ಯುವ ಜೋಡಿಯ 'ಆ 19 ನಿಮಿಷ'ದ MMS ಲೀಕ್​ ಆಯ್ತು! ಹಲ್​ಚಲ್​ ಸೃಷ್ಟಿಸಿರೋ ವಿಡಿಯೋದ ಅಸಲಿಯತ್ತೇನು?

Published : Nov 30, 2025, 01:17 PM IST
19 minute viral video

ಸಾರಾಂಶ

ಸೋಷಿಯಲ್ ಮೀಡಿಯಾದಲ್ಲಿ 19 ನಿಮಿಷದ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿರುವ ಯುವತಿ ತಾನೇ ಎಂದು ತಪ್ಪಾಗಿ ಭಾವಿಸಿದ್ದರಿಂದ 'ಸ್ವೀಟ್ ಜನ್ನತ್' ಎಂಬ ಡಿಜಿಟಲ್ ಕ್ರಿಯೇಟರ್​ನ ಫಾಲೋವರ್ಸ್​ ಸಂಖ್ಯೆ ದಿಢೀರ್ ಹೆಚ್ಚಾಗಿದೆ. ಲೈವ್​ಗೆ ಬಂದು ಸ್ಪಷ್ಟನೆ ನೀಡಿರುವ ಆಕೆ, ಅದು ತಾನಲ್ಲ ಎಂದಿದ್ದಾಳೆ.

ಜನರಿಗೆ ಉಪಕಾರ ಆಗುವಂಥ, ಒಳ್ಳೆಯ ಶಿಕ್ಷಣ ನೀಡುವಂಥ, ಉತ್ತಮ ನಾಗರಿಕರಾಗಿ ಬೆಳೆಯುವಂಥ, ಸಮಾಜಕ್ಕೆ ಉತ್ತಮ ಸಂದೇಶ ನೀಡುವಂಥ, ದೇಶದ ಬಗ್ಗೆ ಕಾಳಜಿ ಇರುವಂಥ, ದೇಶಪ್ರೇಮವನ್ನು ಬೆಳೆಸಿಕೊಳ್ಳುವಂಥ.... ವಿಡಿಯೋ ಅಥವಾ ಸುದ್ದಿಗಳನ್ನು ಸಾಕಷ್ಟು ಅಧ್ಯಯನ ಮಾಡಿ ಅದನ್ನು ಅಪ್​ಲೋಡ್​ ಮಾಡಿದರೆ ಅದನ್ನು ನೋಡಿ ಎಂದು ಕಾಲಿಗೆ ಬಿದ್ದರೂ ಬೆರಳೆಣಿಕೆ ಮಂದಿ ಮಾತ್ರ ನೋಡುತ್ತಾರೆ! ಆದರೆ, ಅಶ್ಲೀಲ, ಅಸಭ್ಯ ಎನ್ನುವಂಥ ವಿಡಿಯೋ ರಾತ್ರೋರಾತ್ರಿ ಲಕ್ಷ ಲಕ್ಷ ವ್ಯೂವ್ಸ್​ ಕಾಣುತ್ತದೆ. ಒಬ್ಬ ನಟಿಯೋ, ಇನ್ನಾರೋ ಅರೆಬರೆ ಡ್ರೆಸ್​ ಹಾಕಿಕೊಂಡು, ದೇಹ ಪ್ರದರ್ಶನ ಮಾಡಿ ಒಂದು ಕಡೆ ಕಾಣಿಸಿಕೊಂಡಳು ಎಂದರೆ ಆಕೆಯ ಇನ್​ಸ್ಟಾಗ್ರಾಮ್​ ಫಾಲೋವರ್ಸ್​ ಸಂಖ್ಯೆ ನೂರರಿಂದ ಲಕ್ಷಕ್ಕೆ ದಾಟುತ್ತದೆ ಎಂದರೆ, ಜನರ ಮನಸ್ಥಿತಿ ಹೇಗಿದೆ ಎನ್ನುವುದು ಅರ್ಥವಾಗುತ್ತವೆ. ಇಂಥ ವಿಡಿಯೋಗಳನ್ನು ಟ್ರೋಲ್​ ಮಾಡುತ್ತಲೇ, ಒಳ್ಳೆಯ ಸುದ್ದಿ ಹಾಕಲು ಆಗಲ್ವಾ ಎಂದು ತಮ್ಮ ಡಿಕ್ಷನರಿಯಲ್ಲಿರುವ ಎಲ್ಲಾ ಕೆಟ್ಟ ಪದಗಳನ್ನು ಕಮೆಂಟ್​ ಮಾಡುವವರಿಗೆ ಈ ವಿಡಿಯೋದ ಕೆಳಗೇ ಇನ್ನೊಂದು ಉತ್ತಮ ವಿಡಿಯೋ ಅಥವಾ ಸುದ್ದಿ ಇರುವುದು ಕಾಣಿಸುವುದೇ ಇಲ್ಲ. ಸೋಷಿಯಲ್​​ ಮೀಡಿಯಾದಲ್ಲಿ ಸ್ಕ್ರೋಲ್​ ಮಾಡುವವರಿಗೆ ಅಲ್ಲೊಂದು ಒಳ್ಳೆಯ ಸುದ್ದಿ, ವಿಡಿಯೋ ಇದೆ ಎಂದರೆ ಕೈ ತಂತಾನೇ ಮುಂದೆ ಹೋಗುತ್ತದೆ, ಆದರೆ ಇಂಥ ವಿಡಿಯೋ ಕಂಡರೆ ತಕ್ಷಣ ಕೈ ಅಲ್ಲಿಯೇ ನಿಲ್ಲುತ್ತದೆ ಎನ್ನುವುದೂ ಗೊತ್ತಿಲ್ಲದೇ ಇಂಥ ಅಶ್ಲೀಲ ಎನ್ನುವಂಥ ವಿಡಿಯೋಗಳಿಗೆ ಉಗಿದು ಕಮೆಂಟ್​ ಹಾಕಿ, ಒಳ್ಳೆಯ ಸುದ್ದಿ ಕೊಡಲು ಆಗಲ್ವಾ ಎನ್ನುತ್ತಾರೆ.

ಟ್ರೆಂಡಿಂಗ್​ನಲ್ಲಿ 19 ನಿಮಿಷದ ವಿಡಿಯೋ

ಇರಲಿ ಬಿಡಿ... ಈಗ ಅಂಥದ್ದೇ ಒಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗಿ, ಅದು ಟ್ರೆಂಡಿಂಗ್​ನಲ್ಲಿದೆ. ಜನರು ಹುಡುಕಿಕೊಂಡು ಅದನ್ನು ನೋಡಲು ಮುಗಿಬೀಳುತ್ತಿದ್ದಾರೆ ಎನ್ನಲಾಗುತ್ತಿದೆ. ಈ ವಿಡಿಯೋ ನೋಡುವುದು ಹೇಗೆ ಎಂದು ಕೆಲವು ಇನ್​ಸ್ಟಾಗ್ರಾಮ್​ನಲ್ಲಿಯೇ ವಿಡಿಯೋ ಮಾಡಲಾಗುತ್ತಿದೆ ಎಂದರೆ, ಈ ವಿಡಿಯೋಗೆ ಎಷ್ಟು ಡಿಮಾಂಡ್​ ಇದೆ ಎನ್ನುವುದು ತಿಳಿಯುತ್ತದೆ. ಅಷ್ಟಕ್ಕೂ ಆ ವಿಡಿಯೋದ ಹೆಸರು 19 minutes video ಎನ್ನುವುದು. ಇದನ್ನು ಹಲವು ಪಾರ್ಟ್​ಗಳಲ್ಲಿಯೂ ಶೇರ್​ ಮಾಡಲಾಗಿದೆ! ಇದರಲ್ಲಿ ಇರೋದು ಏನೆಂದರೆ ಒಬ್ಬರ ಹುಡುಗ-ಹುಡುಗಿ ಲವ್​ನಲ್ಲಿ ತೊಡಗಿರುವ ದೃಶ್ಯ. ಲೈವ್​ ಆಗಿಯೇ ಒಂದು ಹಂತವನ್ನೂ ಮೀರಿ ಹೋಗಿ ಈ ವಿಡಿಯೋ ಮಾಡಿದೆ ಜೋಡಿ!

ಏನಿದು ಸ್ಟೋರಿ?

ಕಳೆದ ಕೆಲವು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ 19 ನಿಮಿಷಗಳ 34 ಸೆಕೆಂಡುಗಳ ಎಂಎಂಎಸ್ ವೀಡಿಯೊವೊಂದು ದೊಡ್ಡ ಕೋಲಾಹಲಕ್ಕೆ ಕಾರಣವಾಗುತ್ತಿದೆ. ಅದು ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಅಥವಾ ಟೆಲಿಗ್ರಾಮ್​ನಲ್ಲಿ ಟ್ರೆಂಡ್ ಆಗಿದೆ. ಬಳಕೆದಾರರು ಈ ಜೋಡಿಯ ಖಾಸಗಿ ಸೋರಿಕೆಯಾದ ವೀಡಿಯೊದ ಲಿಂಕ್ ಅನ್ನು ಹುಡುಕುತ್ತಿದ್ದಾರೆ ಮತ್ತು ಅದರ ಬಗ್ಗೆ ಚರ್ಚೆಗಳು ನಿರಂತರವಾಗಿ ಹೆಚ್ಚುತ್ತಿವೆ. ಆದರೆ ಇದರ ನಡುವೆಯೇ, ಡಿಜಿಟಲ್​ ಕ್ರಿಯೇಟರ್​ ಆಗಿರುವ "ಸ್ವೀಟ್ ಜನ್ನತ್" ಎನ್ನುವ ಇನ್​ಸ್ಟಾಗ್ರಾಮ್​ ಪೇಜ್​ ಇರುವ ಹುಡುಗಿಯ ಸುದ್ದಿಯೂ ಸದ್ದು ಮಾಡುತ್ತಿದೆ. ಈ ಸೋರಿಕೆ ಆಗಿರೋ ವಿಡಿಯೋದಲ್ಲಿ ಇರುವುದು ಈಕೆ ಎಂದು ಹೇಳಿ ಆಕೆಯ ಫಾಲೋವರ್ಸ್​ ದಿಢೀರ್​ ಹೆಚ್ಚಾದರಂತೆ!

ಲೈವ್​ಗೆ ಬಂದ ಯುವತಿ

ಈ ಬಗ್ಗೆ ಖುದ್ದು ಇನ್​ಸ್ಟಾಗ್ರಾಮ್​ ಲೈವ್​ಗೆ ಬಂದಿರುವ ಯುವತಿ, ಅಯ್ಯಯ್ಯೋ ಆ ಯುವತಿ ನಾನಲ್ಲ, ನನ್ನ ಮುಖ ಮತ್ತು ಆಕೆಯ ಮುಖವನ್ನೊಮ್ಮೆ ನೋಡಿಬಿಡಿ. ಒಂದೇ ರೀತಿ ಕಾಣಿಸ್ತೀವಾ ಎಂದು ಪ್ರಶ್ನಿಸಿದ್ದಾರೆ. ಆಕೆ ಇಂಗ್ಲಿಷ್​ನಲ್ಲಿ ಮಾತನಾಡುತ್ತಾಳೆ. ನಾನು ಪಿಯುಸಿ ಆಗಿದ್ದಷ್ಟೇ. ಇಂಗ್ಲಿಷ್​ ಏನೂ ಬರಲ್ಲ, ಹೋಗಿ ಹೋಗಿ ಆ ವಿಡಿಯೋದಲ್ಲಿ ಇರುವವಳು ನಾನು ಎಂದು ಹೇಳುತ್ತಿರುವಿರಲ್ಲ, ನಿಮಗೆ ಏನೆನ್ನಬೇಕು ಎಂದು ಪ್ರಶ್ನಿಸಿದ್ದಾರೆ. ಆದರೆ ಇದೇ ವೇಳೆ, ಖುಷಿಯನ್ನೂ ಹಂಚಿಕೊಂಡಿರುವ ಯುವತಿ, ಹೋಗಲಿ ಬಿಡಿ. ಆಕೆ ನಾನು ಆಗದಿದ್ದರೆ ಏನಂತೆ. ನನಗೆ ಸಿಕ್ಕಾಪಟ್ಟೆ ಫಾಲೋವರ್ಸ್​ ಆಗಿಬಿಟ್ಟಿದ್ದಾರೆ. ನನ್ನ ಹಳೆಯ ವಿಡಿಯೋಗಳೆಲ್ಲಾ ಟಾಪ್​ನಲ್ಲಿ ಬರುತ್ತಿವೆ. ಆ ಲವ್​ ಮಾಡ್ತಿರೋ ಹುಡುಗಿ ನಾನಲ್ಲದಿದ್ದರೂ ಆಕೆಯಿಂದ ನನಗೆ ಸಿಕ್ಕಾಪಟ್ಟೆ ಲಾಭ ಆಗ್ತಿದೆ. ನಿಮಗೆಲ್ಲಾ ಥ್ಯಾಂಕ್ಸ್​. ಹೀಗೆಯೇ ನನ್ನನ್ನು ಫಾಲೋ ಮಾಡಿ ನನ್ನ ಎಲ್ಲಾ ವಿಡಿಯೋಗಳನ್ನೂ ನೋಡಿ ಎಂದಿದ್ದಾಳೆ ಈಕೆ!

 

 

 

PREV
Read more Articles on
click me!

Recommended Stories

ಭಾರತೀಯರು 2025ರಲ್ಲಿ ಅತಿಹೆಚ್ಚು ಹುಡುಕಾಡಿದ ಪ್ರವಾಸಿ ಸ್ಥಳ ಯಾವುದು? ಟಾಪ್-10ರಲ್ಲಿ ಥೈಲ್ಯಾಂಡ್, ಮಾಲ್ಡೀವ್ಸ್
ಸಮಂತಾ ಮದುವೆ ದಿನವೇ 'ಆ' ಪೋಸ್ಟ್ ಹಾಕಿ ನರಕಯಾತನೆಗೆ ತುತ್ತಾದ ಮಾಜಿ ಪ್ರಾಣಸ್ನೇಹಿತೆ ಸಾಧನಾ ಸಿಂಗ್!