ಅನರ್ಹರಿಗೆ ಬಿಜೆಪಿಯಿಂದ ಟಿಕೆಟ್ ನೀಡುವ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡಲಿದೆ| ಟಿಕೆಟ್ ಗೊಂದಲ ಎಲ್ಲಾ ಕಡೆನೂ ಇದ್ದೇ ಇರುತ್ತೆ| ಮಾಜಿ ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗೋದು ಮರೆತು ಬಿಡಬೇಕು| ಬಸನಗೌಡ ಪಾಟೀಲ ಯತ್ನಾಳ ಅವರು ಮಂತ್ರಿ ನಾನೇನು ಉಪವಾಸ ಇರಲ್ಲ|
ವಿಜಯಪುರ[ನ.13]: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಗ್ಗೆ ಮಾತಾಡುವ ಕಾಂಗ್ರೆಸ್ಸಿಗರೇ ಮೊದಲು ನಿಮ್ಮದು ನೀವು ನೋಡಿಕೊಳ್ಳಿ. ಪ್ರಧಾನಿ ಮೋದಿ ಅವರು ಯಾರಿಗೂ ನಾಮ ಹಾಕಿಲ್ಲ. ನೀವು ದಡ್ಡರು, ನಿಮಗೆ ನೀವೇ ನಾಮ ಹಾಕಿಕೊಂಡಿದ್ದೀರಿ. ಪ್ರಧಾನಿ ಮೋದಿ ಅವರಿಗೆ ನಾಮ ಹಾಕುವ ಧೈರ್ಯ ನಿಮಗೆ ಇದೆಯೇ ಎಂದು ಸಂಸದ ರಮೇಶ ಜಿಗಜಿಣಗಿ ಅವರು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನರ್ಹರಿಗೆ ಬಿಜೆಪಿಯಿಂದ ಟಿಕೆಟ್ ನೀಡುವ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡಲಿದೆ. ಟಿಕೆಟ್ ಗೊಂದಲ ಎಲ್ಲಾ ಕಡೆನೂ ಇದ್ದೇ ಇರುತ್ತೆ ಎಂದು ತಿಳಿಸಿದ್ದಾರೆ. ಮಾಜಿ ಸಿದ್ದರಾಮಯ್ಯ ಅವರು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿ ಆಗೋದು ಮರೆತು ಬಿಡಬೇಕು. ಈ ಹಿಂದೆ ಅಹಿಂದ ನಾಯಕ ಎಂದು ಎಲ್ಲರೂ ಅವಕಾಶ ನೀಡಿದ್ದರು. ಆದ್ರೆ ಇದೀಗ ಆ ಭಾವನೆ ಅವರ ಪಕ್ಷದಲ್ಲೇ ಉಳಿದಿಲ್ಲ. ಆನೆ ಹೋಗುತ್ತೆ, ಹಿಂದೆ ಶ್ವಾನ ಬೆನ್ನು ಹತ್ತುತ್ತೆ. ಹಾಗೆ ಈಗ ಬೀಳುತ್ತೆ ಆಗ ಬೀಳುತ್ತೆ ಅಂತ ಕಾಯ್ತಿತ್ತಂತೆ ಹಾಗಾಗಿದೆ ಕಾಂಗ್ರೆಸ್ ಸ್ಥಿತಿ ಎಂದು ಹೇಳಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಇನ್ನು ಬಿಜೆಪಿ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಮಂತ್ರಿ ನಾನೇನು ಉಪವಾಸ ಇರಲ್ಲ. ಶಾಸಕ ಯತ್ನಾಳ ಮಂತ್ರಿ ಆದ್ರೆ ನಮ್ಮ ಜಿಲ್ಲಾದವರು ಮಂತ್ರಿ ಆಗ್ತಾರೆ ಎಂಬ ಖುಶಿ ನಮಗೂ ಇದೆ. ಯತ್ನಾಳಂದು ನಂದು ಜಗಳಾ ನೀವು ತಲೇಲಿ ಇಟ್ಕೋಬೇಡಿ ಎಂದು ಹೇಳಿದ್ದಾರೆ.