Udupi: ವಿಧಾನಸಭೆ ಪ್ರೌಢಶಾಲೆಗಳ ಎಲ್ಲ ವಿದ್ಯಾರ್ಥಿಗಳಿಗೆ ಯಕ್ಷಗಾನ ಶಿಕ್ಷಣ

By Sathish Kumar KH  |  First Published Nov 29, 2022, 6:10 PM IST

ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಸಾಂಸ್ಕೃತಿಕ ಕ್ರಾಂತಿ
ಎಲ್ಲ ಹೈಸ್ಕೂಲ್ ಮಕ್ಕಳಿಗೆ ಯಕ್ಷಗಾನ ಕಲಿಕೆ
ಈವರೆಗೆ ಹತ್ತು ಸಾವಿರಕ್ಕೂ ಅಧಿಕ ಯುವ ಕಲಾವಿದರ ಸೃಷ್ಟಿ
ಯಕ್ಷಗಾನ ಪರಂಪರೆ ಉಳಿಸುವ ವಿಶೇಷ ಪ್ರಯತ್ನ


ಉಡುಪಿ (ನ.29) : ಶಿಕ್ಷಣ ಕ್ಷೇತ್ರದಲ್ಲೇ ಇದೊಂದು ಅಪರೂಪದ ಪ್ರಯೋಗ, ಸಂಸ್ಕೃತಿಯ ಮೂಲಕ ಶಿಕ್ಷಣ ನೀಡುವ ಪ್ರಯತ್ನ ಉಡುಪಿಯಲ್ಲಿ ನಡೆದಿದೆ. ಉಡುಪಿ ವಿಧಾನಸಭಾ ವ್ಯಾಪ್ತಿಯ ಎಲ್ಲಾ ಪ್ರೌಢಶಾಲೆಗಳಲ್ಲಿ ಯಕ್ಷಶಿಕ್ಷಣ ನೀಡಲಾಗುತ್ತಿದೆ. ಈ ವರ್ಷ ಸಾವಿರದ ಐನೂರಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರಬುದ್ಧ ಯಕ್ಷಗಾನ ಕಲಾವಿದರಾಗಿ ರೂಪುಗೊಂಡಿದ್ದಾರೆ.

ಉಡುಪಿ ವಿಧಾನಸಭಾ ಕ್ಷೇತ್ರದ ಹೈಸ್ಕೂಲ್ ಶಿಕ್ಷಣದ ಗುಣಮಟ್ಟದಲ್ಲಿ ಗಣನೀಯವಾದ ಬದಲಾವಣೆ ಕಾಣಬಹುದು. ಕಳೆದೊಂದು ದಶಕದಿಂದ ಈ ಪ್ರಗತಿ ಕಂಡು ಬಂದಿದ್ದು, ಕಾರಣ ಕುತೂಹಲಕಾರಿಯಾಗಿದೆ. ಕ್ಷೇತ್ರದ ಎಲ್ಲಾ ಪ್ರೌಢಶಾಲೆಗಳಲ್ಲಿ ತರಗತಿ ಮುಗಿದ ನಂತರ ಆಸಕ್ತ ವಿದ್ಯಾರ್ಥಿಗಳಿಗೆ ಯಕ್ಷಗಾನವನ್ನು ವಿಶೇಷ ಪಠ್ಯವಾಗಿ ಕಲಿಸಲಾಗುತ್ತಿದೆ. ರಾಜ್ಯದಲ್ಲೇ ಪ್ರಥಮ ಎಂಬಂತೆ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಹೀಗೊಂದು ಪ್ರಯೋಗ ನಡೆದಿದೆ. ಸುಮಾರು 30 ಕ್ಕೂ ಅಧಿಕ ಯಕ್ಷಗಾನ ಶಿಕ್ಷಕರು, ಸಾವಿರದ ಐನೂರಕ್ಕೂ ಅಧಿಕ ಮಕ್ಕಳಿಗೆ ಯಕ್ಷಗಾನ ಕಲಿಸುತ್ತಿದ್ದಾರೆ. ಇದು ಮಕ್ಕಳ ಕಲಿಕೆಯ ಮೇಲೆ ಅಚ್ಚರಿಯ ಪರಿಣಾಮ ಭೀರಿದೆ. ಈ ಮೌನಕ್ರಾಂತಿಯ ಪರಿಣಾಮ ಶಿಕ್ಷಣ ವ್ಯವಸ್ಥೆ ಯಲ್ಲಿ ಗಣನೀಯವಾಗಿ ಕಾಣಬಹುದಾಗಿದೆ.

Latest Videos

undefined

Udupi: ಯಕ್ಷ ಶಿಕ್ಷಣ ವಿದ್ಯಾರ್ಥಿಗಳಿಂದ ವೈಭವದ ಯಕ್ಷೋತ್ಸವ

30 ಶಿಕ್ಷಕರ ನಿಯೋಜನೆ:  ಎರಡು ತಾಸಿನ ಪ್ರಬುದ್ಧ ಪ್ರದರ್ಶನ ನೀಡುವಷ್ಟರ ಮಟ್ಟಿಗೆ ವಿದ್ಯಾರ್ಥಿಗಳು ತಯಾರಾಗಿದ್ದಾರೆ. 30 ಮಂದಿ ಶಿಕ್ಷಕರನ್ನು ಇದಕ್ಕಂತಲೇ ನಿಯೋಜಿಸಲಾಗಿದೆ. ಯಕ್ಷಶಿಕ್ಷಣ ಟ್ರಸ್ಟ್ ಮೂಲಕ ಸಂಪೂರ್ಣ ವ್ಯವಸ್ಥೆಯನ್ನು ನಿಯಂತ್ರಿಸಲಾಗುತ್ತಿದೆ.ಆಯಾ ಸಂದರ್ಭದಲ್ಲಿ ಅಧಿಕಾರದಲ್ಲಿರುವ ಶಾಸಕರು ಈ ಯೋಜನೆಯ ಅಧ್ಯಕ್ಷರಾಗಿ ಇರುತ್ತಾರೆ. ಜಾತಿ ಮತ, ಲಿಂಗ ಬೇಧವಿಲ್ಲದೆ ಎಲ್ಲಾ ವರ್ಗದ, ಎಲ್ಲಾ ಧರ್ಮದ ವಿದ್ಯಾರ್ಥಿಗಳು ಈ ಪಾರಂಪರಿಕ ಕಲೆಯನ್ನು ಅಭ್ಯಾಸ ಮಾಡುತ್ತಾರೆ. ಕನ್ನಡದ ಸಂಭಾಷಣೆಗಳನ್ನು ಅಸ್ಕಲಿತವಾಗಿ ಉಚ್ಛರಿಸುವ ಸಾಮಥ್ಯ ಮಕ್ಕಳಿಗೆ ಬಂದಿದೆ. ಭಾಷಾ ಶುದ್ದಿಯಾಗಿದೆ. 

10 ಸಾವಿರ ಯುವ ಕಲಾವಿದರ ತಯಾರು: ಈವರಗೆ ಹತ್ತು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ತರಬೇತಿ ಪಡೆದಿದ್ದಾರೆ. ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟದ ಮೇಲೂ ಯಕ್ಷಗಾನ ಕಲಿಕೆ ಪೂರಕ ಪರಿಣಾಮ ಭೀರಿದ್ದು ಈ ಸಾಂಸ್ಕೃತಿಕ ಅಭಿಯಾನದ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ಕಲಿಕೆಯ ಕಾರ್ಯಕ್ರಮವನ್ನು ವಿಸ್ತರಣೆ ಮಾಡುವ ಮೂಲಕ ಯಕ್ಷಗಾನ ಕಲೆಯನ್ನು ವ್ಯಾಪಕ ರೀತಿಯಲ್ಲಿ ಪ್ರಚಾರ ಮಾಡುವ ಉದ್ದೇಶವನ್ನು ಹೊಂದಲಾಗಿದೆ. ಈ ಮೂಲಕ ಕರ್ನಾಟಕದ ನೃತ್ಯವಾಗಿರುವ ಯಕ್ಷಗಾನಕ್ಕೆ ಮತ್ತಷ್ಟು ಮೆರುಗು ತರುವ ಪ್ರಯತ್ನ ಮಾಡಲಾಗುತ್ತಿದೆ.
 

click me!