
ಮನೆಯ ಛಾವಣಿಯ ಮೇಲೆಯೋ, ಮನೆಯ ಹಂಚಿನ ಮೇಲೆಯೋ ಕಾಗೆ ಬಂದು ಕುಳಿತು, ಕೂಗುತ್ತಿದ್ದರೆ, ಅದು ಅತಿಥಿಗಳ ಆಗಮನವನ್ನು ಸೂಚಿಸುತ್ತದೆ ಎನ್ನುವ ಕಥೆಯನ್ನು ನಾವು ಬಾಲ್ಯದಿಂದಲೂ ಕೇಳುತ್ತಿದ್ದೇವೆ, ಆದರೆ ಛಾವಣಿಯ ಮೇಲೆ ಕಾಗೆ ಕೂಗುವುದು ಕೇವಲ ಅತಿಥಿಗಳ ಆಗಮನದ ಸೂಚನೆ ಅಲ್ಲ. ಇದು ಅನೇಕ ಭವಿಷ್ಯದ ಘಟನೆಗಳ ಬಗ್ಗೆಯೂ ಸುಳಿವು ನೀಡುತ್ತದೆ. ಕಾಗೆ ಮನೆಯ ವಿಭಿನ್ನ ದಿಕ್ಕುಗಳಲ್ಲಿ ಕುಳಿತು ಕೂಗುವುದು ವಿಭಿನ್ನ ವಿಷಯಗಳನ್ನು ಸೂಚಿಸುತ್ತದೆ. ಇದರ ರಹಸ್ಯವು ಜ್ಯೋತಿಷ್ಯದ ಶಕುನ ಶಾಸ್ತ್ರದಲ್ಲಿ ಉಲ್ಲೇಖವಾಗಿದೆ. ಕಾಗೆಯನ್ನು ನಾವು ಸಾಮಾನ್ಯವಾಗಿ ನಮ್ಮ ಪೂರ್ವಜರಿಗೆ ಹೋಲಿಕೆ ಮಾಡುತ್ತೇವೆ. ಪೂರ್ವಜರ ಆಶೀರ್ವಾದ ಪಡೆಯಲು ತಿಥಿ, ಶ್ರಾದ್ಧ, ತರ್ಪಣ ಮಾಡುವ ಸಮಯದಲ್ಲಿ ಕಾಗೆಗಳಿಗೆ ಆಹಾರವನ್ನು ನೀಡಲಾಗುತ್ತದೆ. ಕೆಲವೊಮ್ಮೆ, ಕಾಗೆಯ ಕೂಗು ಸಂಪತ್ತಿನ ಆಗಮನವನ್ನು ಸೂಚಿಸುತ್ತದೆ, ಇನ್ನೂ ಕೆಲವೊಮ್ಮೆ, ಅನಿರೀಕ್ಷಿತ ತೊಂದರೆಗಳ ಸೂಚನೆಯನ್ನೂ ನೀಡುತ್ತದೆ. ಈಗ ಯಾವ ದಿಕ್ಕಿನಲ್ಲಿ ಕಾಗೆ ಕೂಗಿದರೆ ಅದರ ಅರ್ಥ ಏನು ಎನ್ನುವುದನ್ನು ತಿಳಿಯೋಣ.
ಕಾಗೆ ನಿಮ್ಮ ಛಾವಣಿಯ ಮೇಲೆ ಕುಳಿತು ಪೂರ್ವದಲ್ಲಿ ಕೂಗಿದರೆ, ನಿಮಗೆ ಒಳ್ಳೆಯ ಸುದ್ದಿ ಸಿಗಬಹುದು. ಆ ರೀತಿಯಾಗಿ ಕೂಗಿದ್ರೆ ನಿಮ್ಮ ಆಸೆ ಈಡೇರಬಹುದು. ಇದು ಮಹಿಳೆಯಿಂದ ಸಂತೋಷವನ್ನು ಸೂಚಿಸುತ್ತದೆ. ಇದು ವಿಜಯವನ್ನು ಸಹ ಸೂಚಿಸುತ್ತದೆ. ಆಗ್ನೇಯ ದಿಕ್ಕಿನಲ್ಲಿ ಕುಳಿತು ಕಾಗೆ ಕೂಗುವುದು ಸಹ ಶುಭ ಸೂಚನೆಯನ್ನು ನೀಡುತ್ತದೆ. ಆದ್ದರಿಂದ, ಕಾಗೆ ನಿಮ್ಮ ಛಾವಣಿಯ ಮೇಲೆ ಕುಳಿತು ಈ ಎರಡೂ ದಿಕ್ಕಿನಲ್ಲಿ ಕೂಗಿದರೆ, ಒಳ್ಳೆಯ ದಿನಗಳು ಬರಬಹುದು ಎಂದು ಸೂಚಿಸುತ್ತದೆ.
ಮನೆಯ ಛಾವಣಿಯ ಮೇಲೆ ಕಾಗೆ ಪಶ್ಚಿಮಕ್ಕೆ ಮುಖ ಮಾಡಿ ಕುಳಿತು ಕೂಗುತ್ತಿದ್ದರೆ, ಮಳೆ ಸನ್ನಿಹಿತವಾಗಿದೆ ಎಂದರ್ಥ. ಇದು ಅತಿಥಿಗಳ ಆಗಮನವನ್ನು ಸಹ ಸೂಚಿಸುತ್ತದೆ. ಕಾಗೆ ದಕ್ಷಿಣದಲ್ಲಿ ಕುಳಿತು ಕೂಗುತ್ತಿದ್ದರೆ, ಅದು ಅತ್ಯಂತ ಅಶುಭ. ಹಣ ನಷ್ಟವಾಗುವ ಸಾಧ್ಯತೆಯಿದೆ. ನೀವು ಪ್ರಮುಖ ಕೆಲಸದ ಮೇಲೆ ಹೊರಗೆ ಹೋಗುತ್ತಿದ್ದರೆ, ನಿಮ್ಮ ಕೆಲಸಕ್ಕೆ ಅಡ್ಡಿಯಾಗಬಹುದು. ಇದು ಮನೆಯಲ್ಲಿ ಹೆಂಡತಿಯೊಂದಿಗೆ ಘರ್ಷಣೆಯಾಗುವ ಸೂಚನೆಯನ್ನೂ ನೀಡುತ್ತದೆ. ನೈರುತ್ಯ ಮೂಲೆಯಲ್ಲಿ ಕಾಗೆ ಕೂಗುವುದನ್ನು ಜ್ಯೋತಿಷ್ಯದಲ್ಲಿ ಅಶುಭವೆಂದು ಪರಿಗಣಿಸಲಾಗುತ್ತದೆ, ಇದು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುವ ಸೂಚನೆಯಾಗಿದೆ.