ವಿಜಯಪುರದ ಬಳಿ ಮರಕ್ಕೆ ಬೈಕ್‌ ಡಿಕ್ಕಿ: ಸ್ಥಳದಲ್ಲೇ ಮೂವರ ದುರ್ಮರಣ

Published : Oct 09, 2019, 10:55 AM IST
ವಿಜಯಪುರದ ಬಳಿ ಮರಕ್ಕೆ ಬೈಕ್‌ ಡಿಕ್ಕಿ: ಸ್ಥಳದಲ್ಲೇ ಮೂವರ ದುರ್ಮರಣ

ಸಾರಾಂಶ

ಮರಕ್ಕೆ ಡಿಕ್ಕಿ ಹೊಡೆದ ಬೈಕ್‌| ಮೂವರು ಬೈಕ್‌ ಸವಾರರು ಸ್ಥಳದಲ್ಲೇ ಸಾವು| ಕರ್ನಾಟಕ- ಮಹಾರಾಷ್ಟ್ರ ಗಡಿ ಭಾಗದ ಕುರಗಟಗಿ ಗ್ರಾಮದ ಬಳಿ ಅಪಘಾತ| ಕರ್ನಾಟಕದ ಟಾಕಳಿಯಿಂದ ಮಹಾರಾಷ್ಟ್ರದ ಕುರಗಟಕಿಗೆ ಮೂವರೂ ಬೈಕ್‌ ಮೇಲೆ ತೆರಳುತ್ತಿದ್ದಾಗ ನಿಯಂತ್ರಣ ತಪ್ಪಿ ಬೈಕ್‌ ರಸ್ತೆ ಬದಿ ಮರಕ್ಕೆ ಜೋರಾಗಿ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ|

ವಿಜಯಪುರ(ಅ.9): ಮರಕ್ಕೆ ಬೈಕ್‌ವೊಂದು ಡಿಕ್ಕಿ ಹೊಡೆದ ಪರಿಣಾಮ ಮೂವರು ಬೈಕ್‌ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕರ್ನಾಟಕ- ಮಹಾರಾಷ್ಟ್ರ ಗಡಿ ಭಾಗದ ಕುರಗಟಗಿ ಗ್ರಾಮದ ಬಳಿ ಸೋಮವಾರ ಸಂಭವಿಸಿದೆ.

ಮೃತರನ್ನು ಮಹಾರಾಷ್ಟ್ರದ ಕುರಗಟಕಿ ಗ್ರಾಮದ ನಿವಾಸಿಗಳಾದ ಮಹೇಶ ನರೋಟೆ (22), ಅಂಬಣ್ಣ ಹನಮಾನೆ (25) ಹಾಗೂ ಕರ್ನಾಟಕದ ಇಂಡಿ ತಾಲೂಕಿನ ಲೋಣಿ ಗ್ರಾಮದ ರಾಜಕುಮಾರ ಪೂಜಾರಿ (20) ಎಂದು ಗುರುತಿಸಲಾಗಿದೆ. 
ಕರ್ನಾಟಕದ ಟಾಕಳಿಯಿಂದ ಮಹಾರಾಷ್ಟ್ರದ ಕುರಗಟಕಿಗೆ ಮೂವರೂ ಬೈಕ್‌ ಮೇಲೆ ತೆರಳುತ್ತಿದ್ದಾಗ ನಿಯಂತ್ರಣ ತಪ್ಪಿ ಬೈಕ್‌ ರಸ್ತೆ ಬದಿ ಮರಕ್ಕೆ ಜೋರಾಗಿ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಮರಕ್ಕೆ ಬೈಕ್‌ ಕ್ಕಿ ಹೊಡೆದ ರಭಸಕ್ಕೆ  ಮೂವರು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಸಂಬಂಧ ಮಹಾರಾಷ್ಟ್ರದ ದಕ್ಷಿಣ ಸೊಲ್ಲಾಪುರ ತಾಲೂಕಿನ ಮಂದ್ರೂಪ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

PREV
click me!

Recommended Stories

ಬ್ರೇಕ್‌ಫಾಸ್ಟ್ ರಾಜಕೀಯ.. ಸಿಎಂ, ಡಿಸಿಎಂಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ: ಸಚಿವ ಶಿವಾನಂದ ಪಾಟೀಲ
ವಿಜಯಪುರ: ಟ್ಯೂಷನ್ ಕ್ಲಾಸ್ ಮುಗಿಸಿ ಮನೆಗೆ ತೆರಳುತ್ತಿದ್ದ ಬಾಲಕನ ಮೇಲೆ ಬೀದಿ ನಾಯಿ ಅಟ್ಯಾಕ್!