಪ್ರಯಾಣಿಕರು ಬೆಕ್ಕು ಮಲಗಿರುವುದನ್ನು ಗಮನಿಸಿದ್ದಾರೆ. ಇದೀಗ ಮೆಟ್ರೋ ಪ್ರಯಾಣಿಕರು ಸೇರಿದಂತೆ ಹಲವರು ಈ ವಿಡಿಯೋಗೆ ಕಮೆಂಟ್ ಮಾಡಿದ್ದಾರೆ. ಹರಿದ ಚೀಟಿ ಎಸೆಯುವ ಬದಲು ಬೆಕ್ಕನ್ನೇ ಬಾಕ್ಸ್‌ಗೆ ಎಸೆದು ಬಿಟ್ಟರಾ ಎಂದು ಕೆಲವರು ಪ್ರಶ್ನಿಸಿದ್ದಾರೆ. ಇದೇ ವೇಳೆ ಮತ್ತೆ ಕೆಲವರು ಮುಂಬೈ ಮೆಟ್ರೋ ಟಿಕೆಟ್ ಕಲೆಕ್ಟರ್ ಉದ್ಯೋಗಿ ನೇಮಕ ಮಾಡಿದೆ. ರಾತ್ರಿಯಿಡಿ ಡ್ಯೂಟಿ ಮಾಡಿದ ಕಾರಣ ಟಿಕೆಟ್ ಕಲೆಕ್ಟ್ ಮಾಡುತ್ತಾ ಅಲ್ಲೆ ಮಲಗಿದ್ದಾರೆ. ದಯವಿಟ್ಟು ಸಹಕರಿಸಿ ಎಂದು ಕಮೆಂಟ್ಸ್ ಮಾಡಿದ್ದಾರೆ.

ಮುಂಬೈ ಮೆಟ್ರೋದಲ್ಲಿ ಬೆಕ್ಕುಗಳ ಸಂಖ್ಯೆ ಹೆಚ್ಚಿದೆ. ಇತ್ತೀಚೆಗೆ ಮುಂಬೈ ಮೆಟ್ರೋ ನಿಲ್ದಾಣ ಒಂದರ ಮುಖ್ಯದ್ವಾರದ ಬಳಿಕ ಎರಡು ಬೆಕ್ಕುಗಳು ಮಲಗಿರುವ ವಿಡಿಯೋ ಒಂದು ಬಾರಿ ವೈರಲ್ ಆಗಿತ್ತು. ವೆಲ್ಕಂ ಆಫೀಸರ್ ಎಂದು ಹಲವರು ಕಮೆಂಟ್ಸ್ ಮಾಡಿದ್ದರು. ಇದೀಗ ಬಾಕ್ಸ್ ಒಳಗಿನ ಬೆಕ್ಕು ವೈರಲ್ ಆಗಿದೆ.

PREV
Read more Articles on
click me!

Recommended Stories

Jason Sanjay: '5 ನಿಮಿಷಗಳ ಬಳಿಕ ಜನರು ಸಿನಿಮಾ ಆಗಿ ನೋಡುತ್ತಾರೆ'- ಸಿಎಂ ವಿಜಯ್ ಮಗ ಜೇಸನ್ ಸಂಜಯ್ ಹೇಳಿಕೆ ವೈರಲ್!
ಸ್ನೇಹಿತರಿಗೆ ಮುಖ ತೋರಿಸಲು ಹೆದರುತ್ತಿದ್ದ ಸ್ವಿಗ್ಗಿ ಡೆಲಿವರಿ ಬಾಯ್ ಇಂದು ಕೋಟಿ ಮನೆ ಒಡೆಯ! ಹೇಗೆ ಗೊತ್ತಾ?