ಅನರ್ಹ ಶಾಸಕರು ಸಮಾಜ ರಕ್ಷಕರು ಎಂದ ಡಿಸಿಎಂ

By Kannadaprabha News  |  First Published Oct 25, 2019, 2:53 PM IST

ಅನರ್ಹ ಶಾಸಕರು ಸಮಾಜದ ರಕ್ಷಣೆಗೆ ಬಂದವರು ಎಂದು ಡಿಸಿಎಂ ಅಶ್ವಥ್ ನಾಯಾಯಣ್ ಹೇಳಿದ್ದಾರೆ. ಅನರ್ಹ ಶಾಸಕರಿಗೆ ಟಿಕೆಟ್ ಕೊಡುವ ಕುರಿತು ಡಿಸಿಎಂ ಏನು ಮಾತನಾಡಿದ್ದಾರೆ, ಅವರ ತೀರ್ಮಾನವೇನು ಎಂದು ತಿಳಿಯಲು ಈ ಸುದ್ದಿ ಓದಿ.


ಉಡುಪಿ(ಅ.25): ಅನರ್ಹ ಶಾಸಕರು ಸಮಾಜದ ರಕ್ಷಣೆಗೆ ಬಂದವರು ಎಂದು ಡಿಸಿಎಂ ಅಶ್ವಥ್ ನಾಯಾಯಣ್ ಹೇಳಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು, ಅನರ್ಹ ಶಾಸಕರಿಗೆ ಟಿಕೆಟ್ ಕೊಡುವ ಕುರಿತು ಪ್ರತಿಕ್ರಿಯಿಸಿದ್ದಾರೆ.

ವ್ಯಕ್ತಿಗತ ರಾಜಕೀಯಕ್ಕೆ ನಾವು ಒತ್ತು ಕೊಡುವುದಿಲ್ಲ. ಕೆಟ್ಟ ಸಮ್ಮಿಶ್ರ ಸರಕಾರವನ್ನು ಪತನಗೊಳಿಸಿದ್ದು ಅನರ್ಹ ಶಾಸಕರು. ಆ ಶಾಸಕರು ಸಮಾಜದ ರಕ್ಷಣೆಗೆ ಬಂದವರು ಎಂದಿದ್ದಾರೆ.

Latest Videos

undefined

ಡಿಕೆಶಿ ಬಿಡುಗಡೆಯಿಂದ ಎಲೆಕ್ಷನ್ ಮೇಲೆ ನೋ ಎಫೆಕ್ಟ್ ಎಂದ ಸಚಿವ

ಅನರ್ಹ ಶಾಸಕರು ಸತ್ಕಾರ್ಯ ಮಾಡಿದವರು. ಅವರು ಈವರೆಗೆ ಬಿಜೆಪಿ ಪಕ್ಷ ಸೇರಿಲ್ಲ. ಅವರಿಗೆ ಮಾನ್ಯತೆ ಸಿಗದೆ ಮತ್ಯಾರಿಗೆ ಸಿಗಬೇಕು ಎಂದು ಪ್ರಶ್ನಿಸಿದ್ದಾರೆ. ಅನರ್ಹ ಶಾಸಕರು ಪಕ್ಷಕ್ಕೆ ಸೇರ್ಪಡೆಯಾದ ನಂತರ ಯಾರಿಗೆ ಟಿಕೆಟ್ ಕೊಡಬೇಕು ಎನ್ನುವುದನ್ನು ಪಕ್ಷ ನಿರ್ಧರಿಸುತ್ತದೆ. ಪ್ರಕರಣ ಕೋರ್ಟ್‌ನಲ್ಲಿರುವುದರಿಂದ ಹೆಚ್ಚು ಮಾತನಾಡುವುದಿಲ್ಲ ಎಂದಿದ್ದಾರೆ.

ಟಿಪ್ಪು ಜಯಂತಿ ಆಚರಿಸುವುದಾಗಿ ಹೇಳಿರುವ ಶರತ್ ಬಚ್ಚೇಗೌಡ ಅವರ ಮಾತಿಗೆ ಪ್ರತಿಕ್ರಿಯಿಸಿ, ನಮ್ಮ ಪಕ್ಷದ ನಾಯಕರು, ಕಾರ್ಯಕರು ಟಿಪ್ಪು ಜಯಂತಿ ಆಚರಿಸಲ್ಲ. ನಮ್ಮ ಪಕ್ಷದಲ್ಲಿ ಇಲ್ಲದವರು ಟಿಪ್ಪು ಜಯಂತಿ ಆಚರಿಸ್ತಾರೆ. ಈ ಬಗ್ಗೆ ಬಿಜೆಪಿಗೆ ಸ್ಪಷ್ಟತೆ ಇದೆ ಎಂದಿದ್ದಾರೆ.

ಡಿಕೆಶಿ ಬಿಡುಗಡೆಗೆ ಹೆಚ್ಚಿನ ಮಹತ್ವ ಬೇಕಾಗಿಲ್ಲ: ಡಿಸಿಎಂ

click me!