Viral Video: 30 ನಿಮಿಷ ಸಿಂಹದ ಕೈಗೆ ಸಿಕ್ಕರೂ, ಬದುಕಿ ಬಂದ ರೈತನ ಮೈನವಿರೇಳುವ ಸ್ಟೋರಿ- ಬೆಚ್ಚಿಬೀಳೋ ವಿಡಿಯೋ ವೈರಲ್​

Published : Jul 09, 2026, 01:16 PM IST
Lion and Farmer

ಸಾರಾಂಶ

ಗುಜರಾತ್‌ನ ಭಾವನಗರದಲ್ಲಿ, ರೈತನೊಬ್ಬನ ಮೇಲೆ ಸಿಂಹವೊಂದು ದಾಳಿ ಮಾಡಿ ಸುಮಾರು 30 ನಿಮಿಷಗಳ ಕಾಲ ಆತನ ಕಾಲನ್ನು ದವಡೆಯಲ್ಲಿ ಹಿಡಿದುಕೊಂಡಿತ್ತು. ಆದರೆ, ಆ ರೈತ ಅಸಾಧಾರಣ ಧೈರ್ಯ ಪ್ರದರ್ಶಿಸಿ, ಸಿಂಹವನ್ನು ಶಾಂತಗೊಳಿಸಲು ಪ್ರಯತ್ನಿಸಿ, ಅಂತಿಮವಾಗಿ ಅದರಿಂದ ಜೀವಸಹಿತ ಪಾರಾಗಿ ಬಂದಿದ್ದಾನೆ.

ಸಿಂಹ ಎಂದರೆ ಸಾಕು, ಕುಳಿತಲ್ಲಿಯೇ ಬೆಚ್ಚಿಬೀಳುವವರೇ ಎಲ್ಲರೂ. ಟಿವಿಯಲ್ಲೋ, ಕಂಪ್ಯೂಟರ್​ನಲ್ಲೋ ಇನ್ನೆಲ್ಲೋ ಒಮ್ಮೆ ಸಿಂಹ ಘರ್ಜಿಸುತ್ತಾ ಓಡಿ ಬಂದರೆ ಜೀವವೇ ಬಾಯಲ್ಲಿ ಬರುವ ಅನುಭವವಾಗುತ್ತದೆ. ಅಂಥದ್ದರಲ್ಲಿ ಪ್ರತ್ಯಕ್ಷ ಸಿಂಹವೇ ನಿಮ್ಮ ಎದುರಾದರೆ? ಕನಸಿನಲ್ಲಿಯೂ ಬೆಚ್ಚಿಬೀಳುತ್ತೇವೆ ಅಲ್ವಾ? ಆದರೆ ಗುಜರಾತ್​ನ ರೈತನೊಬ್ಬ ಒಂದಲ್ಲ, ಎರಡಲ್ಲ ಬರೋಬ್ಬರಿ ಅರ್ಧ ಗಂಟೆ ಸಿಂಹದ ಕೈಯಲ್ಲಿ ಸಿಕ್ಕಿಹಾಕಿಕೊಂಡು ಬಚಾವಾಗಿ ಬಂದಿದ್ದಾರೆ ಎಂದರೆ ಬಹುಶಃ ಯಾರೂ ನಂಬಲು ಸಾಧ್ಯವೇ ಇಲ್ಲ ಎನ್ನಬಹುದೇನೋ. ಅಷ್ಟಕ್ಕೂ ವನ್ಯಮೃಗಗಳು ಮನುಷ್ಯರಷ್ಟು ಕ್ರೂರಿಯಲ್ಲ, ಹೊಟ್ಟೆ ತುಂಬಿದಾಗ ಯಾರು ಬಂದರೂ ಸಾಯಿಸುವುದಿಲ್ಲ ಎನ್ನುವುದು ನಿಜವಾದರೂ, ಇಲ್ಲಿಯ ಪರಿಸ್ಥಿತಿಯೂ ಹಾಗಿರಲಿಲ್ಲ. ಅಕ್ಷರಶಃ ಈ ರೈತನನ್ನು ಹಿಡಿದುಕೊಂಡಿತ್ತು ಸಿಂಹ. ಕೊನೆಗೂ ರೈತ ಪಾರಾಗಿ ಬಂದಿದ್ದಾನೆ.

ಇದರ ಶಾಕಿಂಗ್​ ವಿಡಿಯೋ ಸೋಷಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗುತ್ತಿದೆ. ಗುಜರಾತ್‌ನ ಭಾವನಗರದಲ್ಲಿ ನಡೆದಿರುವ ಘಗಟನೆ ಇದಾಗಿದೆ. ರೈತನನ್ನು ಸಿಂಹ ಸುಮಾರು 30 ನಿಮಿಷಗಳ ಕಾಲ ಸೆರೆಹಿಡಿದಿದ್ದರು, ಅಂತಿಮವಾಗಿ ರೈತ ಜೀವಂತವಾಗಿ ಪಾರಾಗಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಭಾವನಗರ ಜಿಲ್ಲೆಯ ಪಾಲಿಟಾನಾ ತಾಲೂಕಿನ ಗಾರ್ಜಿಯಾ ಗ್ರಾಮದಲ್ಲಿ ನಡೆದ ಈ ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ.

ಆಗಿದ್ದೇನು?

ಕಲುಭಾಯಿ ಪರ್ಮಾರ್ ಎಂಬ ರೈತ ತನ್ನ ಹಸುವಿಗೆ ಆಹಾರ ನೀಡಲು ಹೋಗಿದ್ದ. ಅವನು ಆಹಾರ ನೀಡುತ್ತಿದ್ದಾಗ, ಸಿಂಹವೊಂದು ಇದ್ದಕ್ಕಿದ್ದಂತೆ ಅವನ ಮೇಲೆ ದಾಳಿ ಮಾಡಿ, ಅವನ ಕಾಲನ್ನು ದವಡೆಯಲ್ಲಿ ಹಿಡಿದುಕೊಂಡಿತ್ತು. ಸಿಂಹ ದಾಳಿ ಮಾಡುವ ಮೊದಲೇ ಯಾರಿಗಾದರೂ ಹಾರ್ಟ್​ಫೇಲ್ ಆ​ಗುತ್ತಿತ್ತೇನೋ. ಆದರೆ ಆ ರೈತನ ಗುಂಡಿಗೆ ಮಾತ್ರ ಗಟ್ಟಿಯಾಗಿತ್ತು. ಪ್ರಾಣ ರಕ್ಷಣೆಗೆ ಹೋರಾಡುತ್ತಲೇ ಇಲ್ಲ. ದಾಳಿಯ ನಂತರ, ಸ್ಥಳೀಯರು ಸ್ಥಳಕ್ಕೆ ಧಾವಿಸಿ ಕೂಗುತ್ತಾ ಸಿಂಹವನ್ನು ಹೆದರಿಸಲು ಪ್ರಯತ್ನಿಸಿದರು, ಆದರೆ ಸಿಂಹವು ಮಾತ್ರ ಜಪ್ಪಯ್ಯ ಎಂದರೂ ರೈತನ ಕಾಲನ್ನು ಬಿಡಲೇ ಇಲ್ಲ.

ರೈತ ಹೇಳಿದ್ದೇನು?

ಕಲುಭಾಯಿ ಪರ್ಮಾರ್ ಸ್ವತಃ ಘಟನೆಯ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. "ನಾನು ಬೆಳಿಗ್ಗೆ ನನ್ನ ಹಸುವಿಗೆ ಆಹಾರ ನೀಡಲು ಹೋಗಿದ್ದೆ. ಸಿಂಹ ಹತ್ತಿರದಲ್ಲೇ ಕುಳಿತಿತ್ತು. ನಾನು ಅದಕ್ಕೆ ಆಹಾರ ನೀಡಲು ಪ್ರಾರಂಭಿಸಿದಾಗ, ಅದು ಇದ್ದಕ್ಕಿದ್ದಂತೆ ನನ್ನ ಮೇಲೆ ದಾಳಿ ಮಾಡಿತು. ಅದು ನನ್ನನ್ನು ನೆಲಕ್ಕೆ ತಳ್ಳಿತು, ಮತ್ತು ನನ್ನ ಕೈ ಅದರ ದವಡೆಯಲ್ಲಿ ಸಿಲುಕಿಕೊಂಡಿತು. ಕಾಲನ್ನು ಅದು ಹಿಡಿತುಕೊಂಡಿತ್ತು. ಅದು ಸುಮಾರು 30 ನಿಮಿಷಗಳ ಕಾಲ ನನ್ನ ಕೈಯನ್ನು ಬಿಡಲಿಲ್ಲ. ನಂತರ, ನನಗೆ ಅವಕಾಶ ಸಿಕ್ಕ ತಕ್ಷಣ, ನಾನು ಹೇಗೋ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದೆ ಎಂದಿದ್ದಾರೆ.

ರೈತ ಅತ್ಯಂತ ಕಠಿಣ ಸಂದರ್ಭಗಳಲ್ಲಿಯೂ ಅಸಾಧಾರಣ ಧೈರ್ಯವನ್ನು ಪ್ರದರ್ಶಿಸಿದ್ದರಿಂದ ಈ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ವಿಷಯವಾಗಿದೆ. ಗಾಬರಿಗೊಳ್ಳುವ ಬದಲು, ಅವನು ತನ್ನ ಹಿಡಿತವನ್ನು ಕಾಯ್ದುಕೊಂಡು ಸರಿಯಾದ ಅವಕಾಶಕ್ಕಾಗಿ ಕಾಯುತ್ತಿದ್ದನು. ರೈತ ಶಾಂತವಾಗಿ ಸಿಂಹದ ತಲೆಯನ್ನು ಸವರುತ್ತಾ ಅದನ್ನು ಶಾಂತಗೊಳಿಸುವುದನ್ನು ವೀಡಿಯೊ ತೋರಿಸುತ್ತದೆ. ಕೊನೆಗೆ, ಸಿಂಹದ ಹಿಡಿತ ಸಡಿಲವಾದ ತಕ್ಷಣ, ರೈತ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದನು. ಈ ಮನಸ್ಸಿನ ಉಪಸ್ಥಿತಿ ಮತ್ತು ಧೈರ್ಯವು ಅವನ ಜೀವವನ್ನು ಉಳಿಸುವಲ್ಲಿ ಪ್ರಮುಖ ಅಂಶವಾಗಿತ್ತು.

ದಾಳಿ ನಡೆದ ಪ್ರದೇಶವು ವನ್ಯಜೀವಿ ಅಭಯಾರಣ್ಯದ ಬಳಿ ಇದೆ. ಸಿಂಹವು ಯಾವುದೋ ಕಾರಣಕ್ಕಾಗಿ ಆಕ್ರಮಣಕಾರಿಯಾಗಿತ್ತು ಮತ್ತು ಜನರು ಅದನ್ನು ಪ್ರಚೋದಿಸಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಅದಕ್ಕಾಗಿಯೇ ಸಿಂಹ ರೈತನ ಮೇಲೆ ದಾಳಿ ಮಾಡಿದೆ. ಅಧಿಕಾರಿಗಳ ಪ್ರಕಾರ, ರೈತನ ಸ್ಥಿತಿ ಈಗ ಸ್ಥಿರವಾಗಿದೆ ಮತ್ತು ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.

 

PREV
Read more Articles on
click me!

Recommended Stories

ಮಹಾರಾಷ್ಟ್ರದಲ್ಲಿ ಪ್ರವಾಹದ ಅಬ್ಬರ...ನದಿಯಲ್ಲಿ ತೇಲಿದ 3,000 LPG ಸಿಲಿಂಡರ್‌ಗಳು
ಮಿಯಾಮಿ ವ್ಯಾಲಿ ಆಸ್ಪತ್ರೆಯ 19 ದಾದಿಯರು ಏಕಕಾಲಕ್ಕೆ ಗರ್ಭಿಣಿ! ಹಳೆ ದಾಖಲೆ ಪುಡಿ ಪುಡಿ!