ನಮ್ಮ ಪಾರ್ಟ್ನರ್ ಹೀಗೆ ಮಾಡಿದ್ದು ಆಘಾತವಾಗಿದೆ : ಶೋಭಾ ಕರಂದ್ಲಾಜೆ

By Web DeskFirst Published Nov 12, 2019, 2:47 PM IST
Highlights

ಕೆಲ ದಶಕಗಳಿಂದಲೂ ನಮ್ಮ ಮಿತ್ರರಾಗಿದ್ದ ಪಕ್ಷ ಹೀಗೆ ಮಾಡಿರುವುದು ಆಘಾತವಾಗಿದೆ ಎಂದು ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಲು ಸಾಧ್ಯವಾಗದಿರುವ ಬಗ್ಗೆ ಸಂಸದೆ ಶೋಭಾ ಕರಂದ್ಲಾಜೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಉಡುಪಿ (ನ.12): ಮಹಾರಾಷ್ಟ್ರದಲ್ಲಿ  ಸರ್ಕಾರ ರಚನೆ ಹೈ ಡ್ರಾಮಾ ಮುಂದುವರಿದಿದೆ. ಮಹುಮತ ಪಡೆದ ಬಿಜೆಪಿಗೆ ಸರ್ಕಾರ ರಚನೆ ಮಾಡಲು ಸಾಧ್ಯವಾಗದೆ ಇರುವುದಕ್ಕೆ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅಸಮಾಧಾನ ಹೊರಹಾಕಿದ್ದಾರೆ. 

ಉಡುಪಿಯಲ್ಲಿ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ,  288 ಸಂಖ್ಯಾಬಲದಲ್ಲಿ 105 ಸ್ಥಾನಗಳನ್ನು ಪಡೆದಿರುವ ಬಿಜೆಪಿಗೆ ಶಿವಸೇನೆ ಅಸಹಾಕಾರ ತೋರಿದ್ದು  ಸರ್ಕಾರ ರಚನೆ ಮಾಡಲು ಆಗುತ್ತಿಲ್ಲ ಎಂದರು.    

ಬಿಜೆಪಿ ಹಾಗೂ ಶಿವಸೇನೆ ನಡುವಿನ ಮೈತ್ರಿಯು ದಶಕಗಳಿಂದ ಇರುವಂತದ್ದು, ನಮ್ಮ ನಡುವೆ 30 ವರ್ಷಗಳಿಂದಲೂ ಕೊಡುಕೊಳ್ಳುವಿಕೆ ಪ್ರಕ್ರಿಯೆಗಳು ನಡೆಯುತ್ತಿವೆ. ನಾವು ಪಾರ್ಟ್ನರ್ ಗಳಾಗಿದ್ದೆವು. ಆದರೆ ಶಿವಸೇನೆ ಯಾಕೆ ಈ ರೀತಿಯಾಗಿ ನಡೆದುಕೊಳ್ಳುತ್ತಿದೆಯೋ ತಿಳಿದಿಲ್ಲ ಎಂದರು. 

ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಕ್ಷಣಗಣನೆ?: ಕಾನೂನು ಹೋರಾಟಕ್ಕೆ ಸೈ ಎಂದ ಶಿವಸೇನೆ!..

ಹಿಂದುತ್ವದ ಆಧಾರದಲ್ಲಿ ನಾವು ಜೊತೆಯಾಗಿ ಚುನಾವಣೆ ಎದುರಿಸಿದ್ದೇವೆ.  ಶಿವಸೇನೆಯು ಕಾಂಗ್ರೆಸ್ ಹಾಗೂ ಎನ್ ಸಿ ಪಿ ಜೊತೆ ಹೋಗಲು ನಿರ್ಧಾರ ಮಾಡಿದ್ದು ಬಾಳಾ ಠಾಕ್ರೆಗೆ ಮಾಡಿದ ಅವಮಾನ. ಅವರ ಉದ್ದೇಶಕ್ಕೆ ಮಾಡಿರುವ ಅವಮಾನ, ಇದರಿಂದ ಆಘಾತವಾಗಿದೆ. ಇನ್ನೂ ಅವಕಾಶ ಇದ್ದು ನಮ್ಮ ಜೊತೆಗೆ ಮುಂದುವರಿದರೆ ಒಳಿತು ಎಂದಿದ್ದಾರೆ. 

ಮಹಾ ಹೈ ಡ್ರಾಮಾ : ಶಿವಸೇನೆ ಭಾರೀ ಕನಸಿಗೆ ಮುಖಭಂಗ...

ಬಿಜೆಪಿ ಜೊತೆಗಿನ ಮೈತ್ರಿ ಮುರಿದುಕೊಂಡಿರುವ  ಶಿವಸೇನೆ ಕಾಂಗ್ರೆಸ್-NCP ಜೊತೆ ಸೇರಿ ಸರ್ಕಾರ ರಚನೆಗೆ ಆಸಕ್ತಿ ತೋರಿಸಿದ್ದು, ಬೆಂಬಲ ಪತ್ರ ಸಲ್ಲಿಸಲು ವಿಫಲವಾಗಿದೆ. ಅಲ್ಲದೇ ಹೆಚ್ಚಿನ ಸಮಯಾವಕಾಶ ನೀಡಲು ರಾಜ್ಯಪಾಲರು ನಿರಾಕರಿಸಿದ್ದು, ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಲಾಗಿದೆ. 

ಬಿಜೆಪಿ 105 ಸ್ಥಾನಗಳಲ್ಲಿ ಗೆಲುವು ಪಡೆದಿದ್ದರೆ, 56 ಸ್ಥಾನಗಳಲ್ಲಿ ಶಿವಸೇನೆ ಜಯಗಳಿಸಿದೆ. ಇನ್ನು NCP 54 ಸ್ಥಾನ, ಕಾಂಗ್ರೆಸ್ 44 ಸ್ಥಾನಗಳಲ್ಲಿ ಜಯಗಳಿಸಿವೆ. ಸರ್ಕಾರ ರಚನೆಗೆ 145 ಸ್ಥಾನಗಳ ಅವಶ್ಯಕತೆ ಇದೆ.

ನವೆಂಬರ್ 12ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!