ಭಟ್ಕಳ: 46 ಕಿಮೀ ಸಮುದ್ರ ಮಧ್ಯದಲ್ಲಿ ಸಿನಿಮೀಯ ಸಾಹಸ, 25 ಮೀನುಗಾರರ ರಕ್ಷಣೆ

By Web DeskFirst Published Oct 11, 2019, 11:55 PM IST
Highlights

ಮುಳುಗುತ್ತಿದ್ದ ಬೋಟ್ ರಕ್ಷಣೆ/ ಸಿನಿಮೀಯ ರೀತಿಯ ಸಾಹಸ/ ಭಟ್ಕಳ ಸಮುದ್ರ ತೀರದಲ್ಲಿ ಘಟನೆ/ 25 ಮೀನುಗಾರರ ರಕ್ಷಣೆ

ಕಾರವಾರ[ಅ. 11]  ಸಮುದ್ರದಲ್ಲಿ ಮುಳುಗಡೆಯಾಗುತ್ತಿದ್ದ  ಬೋಟ್ ನ್ನು ಸಿನಿಮೀಯ ರೀತಿ ಸಾಹಸ ಮಾಡಿ ರಕ್ಷಣೆ ಮಾಡಲಾಗಿದೆ. 

ಎಂಟು ಬೋಟ್ ಗಳ ಸಹಾಯದಿಂದ ರಕ್ಷಣೆ ಮಾಡಲಾಗಿದೆ. ಭಟ್ಕಳ ಬಂದರನಿಂದ 25 ನಾಟಿಕಲ್ ‌ಮೈಲು ದೂರದಲ್ಲಿ ಘಟನೆ ನಡೆದಿದೆ. ಮೂಕಾಂಬಿಕಾ ಹೆಸರಿನ ಬೋಟ್ ನಲ್ಲಿದ್ದ 25ಮೀನುಗಾರರ ರಕ್ಷಣೆ ಮಾಡಲಾಗಿದೆ.

ಮುಳುಗುತ್ತಿದ್ದ ಬೋಟ್ ಕುಂದಾಪುರ ಮೂಲದ ವ್ಯಕ್ತಿಯೊಬ್ಬರಿಗೆ ಸೇರಿದ್ದು ಎನ್ನಲಾಗಿದೆ. ಬೋಟ್ ತಳಭಾಗದಲ್ಲಿ ರಂಧ್ರ ಕಾಣಿಸಿಕೊಂಡಿದೆ. ಬೊಟ್ ಅಪಾಯಕ್ಕೆ ಸಿಲುಕಿದ್ದನ್ನು ಪಕ್ಕದ ದೋಣಿಯಲ್ಲಿದ್ದವರು ಗಮನಿಸಿದ್ದಾರೆ. ಇದಾದ ಮೇಲೆ ಮಾಹಿತಿ ರವಾನೆ ಮಾಡಿದ್ದಾರೆ. ನಂತರ ರಕ್ಷಣಾ ಕೆಲಸ ಆರಂಭವಾಗಿದೆ.

ಸುವರ್ಣ ತ್ರಿಭುಜ  ಬೋಟ್ ನಾಪತ್ತೆಯಾಗಿದ್ದು ಕೊನೆಗೂ ಮೀನುಗಾರರ ಪತ್ತೆ ಆಗೆ ಇರಲಿಲ್ಲ. ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ್ದ ಈ ಬೋಟ್ ರಕ್ಷಣೆ ಮಾಡಿದವರಿಗೆ ಒಂದು ಅಭಿನಂದನೆ ಹೇಳಲೇಬೇಕು.

click me!