ಹಳೆಯ ಸಂಪ್ರದಾಯಗಳಿಗೆ ಬ್ರೇಕ್ ಹಾಕಿದ ಮುಂಬೈ ಇಂಡಿಯನ್ಸ್‌..!

ಹಳೆಯ ಸಂಪ್ರದಾಯಗಳಿಗೆ ಬ್ರೇಕ್ ಹಾಕಿದ ಮುಂಬೈ ಇಂಡಿಯನ್ಸ್‌..!

Suvarna News   | Asianet News
Published : Nov 11, 2020, 05:59 PM IST

2011ರ ಬಳಿಕ ಸತತ ಎರಡು ವರ್ಷ ಐಪಿಎಲ್ ಟ್ರೋಫಿ ಗೆದ್ದ ತಂಡ ಎನ್ನುವ ಕೀರ್ತಿಗೆ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್‌ ಪಾತ್ರವಾಗಿದೆ. ಈ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್‌ ಕೂಡಾ ಸತತ ಎರಡು ಆವೃತ್ತಿಗಳಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. 

ಬೆಂಗಳೂರು(ನ.11): 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಮುಂಬೈ ಇಂಡಿಯನ್ಸ್‌ ತಂಡ 5ನೇ ಐಪಿಎಲ್ ಟ್ರೋಫಿ ಜಯಿಸಿದ ಸಾಧನೆ ಮಾಡಿದೆ.

ಹೌದು, 2011ರ ಬಳಿಕ ಸತತ ಎರಡು ವರ್ಷ ಐಪಿಎಲ್ ಟ್ರೋಫಿ ಗೆದ್ದ ತಂಡ ಎನ್ನುವ ಕೀರ್ತಿಗೆ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್‌ ಪಾತ್ರವಾಗಿದೆ. ಈ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್‌ ಕೂಡಾ ಸತತ ಎರಡು ಆವೃತ್ತಿಗಳಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. 

ಇದರ ಜತೆ ಮುಂಬೈ ಇಂಡಿಯನ್ಸ್ ಹಳೆಯ ಸಂಪ್ರದಾಯಗಳಿಗೂ ಬ್ರೇಕ್‌ ಹಾಕಿದೆ. ರೋಹಿತ್ ಶರ್ಮಾ ಫೈನಲ್‌ ಪಂದ್ಯದಲ್ಲಿ ಕೈಕೊಡುತ್ತಾರೆ ಎನ್ನುವ ಅಪವಾದವನ್ನು ಈ ಬಾರಿ ಹಿಟ್‌ಮ್ಯಾನ್ ಸುಳ್ಳು ಮಾಡಿದ್ದಾರೆ. ಐಪಿಎಲ್ ಫೈನಲ್ ಪಂದ್ಯ ಹೇಗಿತ್ತು ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.