ಜಿಎಸ್​ಟಿ 2.0! ಯಾವುದು ಅಗ್ಗ? ಏನು ದುಬಾರಿ? ವರ್ಷಕ್ಕೆ 40 ಸಾವಿರ ಕೋಟಿ ನಷ್ಟ! ಪರಿಹಾರ ಏನು?

ಜಿಎಸ್​ಟಿ 2.0! ಯಾವುದು ಅಗ್ಗ? ಏನು ದುಬಾರಿ? ವರ್ಷಕ್ಕೆ 40 ಸಾವಿರ ಕೋಟಿ ನಷ್ಟ! ಪರಿಹಾರ ಏನು?

Published : Sep 06, 2025, 03:59 PM IST
ಜಿಎಸ್​ಟಿ 2.0 ಜಾರಿಯ ಹಿಂದಿನ ಲೆಕ್ಕಾಚಾರವೇನು? ಸರ್ಕಾರಕ್ಕೆ ನಷ್ಟವಾಗುತ್ತಿದ್ದರೂ ಈ ತೆರಿಗೆ ಕಡಿತ ಏಕೆ? ಈ ಸ್ಟೋರಿ ನೋಡಿದ್ರೆ, ನೀವೇ ಉತ್ತರ ಕೊಡ್ತೀರ.

ಇದು ಅಕ್ಷರಶಃ ಮಾಸ್ಟರ್ ಪ್ಲಾನ್. ಆದ್ರೆ ಈ ಪ್ಲಾನ್ ಹುಟ್ಟಿಕೊಂಡಿದ್ದು ಹೋದ ವಾರಾನೋ, ಕಳೆದ ತಿಂಗಳೋ ಅಲ್ಲ.. ಜಿಎಸ್​ಟಿ ಅನ್ನೋ ಅದ್ದೂರಿ ಮಂತ್ರದಂಡ ಯಾವತ್ತು ಜನ್ಮ ಪಡೀತೋ ಅವತ್ತೇ. ದೇಶದ ಭಂಡಾರ ಯಾವಾಗ ಏನಾಗ್ಬೇಕು, ಹೇಗೆ ತುಂಬಬೇಕು ಅನ್ನೋದರ ಭವಿಷ್ಯ ದರ್ಶನ ಮಾಡಿಯೇ, ಅವತ್ತು ಒಂದು ನಿಲುವು ತಳೆದಿತ್ತು ಮೋದಿ ಪಡೆ. ಈಗದು ಅಸ್ತಿತ್ವಕ್ಕೆ ಬಂದಿದೆ. ಹಾಗಾದ್ರೆ, ಅದರ ಪರಿಣಾಮ ನಮ್ಮ ನಿಮ್ಮ ಮೇಲೆ ಹೇಗಾಗುತ್ತೆ? ಯಾವುದು ಸಸ್ತಾ? ಏನೇನು ದುಬಾರಿ? ನಮ್ಮ ನಿಮ್ಮ ಜೇಬಲ್ಲಿ ಉಳಿಯೋದೆಷ್ಟು ರೊಕ್ಕ? ಅದೆಲ್ಲದರ ಇನ್ ಡೆಪ್ತ್ ಡೀಟೇಲ್ ಇಲ್ಲಿದೆ ನೋಡಿ.

ನಿಜ, ಹಬ್ಬ ಧಾಮ್ ಧೂಮ್ ಅನ್ನೋ ಹಾಗೆ ನಡೆಯುತ್ತೆ.. ಮನೆ ಹೊಸ ಹೊಸ ವಸ್ತುಗಳಿಂದ ಝಗಮಗ ಅನ್ನುತ್ತೆ, ಇನ್ಮುಂದೆ ನಮ್ಮ ಹಣ ಕೂಡ ಅಷ್ಟೋ ಇಷ್ಟೋ ಸೇವ್ ಆಗುತ್ತೆ. ಸೋ,  ನಮಗೇನೋ ಲಾಭ ನಿಜ.. ಆದ್ರೆ ದೇಶದ ಬೊಕ್ಕಸಕ್ಕೆ?  ಈ ತೆರಿಗೆ ಕಡಿತದಿಂದ ಸರ್ಕಾರಕ್ಕೆ ನಷ್ಟವೂ ಆಗುತ್ತೆ ವೀಕ್ಷಕರೇ. ಆದ್ರೆ ಆ ನಷ್ಟ ಲೆಕ್ಕಾಚಾರದ ಹಿಂದೊಂದು ನಿಗೂಢ ರಹಸ್ಯ ಅಡಗಿದೆ. ಅದೇನು ಅನ್ನೋದರ ಕಂಪ್ಲೀಟ್ ರಿಪೋರ್ಟ್ ನಿಮ್ಮ ಮುಂದೆ ತೆರೆದಿಡ್ತೀವಿ. ಅರ್ಥಕ್ರಾಂತಿಯಂತೆ ಭಾಸವಾಗ್ತಾ ಇರೋ, ಈ ಜಿಎಸ್ಟಿ 2.0 ಹೊಸ ಚರಿತ್ರೆ ಸೃಷ್ಟಿಸೋಕಂತಲೇ, ಎಂಟ್ರಿ ಕೊಡ್ತಾ ಇದೆ. ಆದ್ರೆ ಈ ತೆರಿಗೆ ಕಡಿತದಿಂದ ಸರ್ಕಾರಕ್ಕೆ ನಷ್ಟವೂ ಆಗುತ್ತೆ. ಆದ್ರೆ  ಈ ನಷ್ಟದ ಬಗ್ಗೆ, ಸರ್ಕಾರ ಹೇಳೋ ಮಾತೇ ಬೇರೆ.

ಆ ಅನುಮಾನ ಮತ್ಯಾವುದೂ ಅಲ್ಲ.. ಜಿಎಸ್​ಟಿ 2.0 ಜಾರಿಗೆ ಬಂದಿದೆ. ಆದ್ರೆ ಈಗ್ಲೇ ಯಾಕೆ ಜಾರಿಗ್ ಬಂತು? ಇದೇ ಹೊತ್ತಲ್ಲೇ ಯಾಕೆ ಸರ್ಕಾರ ಈ ನಿರ್ಧಾರವನ್ನ  ತಗೊಂಡಿದೆ? ಇದರ ಹಿಂದೆಯೂ ಒಂದು ಲೆಕ್ಕಾಚಾರ ಇದ್ಯಾ? ಹೌದು.. ಇದೆ.. ಒಂದು ಚಾಣಾಕ್ಷ ತಂತ್ರಗಾರಿಕೆಯೇ ಅಡಿದೆ. ಭಾರತದಲ್ಲಿ ತೆರಿಗೆ ಸುಧಾರಣೆ ಅಸ್ತಿತ್ವಕ್ಕೆ ಬಂದಿದೆ.  ಭಾರತ ಅನ್ನೋ ಬೃಹತ್ ರಾಷ್ಟ್ರದಲ್ಲಿ ಸಂಚಲನಾತ್ಮಕ ಸಂಗತಿ ಸಂಭವಿಸಿದೆ. ಇದೇ ಹೊತ್ತಲ್ಲೇ, ಹೊರಗಿನಿಂದಲೂ ಒಂದು ಮೇಲಾಟ ನಡೆದಿತ್ತು.. ಅದರ ಪರಿಣಾಮ ಇದರ ಮೇಲೆ ಉಂಟಾಗಿದ್ಯಾ? ಈ ಸ್ಟೋರಿ ನೋಡಿದ್ರೆ, ನೀವೇ ಉತ್ತರ ಕೊಡ್ತೀರ. ಭಾರತ ಇಟ್ಟ ಒಂದು ಹೆಜ್ಜೆ, ಎಂಥಾ ಇತಿಹಾಸ ಬರೆಯೋಕೆ ಹೊರಟಿದೆ ಅಂತ.. ಇದಾಗಿತ್ತು ಇವತ್ತಿನ ಸುವರ್ಣ ಫೋಕಸ್.. ನಮಸ್ಕಾರ..

Read more