ದೀಪಾವಳಿ ಕ್ಲೀನಿಂಗ್ ವೇಳೆ ಸಿಕ್ತು ಕೋಟಿ ಮೌಲ್ಯದ ವಸ್ತು ! ಆಸ್ತಿಯಲ್ಲ, ಬಂಗಾರವಲ್ಲ ಮತ್ತೇನು?

Published : Nov 02, 2026, 06:55 PM IST
embroidery

ಸಾರಾಂಶ

ಕ್ಲೀನಿಂಗ್‌ ಮಾಡುವಾಗ ನಮ್ಮ ಹಳೆ ವಸ್ತುಗಳು ಸಿಕ್ಕಿದ್ರೆ ಅದ್ರ ಖುಷಿಯೇ ಬೇರೆ. ಅದ್ರಲ್ಲೂ ಅಮೂಲ್ಯವಾದ ಇಲ್ಲ ನಮಗೆ ಅಚ್ಚರಿ ಹುಟ್ಟಿಸುವ ವಸ್ತು ಸಿಕ್ಕಿದ್ರೆ ಸಂತೋಷ ಡಬಲ್‌ ಆಗುತ್ತೆ. ಮನೆ ಕ್ಲೀನ್‌ ಮಾಡುವಾಗ ಯುವತಿಗೆ ಸಿಕ್ಕ ಈ ವಸ್ತು ಕೋಟಿಗಿಂತ ಅಮೂಲ್ಯವಾದದ್ದು.

ದೀಪಾವಳಿ ಹಬ್ಬ ಬಂತೆಂದರೆ ಕ್ಲೀನಿಂಗ್‌ ಶುರುವಾಗುತ್ತೆ. ಮಿಡಲ್‌ ಕ್ಲಾಸ್‌ ಕುಟುಂಬಗಳ ಕ್ಲೀನಿಂಗ್‌ ಒಂದು ಕೈ ಹೆಚ್ಚಿರುತ್ತೆ. ಮೂಲೆ ಮೂಲೆ ಹುಡುಗಿ ಮನೆ ಕ್ಲೀನ್‌ ಮಾಡೋದ್ರಲ್ಲಿ ಮಹಿಳೆಯರು ಮುಂದು. ಸ್ವಚ್ಛತೆ ಟೈಂನಲ್ಲಿ ಕೆಲವೊಮ್ಮೆ ಹಳೆಯ ವಸ್ತುಗಳು ನಮ್ಮ ಕಣ್ಣಿಗೆ ಬೀಳುತ್ವೆ. ಈಗ ಮಹಿಳೆಯೊಬ್ಬರಿಗೆ ಅಮೂಲ್ಯವಾದ ವಸ್ತು ಒಂದು ಸ್ವಚ್ಛತೆ ವೇಳೆ ಸಿಕ್ಕಿದೆ. ಅದನ್ನು ನೋಡಿ ಆಕೆ ಅಚ್ಚರಿಗೊಂಡಿದ್ದಾಳೆ.

ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿರುವ ಸುದ್ದಿ ಪ್ರಕಾರ, ಕ್ರಿಯಾ ಸಿಂಗ್ ಎಂಬ ಯುವತಿಗೆ ದೀಪಾವಳಿ ಸ್ವಚ್ಛತೆ ವೇಳೆ ವಸ್ತುವೊಂದು ಸಿಕ್ಕಿದೆ. ಅದು ಯಾವ್ದೋ ಆಸ್ತಿ ಪತ್ರ ಅಥವಾ ಬಂಗಾರವಲ್ಲ. ಬದಲಿಗೆ ಅಮ್ಮನ ಹಳೆಯ ಫೈಲ್.

ತಾಯಿ ಕಸೂತಿಗೆ ಮನಸೋತ ಮಗಳು

ಕ್ರಿಯಾ ಸಿಂಗ್‌ ಗೆ ತಾಯಿಯ ಕಸೂತಿ ಬುಕ್‌ ಸಿಕ್ಕಿದೆ. ಫೈಲ್ನ ಮೊದಲ ಪುಟದಲ್ಲಿ ಎಂಬ್ರಾಯ್ಡರಿ (Embroidery) ಸೆಂಟರ್ ಎಂದು ಬರೆಯಲಾಗಿದೆ. ಅಸ್ಸಾಂನ ಗುವಾಹಟಿಯ ಸತ್ಗಾಂವ್ ವಿಳಾಸವೂ ಇದೆ. ಫೈಲ್ನಲ್ಲಿ ಕ್ರಿಯಾ ಅವರ ತಾಯಿ ಮೀನಾ ರಾಜು ದೇವಿ ಅವರ ಹೆಸರು, ವಿಷಯವಾಗಿ ಕಸೂತಿ ಕಲೆ ಹಾಗೂ ಫೈಲ್ ಸಿದ್ಧಪಡಿಸಿದ ದಿನಾಂಕ 1998ರ ಡಿಸೆಂಬರ್ ಎಂದು ಬರೆಯಲಾಗಿದೆ.

ಹಳೆಯ ಫೈಲ್ ತೆರೆದ ಕ್ರಿಯಾ, ಅದರಲ್ಲಿರುವ ತಾಯಿಯ ಕಲಾಕೃತಿಗಳನ್ನು ಒಂದೊಂದಾಗಿ ತೋರಿಸಿದ್ದಾರೆ. ಅಮ್ಮನ ಪ್ರತಿಭೆಯನ್ನು ಕಂಡು ಅವರು ಅಚ್ಚರಿಗೊಂಡಿದ್ದಾರೆ. ಫೈಲ್ನ ಪುಟಗಳಲ್ಲಿ ಯಂತ್ರದ ಮೂಲಕ ಮಾಡಿದ ಕಸೂತಿ ವಿನ್ಯಾಸಗಳು, ಗುಲಾಬಿ ಹೂವುಗಳು ಹಾಗೂ ವಿವಿಧ ಬಗೆಯ ಹೂವಿನ ಚಿತ್ರಗಳು ಕಾಣಿಸುತ್ತವೆ. ಪ್ರತಿಯೊಂದು ವಿನ್ಯಾಸವೂ ಅಚ್ಚುಕಟ್ಟಾಗಿ ಮತ್ತು ಸುಂದರವಾಗಿ ಮೂಡಿಬಂದಿದೆ.

ತಾಯಿಯ ಕಲಾಕೃತಿಗಳನ್ನು ತೋರಿಸಿದ ಕ್ರಿಯಾ, ಒಬ್ಬ ವ್ಯಕ್ತಿಗೆ ಇಷ್ಟೊಂದು ಪ್ರತಿಭೆ ಹೇಗೆ ಇರಲು ಸಾಧ್ಯ, ಇಷ್ಟು ಪ್ರತಿಭಾವಂತ ಅಮ್ಮನ ಮಗಳು ನಾನು ಎಂದು ಹೇಳಿಕೊಳ್ಳಲು ನನಗೆ ಖುಷಿಯಾಗುತ್ತದೆ ಎಂದಿದ್ದಾರೆ. ಅಮ್ಮನಲ್ಲಿದ್ದಷ್ಟು ಪ್ರತಿಭೆ ತನ್ನಲ್ಲಿ ಇಲ್ಲ ಎಂದಿದ್ದಾರೆ.

ವಿಡಿಯೋಗೆ ಲಕ್ಷಾಂತರ ವೀವ್ಸ್

ತಾಯಿಯ ಪ್ರತಿಭೆಯನ್ನು ಪರಿಚಯಿಸುವ ಈ ವಿಡಿಯೋವನ್ನು ಕ್ರಿಯಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮಮ್ಮಿಯ ಟ್ಯಾಲೆಂಟ್ ಎಂಬ ಶೀರ್ಷಿಕೆಯಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದಕ್ಕೆ ಭರ್ಜರಿ ರೆಸ್ಪಾನ್ಸ್‌ ಸಿಕ್ಕಿದೆ. ಈವರೆಗೆ ವಿಡಿಯೋ 38 ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದಿದೆ.

PREV
Read more Articles on
click me!

Recommended Stories

ದೀಪದ ಬತ್ತಿಗೆ ನೇಲ್ ಪಾಲಿಶ್ ಹಚ್ಚಿದರೆ ಗಾಳಿ ಬೀಸಿದರೂ ಆರಲ್ವ? ವೈರಲ್ ಹ್ಯಾಕ್ ಹಿಂದಿನ ಸತ್ಯ ಇದು
ನಿಗೂಢ ಮನೆಯಲ್ಲಿ ಆತ್ಮಗಳ ಕಾಟ ! ಮಹಡಿಯಲ್ಲಿ ಸಿಕ್ತು 100 ವರ್ಷಗಳ ಹಳೆ ಹಲ್ಲು