Interesting Facts: ವಿಮಾನಗಳು ಹೆಚ್ಚು ಬಿಳಿಯ ಬಣ್ಣದಲ್ಲಿ ಮಾತ್ರ ಇರುತ್ತೆ ಯಾಕೆ? ಶೇ.99 ಮಂದಿಗೆ ಗೊತ್ತಿಲ್ಲ!

Published : Aug 17, 2026, 01:07 PM IST
aeroplane-pti-40193.jpg

ಸಾರಾಂಶ

ಹೆಚ್ಚಿನ ವಿಮಾನಗಳು ಬಿಳಿ ಬಣ್ಣದಲ್ಲಿರಲು ವೈಜ್ಞಾನಿಕ, ಭದ್ರತೆ ಮತ್ತು ಆರ್ಥಿಕ ಕಾರಣಗಳಿವೆ. ಬಿಳಿ ಬಣ್ಣವು ಸೂರ್ಯನ ಶಾಖವನ್ನು ಪ್ರತಿಫಲಿಸಿ ಇಂಧನ ಉಳಿಸುತ್ತದೆ, ವಿಮಾನದ ಮೇಲಿನ ದೋಷಗಳನ್ನು ಸುಲಭವಾಗಿ ಪತ್ತೆಹಚ್ಚಲು ಸಹಾಯ ಮಾಡುತ್ತದೆ ಮತ್ತು ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುತ್ತದೆ.

ವಿಶ್ವದ ಬಹುತೇಕ ವಿಮಾನಗಳು ಬಿಳಿ ಬಣ್ಣದಲ್ಲೇ ಇರುತ್ತದೆ. ಅಸಲಿಗೆ ಏಕೆ ವಿಮಾನಗಳು ಬಿಳಿ ಬಣ್ಣದಲ್ಲಿಯೇ ಇರ್ತಾವೆ? ಇದರ ಹಿಂದಿರುವ ವೈಜ್ಞಾನಿಕ ಕಾರಣವೇನು? ಎಂಬುವುದು ಆಸಕ್ತಿಯುತವಾಗಿದೆ. ವಿಮಾನಗಳು ಬಿಳಿಬಣ್ಣದಲ್ಲಿಯೇ ಕಾಣಿಸುತ್ತವೆ, ಇದು ಕೇವಲ ನೋಡಲು ಚೆನ್ನಾಗಿರಲಿ ಅಂತ ಮಾತ್ರ ಅಲ್ಲ. ವಿಮಾನಕ್ಕೆ ಬಿಳಿ ಬಣ್ಣವನ್ನೇ ಹಾಕುವುದರ ಹಿಂದೆ ಹಲವು ಕಾರಣಗಳಿದೆ. ವೈಜ್ಞಾನಿಕವಾಗಿ ಭದ್ರತೆಯ ಕಾರಣಗಳು ಪ್ರಮುಖವಾಗಿದ್ದು, ಈ ಕುರಿತ ಕಂಪ್ಲೀಟ್ ಮಾಹಿತಿ ಇಲ್ಲಿದೆ ಓದಿ.

ಇಂಧನ ಉಳಿತಾಯ

ವಿಮಾನಗಳು ಬಿಳಿ ಬಣ್ಣದಲ್ಲಿ ಇರುವುದರಿಂದ ಅದರ ಮೇಲೆ ಬೀಲುವ ಸೂರ್ಯನ ಕಿರಣಗಳು ಪ್ರತಿಫಲಿಸುತ್ತವೆ. ಬಿಳಿ ಬಣ್ಣವೂ ಸೂರ್ಯನ ಕಿರಣಗಳನ್ನು ಪ್ರತಿಫಲಿಸುವ ಕಾರಣ ಬಿಸಿಯನ್ನು ಹಿರಿಕೊಳ್ಳುವುದಿಲ್ಲ, ಇದರಿಂದ ತಾಪಮಾನ ಕಡಿಮೆಯಾಗುತ್ತದೆ. ವಿಮಾನ ಆಕಾಶದಲ್ಲಿ ಹಾರಾಡುವ ಸಂದರ್ಭದಲ್ಲಿ ಸೂರ್ಯನ ಶಾಖ ಹೆಚ್ಚಿರುತ್ತದೆ. ಬಿಳಿಯ ಬಣ್ಣ ಇರುವ ಕಾರಣ ವಿಮಾನ ಒಳಗೆ ಉಷ್ಣಾಂಶ ಕಡಿಮೆಯಾಗಿ ಕಂಡಿಷನಿಂಗ್ ವ್ಯವಸ್ಥೆಯ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಇದರಿಂದ ಇಂಧನ ಬಳಕೆ ಕಡಿಮೆಯಾಗುತ್ತದೆ.

ಭದ್ರತೆಯ ಕಾರಣ

ಭದ್ರತೆ ವಿಚಾರದಲ್ಲೂ ಬಿಳಿ ಬಣ್ಣ ಬೆಸ್ಟ್ ಎಂದು ಹೇಳಬಹುದು, ಏಕೆಂದರೆ ವಿಮಾನ ಬಿಳಿ ಬಣ್ಣದಿಂದ ಇರುವುದರಿಂದ ಅದರ ಮೇಲಿನ ಯಾವುದೇ ಗೆರೆಗಳು, ರಸ್ಟ್ ಅಥವಾ ಆಯಿಲ್ ಲೀಕ್ ಆದರೆ ಸುಲಭವಾಗಿ ಗುರುತಿಸಬಹುದು. ಬೇರೆ ಬಣ್ಣ ಹಾಕಿದರೆ ಕಣ್ಣಿಗೆ ಅಷ್ಟು ಸ್ಪಷ್ಟವಾಗಿ ಇವು ಕಾಣಿಸುವುದಿಲ್ಲ. ಆದ್ದರಿಂದ ಭದ್ರತೆಯ ಕಾರಣದಿಂದಲೂ ವಿಮಾನಕ್ಕೆ ಬಿಳಿ ಬಣ್ಣವನ್ನು ಆಯ್ಕೆ ಮಾಡಲಾಗುತ್ತದೆ. ವಿಮಾನಗಳು ಸಹಜವಾಗಿಯೇ ಹೆಚ್ಚು ಭಾರ ಇರುತ್ತವೆ. ಆದ್ದರಿಂದ ವಿಮಾನದ ತೂಕವನ್ನು ಮತ್ತಷ್ಟು ಹೆಚ್ಚು ಮಾಡುವ ಬಣ್ಣವನ್ನು ಬಳಕೆ ಮಾಡುವ ಬದಲು, ಕಡಿಮೆ ಪಿಗ್ಮೆಂಟ್ ಇರುವ ಬಿಳಿ ಬಣ್ಣದ ಬಳಕೆಯಿಂದ ಅದರ ತೂಕ ಕಡಿಮೆಯಾಗುತ್ತದೆ. ಇದರಿಂದ ಇಂಧನ ಬಳಕೆ ಕಡಿಮೆಯಾಗುತ್ತದೆ.

ವಿಮಾನಗಳ ರೀ ಸೇಲ್ ಮೌಲ್ಯ

ಬಿಳಿ ಬಣ್ಣದ ವಿಮಾನಗಳ ಸೇಲ್, ರೀ ಸೇಲ್‌ ವ್ಯಾಲ್ಯೂ ಸಂದರ್ಭದಲ್ಲಿಯೂ ವಿಮಾನ ತೂಕ ಒಂದು ಕೆಜಿ ಕಡಿಮೆಯಾದರೂ ಇಂಧನ ಖರ್ಚು ಭಾರೀ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ. ಬಿಳಿ ಬಣ್ಣ ಬೇಗ ಲಭ್ಯವಾಗುತ್ತದೆ, ಇದರ ನಿರ್ವಹಣೆ ಖರ್ಚು ಕಡಿಮೆ. ಬಿಳಿ ಬಣ್ಣ ನ್ಯೂಟರಲ್ ಬಣ್ಣ ಆಗಿರುವ ಕಾರಣ ಹೆಚ್ಚು ಸೇಲ್ ಆಗುತ್ತದೆ. ಇನ್ನು, ಗಾಢ ಬಣ್ಣಗಳನ್ನು ಬದಲಾಯಿಸುವುದು ಕಷ್ಟ. ಆದ್ದರಿಂದ, ಹೆಚ್ಚಿನ ಜನರು ಬಿಳಿ ಬಣ್ಣವನ್ನು ಬಳಸಿ ಬಣ್ಣ ಬಳಿಯಲು ಬಯಸುತ್ತಾರೆ.

ಐತಿಹಾಸಿಕ ಕಾರಣವೂ ಇದೆ!

ಇನ್ನು, ಬಿಳಿ ಬಣ್ಣ ಬಳಕೆ ಮಾಡುವುದರಿಂದ ವಿಮಾನ ಸಂಸ್ಥೆಗಳಿಗೆ ಲಕ್ಷಾಂತರ ರೂಪಾಯಿ ಉಳಿತಾಯವಾಗುತ್ತದೆ. ವಿಮಾನದ ಪ್ರಯಾಣದ ಸಮಯದಲ್ಲಿ ನೀಲಿ ಆಕಾಶದಲ್ಲಿ ಪಕ್ಷಿಗಳಿಗೆ ಪತ್ತೆ ಮಾಡಲು ಸುಲಭವಾಗುತ್ತದೆಯಂತೆ. ಇದರಿಂದ ಪಕ್ಷಿಗಳಿಗೆ ಡಿಕ್ಕಿ ಹೊಡೆಯುವ ಸಾಧ್ಯತೆಯೂ ಕಡಿಮೆಯಾಗುತ್ತದೆಯಂತೆ.

ಬಿಳಿ ಬಣ್ಣವನ್ನ ಹಾಕುವುದರ ಹಿಂದೆ ಒಂದು ಐತಿಹಾಸಿಕ ಕಾರಣ ಕೂಡ ಇದೆ. ವಿಮಾನಗಳ ತಯಾರಿ ಆರಂಭವಾದ ಸಂದರ್ಭದಲ್ಲಿ ಅವು ಅಲ್ಯೂಮಿನಿಯಂನಿಂದ ಮಾಡಲಾಗುತ್ತಿತ್ತು. ಇವು ಬಿಳಿ ಬಣ್ಣದಲ್ಲೇ ಇರುತ್ತದೆ. ಆ ಬಳಿಕ ಬಣ್ಣ ಹಾಕುವ ಪದ್ಧತಿ ಆರಂಭವಾದರೂ, ಬಿಳಿ ಬಣ್ಣವನ್ನೇ ಆಯ್ಕೆ ಮಾಡಿಕೊಳ್ಳಲಾಗುತ್ತಿತ್ತು. ಈ ಕಾರಣದಿಂದಲೂ ಬಹುತೇಕ ವಿಮಾನಗಳಿಗೆ ಬಿಳಿ ಬಣ್ಣವನ್ನೇ ಬಳಕೆ ಮಾಡಲಾಗುತ್ತದೆ.

PREV
Read more Articles on
click me!

Recommended Stories

ಪ್ರಸಿದ್ಧ ಟಿಕ್ ಟಾಕರ್ ಹತ್ಯೆ : 1.3 ಮಿಲಿಯನ್ ಫಾಲೋವರ್ಸ್ ಹೊಂದಿದ್ದ ಹುಡುಗಿ ಅಂತಿಮ ಸಂಸ್ಕಾರಕ್ಕೆ ಬಂದಿದ್ದೆಷ್ಟು ಜನ ?
ಅಜ್ಜಿಯ ಬಿರಿಯಾನಿ ರೆಸಿಪಿ ಬದಲಿಸಿತು ಜೀವನ; ₹5 ಲಕ್ಷ ಹೂಡಿಕೆಯಿಂದ ₹10 ಕೋಟಿ ಬಿಸಿನೆಸ್ ಕಟ್ಟಿದ ಬೆಂಗಳೂರು ಸಹೋದರಿಯರು