ಉಕ್ಕಿಹರಿದ ಡೋಣಿ ನದಿ: ಪ್ರವಾಹದಲ್ಲಿ ಸಿಲುಕಿದ್ದ 300 ಕುರಿಗಳು ಪಾರು

By Kannadaprabha News  |  First Published Nov 5, 2019, 12:05 PM IST

ವಿಜಯಪುರದ ಡೊಣಿ ನದಿಯಲ್ಲಿ ಉಂಟಾದ ಪ್ರವಾಹದಲ್ಲಿ ಸಿಲುಕಿದ್ದ 300ಕ್ಕೂ ಹೆಚ್ಚಿನ ಕುರಿಗಳನ್ನು ರಕ್ಷಿಸಲಾಗಿದೆ. ಪ್ರವಾಹದಲ್ಲಿ ಸಿಲುಕಿದ್ದ ಮೂರು ಜನ ಕುರಿಗಾಹಿಗಳನ್ನು ನಿನ್ನೆ ರಾತ್ರಿ 2.30ಕ್ಕೆ ವಿಪತ್ತು ನಿರ್ವಹಣಾ ದಳದ ಸಿಬ್ಬಂದಿ ರಕ್ಷಿಸಿದ್ದಾರೆ.


ವಿಜಯಪುರದ(ನ.05): ಡೊಣಿ ನದಿಯಲ್ಲಿ ಉಂಟಾದ ಪ್ರವಾಹದಲ್ಲಿ ಸಿಲುಕಿದ್ದ 300ಕ್ಕೂ ಹೆಚ್ಚಿನ ಕುರಿಗಳನ್ನು ರಕ್ಷಿಸಲಾಗಿದೆ. ಪ್ರವಾಹದಲ್ಲಿ ಸಿಲುಕಿದ್ದ ಮೂರು ಜನ ಕುರಿಗಾಹಿಗಳನ್ನು ನಿನ್ನೆ ರಾತ್ರಿ 2.30ಕ್ಕೆ ವಿಪತ್ತು ನಿರ್ವಹಣಾ ದಳದ ಸಿಬ್ಬಂದಿ ರಕ್ಷಿಸಿದ್ದಾರೆ.

ವಿಜಯಪುರ ಡೋಣಿ ನದಿ ಪ್ರವಾಹದಲ್ಲಿ ಸಿಕ್ಕಿಹಾಕಿಕೊಂಡಿದ್ದ ಮೂವರು ಕುರಿಗಾಹಿಗಳು, 300 ಕುರಿಗಳು, 4 ನಾಯಿಗಳನ್ನು ರಕ್ಷಿಸಲಾಗಿದೆ. ವಿಪತ್ತು ನಿರ್ವಹಣಾ ಪಡೆ, ಮಿಣಜಗಿ ಗ್ರಾಮಸ್ಥರು, ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ಸೇರಿ ಇಂದು 300 ಕುರಿಗಳು, 4 ನಾಯಿಗಳ ರಕ್ಷಣೆ ಮಾಡಿದ್ದಾರೆ.

Latest Videos

undefined

ಧಾರವಾಡ : ಕೋರ್ಟ್ ಆವರಣದಲ್ಲೇ ಯುವಕನ ಮೇಲೆ ವಕೀಲರ ಹಲ್ಲೆ

ನಿನ್ನೆ ರಾತ್ರಿ 2.30ಕ್ಕೆ ಮೂರೂ ಜನ ಕುರಿಗಾಹಿಗಳನ್ನು ಸುರಕ್ಷಿತವಾಗಿ ರಕ್ಷಿಸಿದ ವಿಪತ್ತು ನಿರ್ವಹಣಾ ದಳದ ಸಿಬ್ಬಂದಿ ಇಂದು 300 ಕುರಿಗಳು, 4 ನಾಯಿಗಳ ರಕ್ಷಣೆ ಮಾಡಿದ್ದಾರೆ. ಮೊಣಕಾಲಿಗೂ ಹೆಚ್ಚಿನ ನೀರು ಹರಿಯುತ್ತಿದ್ದ ಪ್ರದೇಶದಲ್ಲಿ ಜನರು ಹಾಗೂ ಸಿಬ್ಬಂದಿ ಹಗ್ಗ ಬಳಸಿಕೊಂಡು ಕುರಿಗಳನ್ನು ರಕ್ಷಿಸಿ ದಡ ಸೇರಿಸಿದ್ದಾರೆ.

ನಿನ್ನೆ ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಮಿಣಜಗಿ ಬಳಿ ಡೋಣಿ ನದಿಯ ಪ್ರವಾಹದಲ್ಲಿ ಮೂವರು ಕುರಿಗಾಹಿಗಳು ಸಿಕ್ಕಿಹಾಕಿಕೊಂಡಿದ್ದರು. ಕಾಮನಕಲ್ಲ ನಡುಗಡ್ಡೆಯಲ್ಲಿ ಕುರಿಗಾಹಿಗಳು, ಕುರಿಗಳು ಮತ್ತು ನಾಯಿಗಳು ಸಿಲುಕಿದ್ದರು. ಮಿಣಜಗಿ ಗ್ರಾಮದ ರಮೇಶ ಪೂಜಾರಿ(35), ಮಾನಪ್ಪ ರಾಠೋ(50) ಮತ್ತು ಹಣಮಂತ ರಾಠೋಡ(30) ನಿನ್ನೆ ಬೋಟ್ ಮೂಲಕ ರಕ್ಷಣೆ ಮಾಡಲಾಗಿದೆ.

ಇಂದು ಹಗ್ಗ ಕಟ್ಟಿ 300 ಕುರಿಗಳು ಮತ್ತು 4 ನಾಯಿಗಳನ್ನು ರಕ್ಷಿಸಿ ದಡ ಸೇರಿಸಿದ್ದಾರೆ. ಸುದ್ದಿ ತಿಳಿದು ವಿಪತ್ತು ನಿರ್ವಹಣಾ ಪಡೆ, ತಾಳಿಕೋಟೆ ತಹಶೀಲ್ದಾರ್ ಅನಿಲಕುಮಾರ ಢವಳಗಿ, ತಾಳಿಕೋಟೆ ಪಿಎಸ್ಐ ವಸಂತ ಬಂಡಗಾರ,ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ನಿನ್ನೆಯೇ ಸ್ಥಳಕ್ಕೆ ದೌಡಾಯಿಸಿದ್ದರು.

ಬಸವನಬಾಗೇವಾಡಿಯಲ್ಲಿ ಕುಡಿಯಲು ಶುದ್ಧ ನೀರೇ ಸಿಗ್ತಿಲ್ಲ!

click me!