ರಾತ್ರಿ 10 ಗಂಟೆಗೆ Flipkart Delivery Boy ಮಾಡಿದ ಕೆಲಸಕ್ಕೆ ಬೆಂಗಳೂರು ತಾಯಿ ಭಾವುಕ:Post Viral

Published : Jul 20, 2026, 02:50 PM IST
Flipkart delivery boy wins heart

ಸಾರಾಂಶ

Flipkart delivery boy wins heart: ಬೆಂಗಳೂರಿನಂತಹ ಬ್ಯುಸಿ ನಗರದಲ್ಲಿ, ಡೆಲಿವರಿ ಬಾಯ್ ಒಬ್ಬರು ಮಾಡಿದಂತಹ ಸರಳವಾದ ಕೆಲಸ ಇದೀಗ ತಾಯಿಯೊಬ್ಬರ ಮನ ಗೆದ್ದಿದೆ. ಅಷ್ಟಕ್ಕೂ ರಾತ್ರಿ 10 ಗಂಟೆಗೆ ಡೆಲಿವರಿಗೆಂದು ಬಂದ ಫ್ಲಿಪ್‌ಕಾರ್ಟ್ ಮಿನಿಟ್ ಡೆಲಿವರಿ ಬಾಯ್ ಮಾಡಿದ್ದೇನು? ಮಹಿಳೆಯ ಪೋಸ್ಟ್ ವೈರಲ್ ಆಗುತ್ತಿರೋದು ಯಾಕೆ?

ಫ್ಲಿಪ್‌ಕಾರ್ಟ್ ಡೆಲಿವರಿ ಬಾಯ್ ಮಾಡಿದ ಕೆಲಸಕ್ಕೆ ಬೆಂಗಳೂರು ತಾಯಿ ಭಾವುಕ:

ಬೆಂಗಳೂರಿನಂತಹ ಬ್ಯುಸಿ ನಗರದಲ್ಲಿ ಜನರಿಗೆ ತಮ್ಮ ಬಗ್ಗೆ ಯೋಚನೆ ಮಾಡೋದಕ್ಕೆ ಸಮಯ ಇರೋದಿಲ್ಲ. ಇನ್ನು ಇತರರ ಬಗ್ಗೆ ಯೋಚಿಸುತ್ತಾರೆಯೇ? ಖಂಡಿತಾ ಇಲ್ಲ. ಆದರೆ ಈ ಮಹಾನಗರದಲ್ಲೊಬ್ಬರು ಪುಟ್ಟ ಡೆಲಿವರಿ ಬಾಯ್ ಮಾಡಿರುವಂತಹ ಒಂದು ಸರಳ ಕೆಲಸ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಜನ ಡೆಲಿವರಿ ಬಾಯ್ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ. ಬೆಂಗಳೂರಿನ ಮಹಿಳೆಯೊಬ್ಬರು ಮಾಡಿರುವಂತಹ ಪೋಸ್ಟ್ ನಲ್ಲಿ ಅಂತದ್ದೇನಿದೆ ನೀವೇ ನೋಡಿ ಗೊತ್ತಾಗುತ್ತೆ.

ಫ್ಲಿಪ್ ಕಾರ್ಟ್ ಡೆಲಿವರಿ ಬಾಯ್ ಮಾಡಿದ್ದೇನು?

ರಾತ್ರಿ 10 ಗಂಟೆ ಸುಮಾರಿಗೆ ಮಗುವಿನ ಡೈಪರ್ ಸಂಪೂರ್ಣ ಮುಗಿದಿರುವುದು ಗೊತ್ತಾದಾಗ, ಬೆಂಗಳೂರಿನ ನಿವಾಸಿ ನಿವೇದಿತಾ ರೈ ಆತಂಕಗೊಂಡಿದ್ದರು. ತಕ್ಷಣವೇ ಅವರು ಫ್ಲಿಪ್‌ಕಾರ್ಟ್ ಮಿನಿಟ್ಸ್ ಮೂಲಕ ಡೈಪರ್ ಆರ್ಡರ್ ಮಾಡಿದರು. ಕೆಲವೇ ನಿಮಿಷಗಳಲ್ಲಿ ಡೆಲಿವರಿ ತಲುಪಿತು. ಆದರೆ ಮನೆಯ ಡೋರ್ ಬೆಲ್ ಶಬ್ದ ಕೇಳಿಸಲಿಲ್ಲ. ಬದಲಿಗೆ ಅವರ ಮೊಬೈಲ್‌ಗೆ ಕರೆ ಬಂದಿತ್ತು. "ಮೇಡಂ, ದಯವಿಟ್ಟು ಬಾಗಿಲು ತೆರೆಯಿರಿ," ಎಂದು ಡೆಲಿವರಿ ಎಕ್ಸಿಕ್ಯೂಟಿವ್ ವಿನಯದಿಂದ ಹೇಳಿದ್ದರು. ಹೊರಗೆ ಬಂದ ನಿವೇದಿತಾ, "ಯಾಕೆ ಬೆಲ್ ಮಾಡಿಲ್ಲ, ಕಾಲ್ ಮಾಡಿದ್ದು ಯಾಕೆ?" ಎಂದು ಕೇಳಿದಾಗ, ಅವರು ನೀಡಿದ ಉತ್ತರ ಆ ತಾಯಿಯನ್ನು ಭಾವುಕರನ್ನಾಗಿ ಮಾಡಿಸಿದೆ. ಅಷ್ಟಕ್ಕೂ ಡೆವಿಲರಿ ಬಾಯ್ ಹೇಳಿದ್ದೇನು ಗೊತ್ತಾ?

ಡೆಲಿವರಿ ಬಾಯ್ ಉತ್ತರಕ್ಕೆ ಮಹಿಳೆ ಭಾವುಕ

“ಮೇಡಂ ನೀವು ಈ ರಾತ್ರಿ ಡಯಪರ್ ಆರ್ಡರ್ ಮಾಡಿದ್ದೀರಿ. ಹಾಗಾಗಿ ಮನೆಯಲ್ಲಿ ಪುಟ್ಟ ಮಗು ಇರಬಹುದು, ಅದು ಈ 10 ಗಂಟೆಯ ಸಮಯಕ್ಕೆ ಮಲಗಿರಬಹುದು ಎಂದುಕೊಂಡೆ. ಬೆಲ್ ಒತ್ತಿ ಮಗುವಿನ ನಿದ್ರೆ ಕೆಡಿಸಬಾರದೆಂದು , ಕಾಲ್ ಮಾಡಿ ನಿಮಗೆ ಹೊರಗೆ ಬರಲು ಹೇಳಿದೆ ಎಂದು ಅವರು ನಗುತ್ತಲೇ ಉತ್ತರಿಸಿದರು. ಆ ಒಂದು ಮಾತು ನಿವೇದಿತಾ ಅವರ ಮನಸ್ಸನ್ನು ಗೆದ್ದಿತು. ಇಂದು ಎಲ್ಲರೂ ತಮ್ಮ ಕೆಲಸದ ಒತ್ತಡದಲ್ಲಿ ತಮ್ಮ ಬಗ್ಗೆಯೇ ಚಿಂತೆ ಮಾಡದಿರುವ ಈ ಕಾಲದಲ್ಲಿ, ಎಂದಿಗೂ ನೋಡದ ಮಗುವಿನ ನಿದ್ರೆಯ ಬಗ್ಗೆ ಯೋಚಿಸಿ. ವಿಷಯ ಸಣ್ಣದೇ ಆದರೂ, ಕಾಳಜಿ ತೋರಿದ ವ್ಯಕ್ತಿಯ ಮಾನವೀಯತೆ ಅವರಿಗೆ ತುಂಬಾ ವಿಶೇಷ ಎನಿಸಿದೆ. ಈ ಅನುಭವವನ್ನು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, "ಇದು ನನ್ನ ಜೀವನದ ಅತ್ಯಂತ ಸಿಹಿಯಾದ ಡೆಲಿವರಿ ಅನುಭವ" ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಈಗ ಸಾವಿರಾರು ಜನರ ಮನ ಗೆದ್ದಿದೆ. ನೆಟ್ಟಿಗರು ಡೆಲಿವರಿ ಸಿಬ್ಬಂದಿಯ ಕೇರಿಂಗ್, ಕರ್ತವ್ಯನಿಷ್ಠೆ ಮತ್ತು ಮಾನವೀಯತೆಯನ್ನು ಹೊಗಳುತ್ತಿದ್ದಾರೆ.

PREV
Read more Articles on
click me!

Recommended Stories

ಕೋಟ್ಯಧಿಪತಿಗಳ ಮನೆ ಬಾಗಿಲಿಗೆ ಪಕ್ಕದ್ಮನೆಯವರ ಹಾಲು, ಮೊಸರು: ಮುಲಾಜಿಲ್ಲದೇ ಕುಡಿದು-ತೇಗಿದ್ರು
12 ಬಾರಿ ಗೂಗಲ್‌ನಿಂದ ರಿಜೆಕ್ಟ್! 13ನೇ ಪ್ರಯತ್ನದಲ್ಲಿ ಕೋಟಿ ಆಫರ್ ಗಿಟ್ಟಿಸಿಕೊಂಡ ಟೆಕ್ಕಿಯ ಕಥೆ ವೈರಲ್..!