ನಟಿ ಕಾಜಲ್ ಮೀರಿಸಿದ ಎಕ್ಸ್‌ಪ್ರೆಶನ್, ಜಾರ್ಜಿಯಾ ದೇಶದ ಪುಟಾಣಿಯ ಬಾಲಿವುಡ್ ಹಾಡಿನ ಮೋಡಿ

Published : Nov 15, 2026, 02:58 PM IST
Georgian Girl Bollywood Song Performance Wins Hearts

ಸಾರಾಂಶ

ಜಾರ್ಜಿಯಾ ದೇಶದ ಪುಟಾಣಿಯ ರೀಲ್ಸ್ ಒಂದು ಭಾರತದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಬಾಲಿವುಡ್ ಹಾಡು ಗುನುಗುತ್ತಾ ಎಕ್ಸ್‌ಪ್ರೆಶನ್ ನೀಡಿದ್ದಾಳೆ. ಅಜ್ಜನ ಜೊತೆ ಮಾಡಿದ ರೀಲ್ಸ್ ವೈರಲ್ ಆಗಿದೆ.

ಜಾರ್ಜಿಯಾ(ನ.15) ಜಾರ್ಜಿಯಾ ದೇಶದ ಪುಟ್ಟ ಬಾಲಕಿ ಬಾಲಿವುಡ್ ಹಾಡು ಗುನುಗುತ್ತಾ ಅದಕ್ಕೆ ತಕ್ಕಂತೆ ಎಕ್ಸ್‌ಪ್ರೆಶನ್ ನೀಡುತ್ತಾ ರೀಲ್ಸ್ ಮಾಡಿದ್ದಾಳೆ. ವಿಶೇಷ ಅಂದರೆ ಬಾಲಿವುಡ್‌ನ ಅತ್ಯಂತ ಜನಪ್ರಿಯ ಹಾಗೂ ಈಗಲೂ ಬಹುತೇಕರ ನೆಚ್ಚಿನ ಮೆಹಂದಿ ಲಗಾಕೆ ರಖನಾ ಹಾಡು ಗುನುಗಿದ್ದಾಳೆ. ಈಕೆಯ ಅಭಿನಯ, ಎಕ್ಸ್‌ಪ್ರೆಶನ್‌ಗೆ ನಟಿಯರೇ ಮಾರು ಹೋಗುವುದು ಖಚಿತ. ಚಳಿ ಕಾಯಿಸುತ್ತಾ ಪುಟ್ಟ ಬಾಲಕಿಯ ಹಾಡು ಭಾರತದಲ್ಲಿ ವೈರಲ್ ಆಗಿದೆ. ಇದೀಗ ಈ ಬಾಲಕಿ ಹಲವರ ಮೋಡಿ ಮಾಡಿದ್ದಾಳೆ.

ಜಾರ್ಜಿಯಾದ ಇವಾ ಅನಾ ಮರಿಯಾ ರೀಲ್ಸ್ ಮೂಲಕ, ವಿಡಿಯೋಗಳ ಮೂಲಕ ಭಾರಿ ಜನಪ್ರಿಯಳಾಗಿದ್ದಾಳೆ. ಹಲವು ಭಾಷೆಗಳ ಡೈಲಾಗ್, ಹಾಡು ಗುನುಗುತ್ತಾ ವಿಡಿಯೋ ಮಾಡುವ ಈಕೆಗೆ ಭರ್ಜರಿ ಫಾಲೋವರ್ಸ್ ಇದ್ದಾರೆ. ಈ ಬಾರಿ ಈ ಇವಾ ಅನಾ ಮರಿಯಾ ಬಾಲಿವುಡ್ ಹಾಡಿಗೆ ಎಕ್ಸ್‌ಪ್ರೆಶನ್ ನೀಡಿದ್ದಾಳೆ. ಹಿಂದಿ ಹಾಡನ್ನು ಹಾಡುತ್ತಾ ಹೆಜ್ಜೆ ಹಾಕಿದ್ದಾಳೆ. ಸರಾಗವಾಗಿ ಹಿಂದಿ ಗೊತ್ತಿರುವಂತೆ ಈಕೆ ಹಾಡಿದ್ದಾಳೆ.

ಅಜ್ಜನ ಜೊತೆ ಕ್ಯಾಂಪ್ ಫೈರ್, ಹಾಡಿನ ಮೋಡಿ

ಅಜ್ಜನ ಜೊತೆ ಚಳಿಗೆ ಕ್ಯಾಂಪ್ ಫೈರ್ ಪಕ್ಕದ ಕುಳಿತು ಈ ಹಾಡು ಗುನುಗಿದ್ದಾಳೆ, ಹೆಜ್ಜೆ ಹಾಕಿದ್ದಾಳೆ. ಪುಟಾಣಿಯ ಹಾಡು, ಡ್ಯಾನ್ಸ್‌ಗೆ ಅಜ್ಜ ಸಾಥ್ ನೀಡಿದ್ದಾಳೆ. ಚಳಿ ಕಾಯಿಸುತ್ತಾ ಪುಟಾಣಿಯ ಬಾಲಿವುಡ್ ಹಾಡಿನ ಮೋಡಿಗೆ ಎಲ್ಲರು ಫಿದಾ ಆಗಿದ್ದಾರೆ. ಈ ವಿಡಿಯೋ 60 ಮಿಲಿಯನ್‌ಗೂ ಅಧಿಕ ವೀವ್ಸ್ ಪಡೆದುಕೊಂಡಿದೆ. 1 ಲಕ್ಷಕ್ಕೂ ಅಧಿಕ ಮಂದಿಕ ಕಮೆಂಟ್ಸ್ ಮಾಡಿದ್ದಾರೆ. ಪುಟಾಣಿಯ ಹಾಡಿಗೆ ಅಜ್ಜನೂ ಸಾಥ್ ನೀಡಿರುವುದು ಎಲ್ಲರ ಹೃದಯ ಗೆದ್ದಿದೆ.

ಕಿಲಿ, ನೀಮಾ ಪೌಲ್ ಬೆನ್ನಲ್ಲೇ ಇವಾ

ಬಾಲಿವುಡ್ ಹಾಡುಗಳು ಗಡಿ ದಾಟಿ ಎಲ್ಲರ ಮೋಡಿ ಮಾಡುತ್ತಿದೆ ಎಂದು ಹಲವರು ಕಮೆಂಟ್ಸ್ ಹಾಕಿದ್ದಾರೆ. ಬಾಲಿವುಡ್ ಸೇರಿದಂತೆ ಭಾರತೀಯ ಸೀನಿಮಾದ ಸೂಪರ್ ಹಾಡುಗಳಿಗೆ ರೀಲ್ಸ್ ಮಾಡುವ ವಿದೇಶಿಗರ ಸಂಖ್ಯ ಹೆಚ್ಚಿದೆ. ಈ ಪೈಕಿ ತಾಂಜೆನಿಯಾದ ಕಿಲಿ ಹಾಗೂ ನೀಮಾ ಪೌಲ್ ಜನಪ್ರಿಯರಾಗಿದ್ದಾರೆ. ಬಹುತೇಕ ಭಾರತದ ಭಾಷೆಗಳ ಹಾಡಿಗೆ ಈ ಸಹೋದರ ಸಹೋದರಿ ಹೆಜ್ಜೆ ಹಾಕಿದ್ದಾರೆ, ಲಿಪ್ ಸಿಂಕ್ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಕಿಲಿ ಹಾಗೂ ನೀಮಾ ಪೌಲ್ ಕುರಿತು ಮಾತನಾಡಿದ್ದರು. ಇವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದರು. ಕನ್ನಡ ಸೇರಿದಂತೆ ದಕ್ಷಿಣ ಭಾರತದ ಹಲವು ಹಾಡುಗಳಿಗೆ ಕಿಲಿ ಹಾಗೂ ನೀಮಾ ಪೌಲ್ ಲಿಪ್ ಸಿಂಕ್ ಮಾಡಿದ್ದಾರೆ.

ಇದೀಗ ಇವಾ ಅನಾ ಮರಿಯಾ ಕೂಡ ಬಾಲಿವುಡ್ ಹಾಡಿಗೆ ಲಿಪ್ ಸಿಂಕ್ ಮಾಡಿದ್ದಾಳೆ. ಇದೇ ವೇಳೆ ಹಲವರು ಭಾರತದ ಇತರ ಭಾಷೆಗಳ ಲಿಪ್ ಸಿಂಕ್ ರೀಲ್ಸ್ ಮಾಡುವಂತೆ ಸಲಹೆ ನೀಡಿದ್ದಾರೆ. ಸದ್ಯ ಇವಾ ಅನಾ ಮರಿಯಾ ವಿಡಿಯೋಗಳು ಭಾರತದಲ್ಲಿ ಭಾರಿ ಸದ್ದು ಮಾಡುತ್ತಿದೆ.

PREV
Read more Articles on
click me!

Recommended Stories

18 ವರ್ಷಗಳಿಂದ ಅಜ್ಜಿ ಕಂಡಿದ್ದ ಕನಸು! ಮದುವೆ ದಿನ ಮೊಮ್ಮಗ ಕೊಟ್ಟ ಸರ್ಪ್ರೈಸ್‌ಗೆ ನೆಟ್ಟಿಗರು ಫಿದಾ
3000 ವರ್ಷಗಳ ಹಿಂದೆ ಹೊಲದಲ್ಲಿ ಹೂತಿಟ್ಟಿದ್ದ ನಿಧಿ ಪತ್ತೆ, ಸಿಕ್ಕ ಮೂರು ಕೈಬಳೆಗಳು ಸಾಮಾನ್ಯದಲ್ಲ