ಬೆಳ್ಳಂಬೆಳಗ್ಗೆ ಭೀಕರ ಅವಘಡ : ಕಾರು ಪಲ್ಟಿಯಾಗಿ ಇಬ್ಬರು ಸಾವು

Published : Oct 21, 2019, 11:20 AM IST
ಬೆಳ್ಳಂಬೆಳಗ್ಗೆ ಭೀಕರ ಅವಘಡ : ಕಾರು ಪಲ್ಟಿಯಾಗಿ ಇಬ್ಬರು ಸಾವು

ಸಾರಾಂಶ

ಬೆಳ್ಳಂಬೆಳಗ್ಗೆ ಕಾರೊಂದು ಪಲ್ಟಿಯಾಗಿದ್ದು ಇಬ್ಬರು ಸ್ಥಳದಲ್ಲೇ ಸಾವಿಗೀಡಾದ ಘಟನೆ ತುಮಕೂರಿನಲ್ಲಾಗಿದೆ.

ತುಮಕೂರು (ಅ.21): ಬೆಳ್ಳಂಬೆಳಗ್ಗೆ ಕಾರು ಪಲ್ಟಿಯಾಗಿ ಇಬ್ಬರು ಯುವಕರು ಸ್ಥಳದಲ್ಲೇ ಸಾವಿಗೀಡಾದ ಘಟನೆ ತುಮಕೂರಿನಲ್ಲಿ ನಡೆದಿದೆ. 

ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಜೆಸಿ ಪುರದ ಬಳಿ ಅವಘಡ ಸಂಭವಿಸಿದ್ದು, ದರ್ಶನ್ [21], ಭರತ್ [23] ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮೃತರಿಬ್ಬರೂ ಚಿಕ್ಕನಾಯಕನಹಳ್ಳಿಯ ಹುಳಿಯಾರಿನವರೆನ್ನಲಾಗಿದೆ. ಮೈಸೂರಿನಿಂದ ಮದುವೆ ಕಾರ್ಯಕ್ರಮ ಮುಗಿಸಿ ವಾಪಸಾಗುತ್ತಿದ್ದ ವೇಳೆ ಈ ದುರ್ಘಟನೆಯಾಗಿದೆ. 

ಚಿಕ್ಕನಾಯಕನಹಳ್ಳಿ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. 

PREV
click me!

Recommended Stories

ಕರ್ನಾಟಕಕ್ಕೆ ವಂದೇ ಭಾರತ್ ಸ್ಲೀಪರ್, ಬುಲೆಟ್ ಟ್ರೈನ್: ಹೈದರಾಬಾದ್‌ಗೆ ಕೇವಲ 2 ಗಂಟೆ, ಚೆನ್ನೈಗೆ 75 ನಿಮಿಷ ಅಷ್ಟೇ!
ಬೆಂಗಳೂರು ಮುಂಬೈ ನಡುವೆ ಹೊಸ ದ್ವಿಸಾಪ್ತಾಹಿಕ ಎಕ್ಸಪ್ರೆಸ್‌ ರೈಲು ಆರಂಭ, ಸಚಿವ ಜೋಶಿ ಚಾಲನೆ, ವೇಳಾಪಟ್ಟಿ ಇಲ್ಲಿದೆ