ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಹಾಕಿದ್ರಂತೆ; Rapido ಬುಕ್‌ ಮಾಡಿದ್ದು ಆ ವ್ಯಕ್ತಿ! ದಂಡ ತೆತ್ತಿದ್ದು ಮಾತ್ರ ಡ್ರೈವರ್‌

Published : Jul 09, 2026, 02:43 PM IST
bengaluru Viral news

ಸಾರಾಂಶ

Bengaluru News ಬೆಂಗಳೂರಿನ ರಾಪಿಡೋ ಆಟೋ ಚಾಲಕನೊಬ್ಬ ಕಸ ತುಂಬಿದ ಚೀಲವನ್ನು ಪಾರ್ಸೆಲ್ ಎಂದು ತಪ್ಪಾಗಿ ಭಾವಿಸಿ ಭಾರಿ ಬೆಲೆ ತೆರಬೇಕಾಯಿತು. ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆದಿದ್ದಕ್ಕಾಗಿ ನಗರಸಭೆ ಚಾಲಕನಿಗೆ ಭಾರೀ ಮೊತ್ತದ ದಂಡ ವಿಧಿಸಿತು. 

ಬೆಂಗಳೂರು: ರಾಪಿಡೋ ಆ್ಯಪ್ ಮೂಲಕ ಪಾರ್ಸೆಲ್ ಸಾಗಿಸಲು ಒಪ್ಪಿಕೊಂಡ ಆಟೋ ಚಾಲಕನೊಬ್ಬ, ಗ್ರಾಹಕನ ಮೋಸದಿಂದ ₹10,000 ದಂಡ ಕಟ್ಟಬೇಕಾದ ಘಟನೆ ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ನಡೆದಿದೆ. ಕಸದ ಚೀಲವನ್ನು ಸಾಮಾನ್ಯ ಪಾರ್ಸೆಲ್ ಎಂದು ಭಾವಿಸಿ ಸಾಗಿಸಿದ ಚಾಲಕ, ಕೊನೆಗೆ ಪಾಲಿಕೆಯ ಕ್ರಮಕ್ಕೆ ಗುರಿಯಾಗಿದ್ದಾನೆ.

ವರದಿಗಳ ಪ್ರಕಾರ, ಗ್ರಾಹಕ ರಾಪಿಡೋ ಆ್ಯಪ್‌ನಲ್ಲಿ ಆಟೋ ಬುಕ್ ಮಾಡಿ ಚಾಲಕನಿಗೆ ಒಂದು ಬ್ಯಾಗ್ ನೀಡಿ, ನಿಗದಿತ ಸ್ಥಳದಲ್ಲಿ ತಲುಪಿಸಲು ಸೂಚಿಸಿದ್ದ. ಬ್ಯಾಗ್‌ನಲ್ಲಿ ಕಸವಿದೆ ಎಂಬುದು ಚಾಲಕನಿಗೆ ತಿಳಿದಿರಲಿಲ್ಲ. ಗ್ರಾಹಕ ಹೇಳಿದ ಸ್ಥಳಕ್ಕೆ ತೆರಳಿ ಬ್ಯಾಗ್ ಇಳಿಸಲು ಮುಂದಾದ ವೇಳೆ, ಸ್ಥಳದಲ್ಲೇ ನಿಗಾ ವಹಿಸಿದ್ದ ಬಿಬಿಎಂಪಿ ಅಧಿಕಾರಿಗಳು ಚಾಲಕನನ್ನು ತಡೆದಿದ್ದಾರೆ.

ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಕಸ ಸುರಿದ ಆರೋಪದಡಿ ಅಧಿಕಾರಿಗಳು ಚಾಲಕನಿಗೆ ₹10,000 ದಂಡ ವಿಧಿಸಿದ್ದಾರೆ. ಕಸ ತನ್ನದಲ್ಲ, ಗ್ರಾಹಕ ಪಾರ್ಸೆಲ್ ಎಂದು ನೀಡಿ ಕಳುಹಿಸಿದ್ದಾನೆ ಎಂದು ಚಾಲಕ ಮನವರಿಕೆ ಮಾಡಲು ಪ್ರಯತ್ನಿಸಿದರೂ, ಸ್ಥಳದಲ್ಲೇ ದಂಡ ವಿಧಿಸಲಾಗಿದೆ.

ದಂಡ ವಿಧಿಸಿದ ಬಳಿಕ ಚಾಲಕ ಬ್ಯಾಗ್ ನೀಡಿದ ಗ್ರಾಹಕನಿಗೆ ಹಲವು ಬಾರಿ ಕರೆ ಮಾಡಿದ್ದಾನೆ. ಆದರೆ ಗ್ರಾಹಕ ಯಾವುದೇ ಕರೆಯನ್ನು ಸ್ವೀಕರಿಸದ ಕಾರಣ, ತನ್ನ ಮಾತು ಸಾಬೀತುಪಡಿಸಲು ಸಾಧ್ಯವಾಗದೆ ಕೊನೆಗೆ ದಂಡ ಪಾವತಿಸಬೇಕಾಯಿತು.

ಈ ಘಟನೆ ಆ್ಯಪ್ ಆಧಾರಿತ ಪಾರ್ಸೆಲ್ ಸೇವೆ ಬಳಸುವ ಚಾಲಕರಿಗೆ ಎಚ್ಚರಿಕೆಯ ಗಂಟೆಯಾಗಿದೆ. ಗ್ರಾಹಕರು ನೀಡುವ ಬ್ಯಾಗ್ ಅಥವಾ ಪಾರ್ಸೆಲ್‌ನಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳದೆ ಸಾಗಿಸಿದರೆ, ಕಾನೂನು ತೊಂದರೆ ಎದುರಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಇದರ ನಡುವೆ, ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ಕಸ ಸುರಿಯುವವರ ವಿರುದ್ಧ ಬಿಬಿಎಂಪಿ ಕಠಿಣ ಕ್ರಮ ಮುಂದುವರಿಸಿದ್ದು, ನಿಗದಿತ ಸ್ಥಳಗಳಲ್ಲಿ ಮಾತ್ರ ಕಸ ವಿಲೇವಾರಿ ಮಾಡುವಂತೆ ನಾಗರಿಕರಿಗೆ ಸೂಚನೆ ನೀಡಿದೆ. ನಿಯಮ ಉಲ್ಲಂಘಿಸಿದರೆ ದಂಡ ಸೇರಿದಂತೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

PREV
Read more Articles on
click me!

Recommended Stories

Bengaluru Idli ದೇಶದ ಗಮನ ಸೆಳೆದ ಬೆಂಗಳೂರ 5 ರೂ. ಇಡ್ಲಿ: 60 ವರ್ಷದಿಂದ ಅದೇ ಟೇಸ್ಟ್​- ಅಜ್ಜನ ಕೈರುಚಿಗೆ ಜನರು ಫಿದಾ
Viral Video: 30 ನಿಮಿಷ ಸಿಂಹದ ಕೈಗೆ ಸಿಕ್ಕರೂ, ಬದುಕಿ ಬಂದ ರೈತನ ಮೈನವಿರೇಳುವ ಸ್ಟೋರಿ- ಬೆಚ್ಚಿಬೀಳೋ ವಿಡಿಯೋ ವೈರಲ್​