ಕಾಂಗ್ರೆಸ್ ಮುಖ್ಯಂಡ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಉಡುಪಿಗೆ ಬಂದಾಗ ಕೃಷ್ಣಮಠಕ್ಕೆ ಒಮ್ಮೆಯೂ ಹೋಗಿಲ್ಲ, ಆದ್ದರಿಂದ ಕೃಷ್ಣನ ಶಾಪದಿಂದಲೇ ಅವರು ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಂಡರು ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಉಡುಪಿ (ಮಾ.15) : ಕಾಂಗ್ರೆಸ್ ಮುಖ್ಯಂಡ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಉಡುಪಿಗೆ ಬಂದಾಗ ಕೃಷ್ಣಮಠಕ್ಕೆ ಒಮ್ಮೆಯೂ ಹೋಗಿಲ್ಲ, ಆದ್ದರಿಂದ ಕೃಷ್ಣನ ಶಾಪದಿಂದಲೇ ಅವರು ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಂಡರು ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ(KS Eshwarappa) ಹೇಳಿದ್ದಾರೆ.
ಮಂಗಳವಾರ ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನಕನಿಗೂ ಕೃಷ್ಣನಿಗೂ ವಿಶೇಷ ಸಂಬಂಧ ಇದೆ, ಕೃಷ್ಣಮಠದಲ್ಲಿ ಭಕ್ತ ಕನಕದಾಸರ ಪುತ್ಥಳಿ ಇದೆ. ಕನಕದಾಸನಿಗೆ ಕೃಷ್ಣನಿಂದ ಸ್ಪೂರ್ತಿ ಸಿಕ್ಕಿತ್ತು. ಇಂತಹ ಕ್ಷೇತ್ರಕ್ಕೆ ಬಂದು ನಿಮ್ಮ ಪಾಪ ಕಳೆದುಕೊಳ್ಳಿ ಎಂದು ಸಿದ್ದರಾಮಯ್ಯ ಅವರಿಗೆ ಸಲಹೆ ಮಾಡಿದರು.
undefined
ದಿನಕ್ಕೆ ನಾಲ್ಕೈದು ಬಾರಿ ಕೂಗಿದ್ರೆ ಸಾರ್ವಜನಿಕರಿಗೆ ಕಿರಿಕಿರಿ: ಅಜಾನ್ ಬಗ್ಗೆ ಮತ್ತೆ ಹೇಳಿಕೆ ನೀಡಿದ ಈಶ್ವರಪ್ಪ!
ಸಿದ್ದರಾಮಯ್ಯರ(Siddaramaiah) ಮೇಲೆ ಪ್ರೀತಿಯಿಂದ ಈ ಮಾತನ್ನು ಹೇಳುತ್ತಿದ್ದೇನೆ, ಹೊರತು ರಾಜಕೀಯ ಉದ್ದೇಶದಿಂದ ಅಲ್ಲ, ‘ರಾಜಕೀಯ ಜೀವನ ಹಾಳಾಗಿ ಹೋಗ್ಲಿ, ವೈಯಕ್ತಿಕವಾಗಿ ಅವರಿಗೆ ಒಳ್ಳೆಯದಾಗಲಿ’ ಅಂತ ಹೇಳ್ತಿದ್ದೇನೆ ಎಂದರು.
ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ನನ್ನ ಕ್ಷೇತ್ರದ ಮಠ ಮಂದಿರಗಳಿಗೆ ಅನುದಾನ ನೀಡಿದ್ದರು. ನಾನು ಮಂತ್ರಿಯಾಗಿದ್ದಾಗ ಅವರ ಬೇಡಿಕೆಗಳನ್ನು ಸ್ಪಂದಿಸಿದ್ದೇನೆ. ನಮ್ಮಿಬ್ಬರ ನಡುವೆ ಸ್ನೇಹವಿದೆ ಚೆನ್ನಾಗಿದ್ದೇವೆ, ಅದಕ್ಕೆ ಸಲಹೆ ಮಾಡುತ್ತಿದ್ದೇನೆ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಆದರೆ, ಅವರು ನಮ್ಮ ಪಕ್ಷವನ್ನು, ಮೋದಿಯನ್ನು ಟೀಕಿಸಿದಾಗ ನಾನು ಯಾವ ಭಾಷೆ ಬಳಸಿದ್ದೇನೆ ನಿಮಗೆ ಗೊತ್ತು, ‘ಮೋದಿಯನ್ನು ನರಹಂತಕ ಎಂದು ಕರೆದರೆ ಬಿಡ್ತೀವಾ?’ ಎಂದು ಪ್ರಶ್ನಿಸಿದರು.
ಎಲ್ಲಾ ಮುಸ್ಲಿಮರ ಓಟು ಬೇಡ ಅಂದಿಲ್ಲ: ಈಶ್ವರಪ್ಪ