ಶ್ರೀಮಂತರ ಮನೆಯಲ್ಲಿರುತ್ತೆ ಈ ಸೀಕ್ರೆಟ್ ವಸ್ತು… ಅದಕ್ಕೆ ಅವರು ಮುಟ್ಟಿದ್ದೆಲ್ಲಾ ಚಿನ್ನ ಆಗೋದು!

Published : May 30, 2026, 09:17 PM IST
Rich People

ಸಾರಾಂಶ

Feng Shui Tips: ಫೆಂಗ್ ಶೂಯಿ ಪ್ರಕಾರ, ಮನೆಯಲ್ಲಿ ಇರಿಸಲಾಗಿರುವ ಕೆಲವು ಅಲಂಕಾರಿಕ ವಸ್ತುಗಳು ಸಂಪತ್ತು ಮತ್ತು ಸಮೃದ್ಧಿಯನ್ನು ಹೆಚ್ಚಿಸಬಹುದು. ಕೇವಲ ಪ್ರದರ್ಶನದ ವಸ್ತುಗಳಂತೆ ಕಾಣುವ ಈ ವಸ್ತುಗಳು ನಿಮ್ಮ ತಿಜೋರಿಯನ್ನು ಹಣದಿಂದ ತುಂಬಿಸುವ ಸಾಮರ್ಥ್ಯವನ್ನು ಹೊಂದಿವೆ. 

ನಿಮ್ಮ ಅದೃಷ್ಟ ಬದಲಾಯಿಸುವ ಫೆಂಗ್ ಶೂಯಿ ಟಿಪ್ಸ್

ವಾಸ್ತು ಶಾಸ್ತ್ರದಂತೆಯೇ, ಚೀನಾದ ಫೆಂಗ್ ಶೂಯಿ ಜನರಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿದೆ. ಫೆಂಗ್ ಶೂಯಿಯಲ್ಲಿ ತಿಳಿಸಿದಂತೆ ಕೆಲವು ವಸ್ತುಗಳನ್ನು ಮನೆಯಲ್ಲಿ ಇರಿಸಿದರೆ, ಅದರಿಮ್ದ ಸಂತೋಷ, ಸಮೃದ್ಧಿ ಮತ್ತು ಯೋಗಕ್ಷೇಮ ಸದಾ ಮನೆಯಲ್ಲಿ ನೆಲೆಯಾಗುತ್ತದೆ. ಇಂದು, ಶ್ರೀಮಂತರ ಮನೆಗಳಲ್ಲಿ ಯಾವಾಗಲೂ ಕಂಡುಬರುವಂತಹ ಒಂದು ಫೆಂಗ್ ಶೂಯಿ ವಸ್ತುವಿನ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಈ ಅಲಂಕಾರಿಕ ವಸ್ತು ಮನೆಯಲ್ಲಿದ್ರೇ ಸಾಕು ಹಣ ಮತ್ತು ಸಂಪತ್ತನ್ನು ಆಕರ್ಷಿಸುವ ಆಯಸ್ಕಾಂತದಂತೆ ಕಾರ್ಯನಿರ್ವಹಿಸುತ್ತದೆ.

ಈ ವಸ್ತುವನ್ನು "ಮನಿ ಮ್ಯಾಗ್ನೆಟ್" ಎಂದು ಕರೆಯಲಾಗುತ್ತದೆ

ಸಾಮಾನ್ಯವಾಗಿ, ಆನೆಯ ಪ್ರತಿಮೆಯು ಶ್ರೀಮಂತರ ಮನೆಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ದೃಶ್ಯವಾಗಿದೆ. ಆದರೆ, ಇದು ಕೇವಲ ಅಲಂಕಾರಿಕ ವಸ್ತು ಅಲ್ಲ. ಫೆಂಗ್ ಶೂಯಿ ಪ್ರಕಾರ, ಆನೆಯ ಪ್ರತಿಮೆಯು ಸಂಪತ್ತನ್ನು ಆಕರ್ಷಿಸುತ್ತದೆ ಮತ್ತು ಮನೆಯಲ್ಲಿ ಇದನ್ನು ಇಡುವುದರಿಂದ ಆರ್ಥಿಕ ಲಾಭದ ಮಾರ್ಗಗಳು ತೆರೆಯುತ್ತವೆ. ಆದರೆ, ಆನೆಯ ಪ್ರತಿಮೆಯನ್ನು ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ದಿಕ್ಕಿನಲ್ಲಿ ಇರಿಸಿದಾಗ ಮಾತ್ರ ಈ ಪರಿಣಾಮವು ಅರಿವಾಗುತ್ತದೆ.

ಯಾವ ರೀತಿಯ ಆನೆಯ ಪ್ರತಿಮೆಯನ್ನು ಮನೆಯಲ್ಲಿಡಬೇಕು?

ಫೆಂಗ್ ಶೂಯಿ ಪ್ರಕಾರ, ಸೊಂಡಿಲು ಮೇಲಕ್ಕೆ ಮುಖ ಮಾಡಿರುವಂತಹ ಆನೆಯ ಪ್ರತಿಮೆಯನ್ನು ಮನೆಯಲ್ಲಿ ಇಡಬೇಕು. ಅಂತಹ ಪ್ರತಿಮೆಯನ್ನು ಮನೆಯಲ್ಲಿ ಇಡುವುದರಿಂದ ಸಕಾರಾತ್ಮಕತೆ ಬರುತ್ತದೆ ಮತ್ತು ಶಾಂತಿ ಮತ್ತು ಸಾಮರಸ್ಯದ ವಾತಾವರಣ ಬೆಳೆಯುತ್ತದೆ ಎನ್ನುವ ನಂಬಿಕೆ ಇದೆ.

ಆನೆಯ ಪ್ರತಿಮೆಯನ್ನು ಯಾವ ದಿಕ್ಕಿನಲ್ಲಿ ಇಡುವುದು ಶುಭ?

ಫೆಂಗ್ ಶೂಯಿ ಪ್ರಕಾರ, ಆನೆಯ ಪ್ರತಿಮೆಯನ್ನು ಯಾವಾಗಲೂ ಮನೆಯ ಮುಖ್ಯ ದ್ವಾರದಲ್ಲಿ ಇಡಬೇಕು. ಇದು ಮನೆಗೆ ಸಕಾರಾತ್ಮಕತೆಯನ್ನು ಆಹ್ವಾನಿಸುತ್ತದೆ ಮತ್ತು ನಕಾರಾತ್ಮಕತೆಯನ್ನು ದೂರವಿಡುತ್ತದೆ. ಇದರಿಂದ ಮನೆಯಲ್ಲಿ ನೀವು ಯಾವುದೇ ಕೆಲಸ ಮಾಡಿದರೂ ಸಹ ಅದರಿಂದ ಯಶಸ್ಸು ಸಿಗುತ್ತದೆ.

ಸಂಬಂಧಗಳನ್ನು ಬಲಪಡಿಸುವ ಪ್ರತಿಮೆ

ತಾಯಿ ಮತ್ತು ಮಗುವಿನ ನಡುವಿನ ಬಾಂಧವ್ಯವನ್ನು ಬಲಪಡಿಸಲು ನೀವು ಬಯಸಿದರೆ, ನಿಮ್ಮ ಮನೆಯಲ್ಲಿ ತಾಯಿ ಆನೆ ಮತ್ತು ಮರಿ ಆನೆಯನ್ನು ಚಿತ್ರಿಸುವ ಪ್ರತಿಮೆಯನ್ನು ಇಡುವುದು ಶುಭವೆಂದು ಪರಿಗಣಿಸಲಾಗುತ್ತದೆ. ಇದಲ್ಲದೆ, ನೀವು ನಿಮ್ಮ ವೈವಾಹಿಕ ಜೀವನದಲ್ಲಿ ಸಂತೋಷವನ್ನು ಬಯಸಿದರೆ, ನೀವು ಖಂಡಿತವಾಗಿಯೂ ನಿಮ್ಮ ಮಲಗುವ ಕೋಣೆಯಲ್ಲಿ ಒಂದು ಜೋಡಿ ಆನೆಗಳ ಪ್ರತಿಮೆ ಅಥವಾ ಚಿತ್ರವನ್ನು ಇಡಬೇಕು. ಇದು ಗಂಡ-ಹೆಂಡತಿಯ ಸಂಬಂಧದಲ್ಲಿ ಬರಬಹುದಾದ ಯಾವುದೇ ಕಹಿಯನ್ನು ಪರಿಹರಿಸಲು ಸಹಾಯ ಮಾಡುತ್ತದೆ ಮತ್ತು ಅವರ ನಡುವಿನ ಬಾಂಧವ್ಯವನ್ನು ಬಲಪಡಿಸಲು ಸಹಾಯ ಮಾಡುತ್ತದೆ.

 

PREV
Read more Articles on
click me!

Recommended Stories

Friday Vastu: ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಲು ಶುಕ್ರವಾರ ಸಂಜೆ ಈ ಕೆಲಸ ಮಾಡಿ
ಆರೋಗ್ಯಕ್ಕೆ ಅಮೃತ, ಗಂಡ-ಹೆಂಡ್ತಿ ಪಾಲಿಗೆ ವಿಲನ್; ಈ ಗಿಡ ಮನೆಯಲ್ಲಿ ಬೆಳೆಸದಿದ್ರೇನೇ ಒಳ್ಳೇದಂತೆ!