ದಾಂಡೇಲಿ-ಅಳ್ನಾವರ- ಧಾರವಾಡ ಪ್ರಯಾಣಿಕರ ರೈಲು ಪುನರಾರಂಭ|ಎರಡು ದಶಕಗಳ ಹಿಂದೆ ರೈಲ್ವೆ ಹಳಿ ಮೀಟರ್ ಗೇಜ್‌ನಿಂದ ಬ್ರಾಡ್ ಗೇಜ್‌ಗೆ ಪರಿವರ್ತನೆ ಸಂದರ್ಭದಲ್ಲಿ ಪ್ರಯಾಣಿಕರ ರೈಲು ನಿಂತಿತ್ತು|ಪ್ರಯಾಣಿಕರ ರೈಲಿಗೆ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಚಾಲನೆ|
ದಾಂಡೇಲಿ[ನ.3]: ಎರಡು ದಶಕಗಳಿಂದ ನಿಂತು ಹೋಗಿದ್ದ ದಾಂಡೇಲಿ-ಅಳ್ನಾವರ- ಧಾರವಾಡ ಪ್ರಯಾಣಿಕರ ರೈಲು ಭಾನುವಾರದಿಂದ ಪುನರಾರಂಭ ಮಾಡಲಿದೆ. ಇದರಿಂದ ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಮಾಜಿ ಶಾಸಕ ಸುನೀಲ ಹೆಗಡೆ ಅವರು ಹೇಳಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು, ಎರಡು ದಶಕಗಳ ಹಿಂದೆ ನಿಂತು ಹೋಗಿದ್ದ ದಾಂಡೇಲಿ-ಅಳ್ನಾವರ-ಧಾರವಾಡ ಪ್ರಯಾಣಿಕರ ರೈಲಿಗೆ ಭಾನುವಾರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಚಾಲನೆ ನೀಡುವರು. ಎರಡು ದಶಕಗಳ ಹಿಂದೆ ರೈಲ್ವೆ ಹಳಿ ಮೀಟರ್ ಗೇಜ್‌ನಿಂದ ಬ್ರಾಡ್ ಗೇಜ್‌ಗೆ ಪರಿವರ್ತನೆ ಸಂದರ್ಭದಲ್ಲಿ ಪ್ರಯಾಣಿಕರ ರೈಲು ನಿಂತಿತ್ತು ಎಂದರು.
undefined
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ರೈಲು ಪುನಾರಾರಂಭ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು ಎಂದು ತಿಳಿಸಿದರು.
ಈ ರೈಲು ಸೋಮವಾರ ನ4 ರಿಂದ ಪ್ರತಿದಿನ 11.30 ಕ್ಕೆ ಧಾರವಾಡದಿಂದ ಹೊರಟು ಮಧ್ಯಾಹ್ನ 1.00 ಗಂಟೆಗೆ ದಾಂಡೇಲಿಗೆ ಬರಲಿದೆ. ಬಳಿಕ ಮಧ್ಯಾಹ್ನ 3 ಗಂಟೆಗೆ ದಾಂಡೇಲಿಯಿಂದ ಹೊರಟು ಮಧ್ಯಾಹ್ನ 4.40 ಕ್ಕೆ ಧಾರವಾಡಕ್ಕೆ ಬರಲಿದೆ. ಅಳ್ನಾವರ, ಕುಂಬಾರಗಣವಿ, ಮುಗದ, ಕ್ಯಾರಕೊಪ್ಪದಲ್ಲಿ ರೈಲು ನಿಲುಗಡೆ ಆಗಲಿದೆ. ಈ ವೇಳೆ ಬಿಜೆಪಿ ದಾಂಡೇಲಿ ಘಟಕದ ಅಧ್ಯಕ್ಷ ಬಸವರಾಜಕಲ ಶೆಟ್ಟಿ, ಮುಖಂಡರಾದ ಅಶೋಕ ಪಾಟೀಲ, ಸುಧಾಕರ ರಡ್ಡಿ, ರಫಿಕ್ ಹುದ್ದಾರೆ, ಟಿ.ಎಸ್.ಬಾಲಮನಿ, ಮಂಜುನಾಥ ಪಾಟೀಲ, ಗುರುಮಠಪತಿ, ಚಂದ್ರಕಾಂತ ಕ್ಷೀರಸಾಗರ,ರವೀಂದ್ರ ಶಾ., ರಿಯಾಜ್ ಖಾನ್, ಅನೀಲಮುತ್ನಾಳ, ಹಳಿಯಾಳ ಘಟಕಾಧ್ಯಕ್ಷ ಘಟಕಾಂಬಳೆ, ನಗರಸಭಾ ಸದಸ್ಯರಾದ ರಮಾರವೀಂದ್ರ, ಅನ್ನಪೂರ್ಣ ಬಾಗಲಕೋಟ, ವಿಷ್ಣು ವಾಜ್ವೆ, ದಶರಥ ಬಂಡಿವಡ್ಡರ, ವಿಜಯಕೋಳೆಕರ, ಪದ್ಮಾ ಜನ್ನು ಮುಂತಾದವರು ಉಪಸ್ಥಿತರಿದ್ದರು.